Family Car: ಟೊಯೊಟಾ, ಮಾರುತಿ ಸುಜುಕಿಯ ಫ್ಯಾಮಿಲಿ ಕಾರ್ ನಲ್ಲಿ ಯಾವುದು ಬೆಸ್ಟ್ .

ಕುಟುಂಬದ ಪ್ರಯಾಣಕ್ಕಾಗಿ ಈ ಎರಡು ಕಾರ್ ಗಳು ಉತ್ತಮ ಆಯ್ಕೆ

Best Family Car: ಭಾರತೀಯ ಮಾರುಕಟ್ಟೆಯಲ್ಲಿ 7 ಆಸನಗಳ ಕಾರುಗಳಿಗೆ ಬೇಡಿಕೆ ವೇಗವಾಗಿ ಹೆಚ್ಚಿದೆ. ಈ ವಿಭಾಗದಲ್ಲಿ Maruti ಹಾಗೂ Toyota ಮಾದರಿಯ ಕಾರ್ ಗಳು ಸಾಕಷ್ಟು ಜನಪ್ರಿಯವಾಗಿದೆ. ದೇಶದ ಮಾರುಕಟ್ಟೆಯಲ್ಲಿ ಈ ಮಾದರಿಗಾಲಿಗೆ ಹೆಚ್ಚಿನ ಬೇಡಿಕೆಯಿದೆ. ಕಂಪನಿಯು CNG ರೂಪಾಂತರವನ್ನು ಸಹ ಮಾರುಕಟ್ಟೆಯಲ್ಲಿ ಪರಿಚಯಿಸಿದೆ. ದೊಡ್ಡ ಕುಟುಂಬ ಹೊಂದಿರುವವರು Family ಕಾರ್ ಖರೀದಿಸಲು ಬಯಸುತ್ತರೆ. ನಿಮ್ಮ ಕುಟುಂಬದ ಪ್ರಯಾಣಕ್ಕಾಗಿ ಈ ಎರಡು ಕಾರ್ ಗಳು ಉತ್ತಮ ಆಯ್ಕೆ ಎನ್ನಬಹುದು.

Toyota Rumion Car Price And Feature
Image Credit: Carandbikemarathi

Toyota Rumion
ಮಾರುಕಟ್ಟೆಯಲ್ಲಿ ಟೊಯೋಟಾ ಎರಡು ಎಂಜಿನ್ ರೂಪಾಂತರದಲ್ಲಿ Toyota Rumion ಮಾದರಿಯನ್ನು ಬಿಡುಗಡೆ ಮಾಡಿದೆ. ಟೊಯೋಟಾ ರೂಮಿಯಾನ್ ಕಾರ್ ನಲ್ಲಿ ಶಕ್ತಿಯುತ ಎಂಜಿನ್ ಅನ್ನು ಅಳವಡಿಸಲಾಗಿದ್ದು, 1 .5 ಲೀಟರ್ K-ಸರಣಿಯ ಎಂಜಿನ್ ಅನ್ನು ಪಡೆಯಬಹುದಾಗಿದೆ. ಈ ಎಂಜಿನ್ 103 bhp ಗರಿಷ್ಟ ಶಕ್ತಿಯೊಂದಿಗೆ 138 Nm ನ ಗರಿಷ್ಟ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಟೊಯೋಟಾ ರೂಮಿಯಾನ್ ಕಾರ್  ನಲ್ಲಿ 7 ಆಸನಗಳನ್ನು ಅಳವಡಿಸಲಾಗಿದ್ದು ಪೆಟ್ರೋಲ್ ಮಾದರಿಯಲ್ಲಿ ಪ್ರತಿ ಲೀಟರ್ ಗೆ 20 ಕೀ.ಮೀ ಗರಿಷ್ಟ ಮೈಲೇಜ್ ನೀಡಲಿದೆ. ಇನ್ನು ಈ MPV ನಲ್ಲಿ ಜೈವಿಕ ಇಂಧನ CNG ರೂಪಾಂತರವನ್ನು ಅಳವಡಿಸಿದೆ. ಟೊಯೋಟಾ ರೂಮಿಯಾನ್ CNG ರೂಪಾಂತರವು ಪ್ರತಿ ಕೆಜಿಗೆ 26 ಕಿಲೋಮೀಟರ್ ಮೈಲೇಜ್ ನೀಡಲಿದೆ. ಇನ್ನು ಟೊಯೋಟಾ ರೂಮಿಯಾನ್ ಕಾರ್ ನ ಬೆಲೆಯ ಬಗ್ಗೆ ಹೇಳುವುದಾದರೆ ಮಾರುಕಟ್ಟೆಯಲ್ಲಿ ಇದರ ಎಕ್ಸ್ ಶೋ ರೂಮ್ ಬೆಲೆ 10.29 ರಿಂದ 13.68 ಲಕ್ಷ ಆಗಿದೆ.

Maruti Ertiga Feature
Image Credit: Carandbike

Maruti Ertiga Car
ಮಾರುತಿ ಇದೀಗ ಗ್ರಾಹಕರಿಗೆ ಇಷ್ಟವಾಗುವ ರೀತಿಯಲ್ಲಿ Maruti Ertiga Car ಅನ್ನು ಪರಿಚಯಿಸಿದೆ. Maruti Ertiga ಕಾರಿನಲ್ಲಿ 1.5 ಲೀಟರ್ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ ಗರಿಷ್ಠ 103 bhp ಪವರ್ ಜೊತೆಗೆ 136 nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರಲ್ಲಿ ಕಂಪನಿಯು 5- ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಮತ್ತು 6 -ಸ್ಪೀಡ್ ಟಾರ್ಕ್ ಪರಿವರ್ತಕ ಘಟಕವನ್ನು ನೀಡುತ್ತದೆ. ಈ ಎಂಜಿನ್ 5- ಸ್ಪೀಡ್ ಗೇರ್ ಬಾಕ್ಸ್ ಅನ್ನು ಹೊಂದಿದೆ.

ಇನ್ನು 87 ಬಿ ಹೆಚ್ ಪಿ ಪವರ್ ಮತ್ತು 121 .5 ಏನ್ ಎಂ ಟರ್ಕ್ ಅನ್ನು ಉತ್ಪಾದಿಸುತ್ತದೆ. ಈ ಕಾರಿನಲ್ಲಿ ಕಂಪನಿಯು ವಿಭಿನ್ನ ಮೈಲೇಜ್ ಅನ್ನು ಒದಗಿಸುತ್ತದೆ. 1.5 ಲೀಟರ್ ಪೆಟ್ರೋಲ್ ರೂಪಾಂತರದಲ್ಲಿ ನೀವು 20.51 kmpl ಮತ್ತು ಸಿಎನ್ ಜಿ ರೂಪಾಂತರದಲ್ಲಿ 27 kmpl ಮೈಲೇಜ್ ಅನ್ನು ಪಡೆಯಬಹುದು. ಮಾರುತಿ ಸುಜುಕಿ ಎರ್ಟಿಗಾ ಬೆಲೆಗಳು LXi (೦) MT ವೆರಿಯಂಟ್ ಗೆ 8,64,000 ರೂಪಾಯಿಗಳಿಂದ ಪ್ರಾರಂಭವಾಗುತ್ತವೆ ಮತ್ತು ಟಾಪ್ ಟ್ರಿಮ್ ZXi ಪ್ಲಸ್ AT ಗೆ 13,08,000 ರೂಪಾಯಿ ಆಗಿದೆ.

Join Nadunudi News WhatsApp Group

Join Nadunudi News WhatsApp Group