Budget Bikes: ಹೊಸ ಬೈಕ್ ಖರೀದಿಸುವವರ ಗಮನಕ್ಕೆ, ಇಲ್ಲಿದೆ ನೋಡಿ ಅಗ್ಗದ ಬೆಲೆಯ 75 Km ಮೈಲೇಜ್ ಕೊಡುವ 5 ಬೈಕ್.

80 ಸಾವಿರ ಬೆಲೆಯಲ್ಲಿ ಲಭ್ಯವಾಗುವಂತ ಜನಪ್ರಿಯ ಕಂಪನಿಗಳ ಬೈಕ್ ನ ಬಗ್ಗೆ ವಿವರ.

Best Bike Under 80,000: ಮಾರುಕಟ್ಟೆಯಲ್ಲಿ ವಿಭಿನ್ನ ಮಾದರಿಯ ವಾಹನಗಳು ಪರಿಚಯವಾಗುತ್ತಲೇ ಇರುತ್ತದೆ. ಮಾರುಕಟ್ಟೆಯಲ್ಲಿ ಹೆಚ್ಚಾಗಿ ಬೈಕ್ ಗಳು ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತದೆ. ದೇಶದ ವಿವಿಧ ದ್ವಿಚಕ್ರ ವಾಹನ ತಯಾರಕ ಕಂಪನಿಗಳು ಸಾಕಷ್ಟು ಮಾದರಿಯ ಬೈಕ್ ಗಳನ್ನೂ ಪರಿಚಯಿಸುತ್ತ ಗ್ರಾಹಕರಿಗೆ ಹೊಸ ಹೊಸ ಆಯ್ಕೆಯನ್ನು ನೀಡುತ್ತಿರುತ್ತವೆ.

ಇನ್ನು ಗ್ರಾಹಕರು ಬೈಕ್ ಗಳನ್ನೂ ಖರೀದಿಸುವಾಗ ಹೆಚ್ಚಾಗಿ ಮೈಲೇಜ್ ಹಾಗು ಬಜೆಟ್ ಬಗ್ಗೆ ಗಮನ ಹರಿಸುತ್ತಾರೆ. ತಮ್ಮ ಬಜೆಟ್ ಬೆಲೆಯಲ್ಲಿ ಹೆಚ್ಚಿನ ಮೈಲೇಜ್ ನೀಡುವ ಬೈಕ್ ಯಾವುದಿದೆ ಎನ್ನುವ ಬಗ್ಗೆ ಹುಡುಕಾಟ ನಡೆಸುತ್ತಾರೆ. ಇದೀಗ ನಾವು 80 ಸಾವಿರ ಬೆಲೆಯಲ್ಲಿ ಲಭ್ಯವಾಗುವಂತ ಜನಪ್ರಿಯ ಕಂಪನಿಗಳ ಬೈಕ್ ನ ಬಗ್ಗೆ ವಿವರಗಳನ್ನು ನೋಡುತ್ತಾ ಹೋಗೋಣ. ಹೊಸ ಬೈಕ್ ಖರೀದಿಸುವ ಯೋಜನೆ ಹಾಕಿಕೊಂಡವರಿಗೆ ಈ ಮಾಹಿತಿ ಉಪಯುಕ್ತವಾಗಲಿದೆ.

Bajaj Platina 100
Image Credit: Original Source

*Bajaj Platina 100
ಬಜಾಜ್ ಪ್ಲಾಟಿನಾ 100 ರೂ.67,808 ಆರಂಭಿಕ ಬೆಲೆಯಲ್ಲಿ ಲಭ್ಯವಿದೆ. ಈ ಬೈಕ್ ಸುಮಾರು 70 ಕಿ.ಮೀ ಮೈಲೇಜ್ ಹೊಂದಿದೆ. ಇದು 7500 rpm ನಲ್ಲಿ 5.8 kW (7.9 PS) ಮತ್ತು 8.3 Nm @ 5500 rpm ನ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ 110 cc 4-ಸ್ಟ್ರೋಕ್, DTI-I, ಸಿಂಗಲ್ ಸಿಲಿಂಡರ್‌ ನಿಂದ ಚಾಲಿತವಾಗಿದೆ. ಬಜಾಜ್ ಪ್ಲಾಟಿನಾ 100 ಕಪ್ಪು ಮತ್ತು ನೀಲಿ, ಕಪ್ಪು ಮತ್ತು ಚಿನ್ನ, ಕಪ್ಪು ಮತ್ತು ಬೆಳ್ಳಿ, ಕಪ್ಪು, ಕೆಂಪು, ಕಪ್ಪು ಮತ್ತು ಕೆಂಪು ಬಣ್ಣಗಳಲ್ಲಿ ಲಭ್ಯವಿದೆ.

TVS Sport Bike Price
Image Credit: Original Source

*TVS Sport
ಟಿವಿಎಸ್ ಸ್ಪೋರ್ಟ್ ಎಕ್ಸ್ ಶೋ ರೂಂ ಬೆಲೆ 59,431 ರೂ. ಆಗಿದ್ದು, ಇದು ಸಿಂಗಲ್ ಸಿಲಿಂಡರ್, 4 ಸ್ಟ್ರೋಕ್, ಫ್ಯೂಯಲ್ ಇಂಜೆಕ್ಷನ್, ಏರ್ ಕೂಲ್ಡ್ ಸ್ಪಾರ್ಕ್ ಇಗ್ನಿಷನ್ ಎಂಜಿನ್ ಹೊಂದಿದೆ. ಟಿವಿಎಸ್ ಸ್ಪೋರ್ಟ್ ಗಂಟೆಗೆ 90 ಕಿಮೀ ವೇಗವನ್ನು ಹೊಂದಿದೆ. ಟಿವಿಎಸ್ ಸ್ಪೋರ್ಟ್ ಕಪ್ಪು ನೀಲಿ, ಕಪ್ಪು ಕೆಂಪು, ಬಿಳಿ ನೇರಳೆ ಮತ್ತು ಮೆಟಾಲಿಕ್ ನೀಲಿ ನಾಲ್ಕು ಬಣ್ಣಗಳಲ್ಲಿ ಲಭ್ಯವಿದೆ.

Hero HF Deluxe Bike Price
Image Credit: Original Source

*Hero HF Deluxe
Hero Motocross HF Deluxe ಬೈಕ್ ಬೆಲೆ 62,862 ರೂ. ಆಗಿದೆ. ಈ ಬೈಕ್ ಸುಮಾರು 65 ರಿಂದ 70 ಕಿಲೋಮೀಟರ್ ಮೈಲೇಜ್ ನೀಡುತ್ತದೆ. ಬೈಕ್ ಏರ್ ಕೂಲ್ಡ್, 4-ಸ್ಟ್ರೋಕ್, ಸಿಂಗಲ್ ಸಿಲಿಂಡರ್, OHC ಎಂಜಿನ್‌ ನಿಂದ ಚಾಲಿತವಾಗಿದ್ದು ಅದು 5.9 kW @ 8000 rpm ಮತ್ತು 8.05 Nm @ 6000 rpm ನ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

Join Nadunudi News WhatsApp Group

Hero Splendor Plus
Image Credit: Original Source

*Hero Splendor Plus
ಹೀರೋ ಸ್ಪ್ಲೆಂಡರ್ ಪ್ಲಸ್ ಅದರ ಮೈಲೇಜ್ ಮತ್ತು ಬೆಲೆಯ ವಿಷಯವಾಗಿ ಹೆಚ್ಚು ಜನಪ್ರಿಯತೆ ಪಡೆದಿದೆ. ಹೀರೋ ಸ್ಪ್ಲೆಂಡರ್‌ನ ಆರಂಭಿಕ ಎಕ್ಸ್ ಶೋ ರೂಂ ಬೆಲೆ 75,141 ರೂ. ಆಗಿದ್ದು, ಈ ಬೈಕ್ ಸುಮಾರು 60 ರಿಂದ 65 ಕಿಲೋಮೀಟರ್ ಲೀಟರ್ ಮೈಲೇಜ್ ನೀಡುತ್ತದೆ.

Honda Shine 100 Bike Price
Image Credit: Bike wale

*Honda Shine 100
ನೂತನ ಮಾದರಿಯ Honda Shine 100 ಬೈಕ್ ನಲ್ಲಿ 98.99 cc ಎಂಜಿನ್ ಅನ್ನು ಅಳವಡಿಸಲಾಗಿದ್ದು, ಈ ಎಂಜಿನ್ ಪ್ರತಿ ಲೀಟರ್ ಗೆ 65 ಕಿಲೋಮೀಟರ್ ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ. ಮಾರುಕಟ್ಟೆಯಲ್ಲಿ Honda Shine 100 ಕೇವಲ 64,900 ರೂ. ಗಳಲ್ಲಿ ಲಭ್ಯವಾಗಲಿದೆ.

Join Nadunudi News WhatsApp Group