Bhagyalakshmi Yojana: ರಾಜ್ಯದ ಪ್ರತಿ ಹೆಣ್ಣು ಮಗುವಿಗೆ ಸಿಗಲಿದೆ 2 ಲಕ್ಷ ರೂ, ಹೆಣ್ಣು ಮಕ್ಕಳಿಗಾಗಿ ಇನ್ನೊಂದು ಯೋಜನೆ ಜಾರಿ

ಈ ಯೋಜನೆಯಡಿ ನಿಮ್ಮ ಮಗಳ ಭವಿಷ್ಯಕ್ಕೆ ಸಿಗಲಿದೆ 2 ಲಕ್ಷ ರೂ

Bhagyalakshmi Yojana Latest Update: ಹೆಣ್ಣುಮಕ್ಕಳಿಗಾಗಿ ಈಗಾಗಲೇ ರಾಜ್ಯ ಮತ್ತು ಕೇಂದ್ರ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿವೆ. ಹೆಣ್ಣುಮಕ್ಕಳ ಭವಿಷ್ಯಕ್ಕೆ ಆರ್ಥಿಕವಾಗಿ ಸ್ಥಿರತೆ ಕಾಣಲು ವಿವಿಧ ಯೋಜನೆಗಳು ಸಹಕಾರಿಯಾಗುತ್ತವೆ.

ಇನ್ನು ರಾಜ್ಯ ಸರ್ಕಾರ ಹೆಣ್ಣು ಮಕ್ಕಳ ಅಭಿವೃದ್ದಿಗಾಗಿ ಪರಿಚಯಿಸಿರುವ ಯೋಜನೆಗಳಲ್ಲಿ “ಭಾಗ್ಯಲಕ್ಷ್ಮಿ ಯೋಜನೆ” ಕೂಡ ಒಂದಾಗಿದೆ. ಈ ಯೋಜನೆಯಡಿ ನೀವು ನಿಮ್ಮ ಮಗಳ ಭವಿಷ್ಯಕ್ಕೆ ಲಕ್ಷ ಲಕ್ಷ ಲಾಭವನ್ನು ಪಡೆಯಬಹುದು.

Bhagyalakshmi Scheme 2024
Image Credit: Informal News

ಹೆಣ್ಣುಮಕ್ಕಳಿಗಾಗಿ ಬಂಪರ್ ಯೋಜನೆ ಜಾರಿ
ಮಕ್ಕಳ ಭವಿಷ್ಯಕ್ಕಾಗಿ ಭಾಗ್ಯಲಕ್ಷ್ಮಿ ಯೋಜನೆಯಾ ಹೂಡಿಕೆ ಉತ್ತಮ ಎನ್ನಬಹದು. ಹೆಣ್ಣು ಮಗುವಾದ ತಕ್ಷಣ ಈ ಯೋಜನೆಯನ್ನು ಮಾಡಬಹುದು. ಮಗು ಜನಿಸಿದಾಗ ರೂ. 50,000 ಬಾಂಡ್ ನೀಡಲಾಗುವುದು. ಅಲ್ಲದೆ ವಿವಿಧ ಹಂತಗಳಲ್ಲಿ ಹೆಣ್ಣು ಮಗುವನ್ನು ಬೆಳೆಸಲು ಸಹಾಯವು ಸಹ ಸರ್ಕಾರದಿಂದ ಲಭ್ಯವಿದೆ. ಜನರಲ್ಲಿ ನಡೆಯುತ್ತಿರುವ ಹೆಣ್ಣು ಭ್ರೂಣ ಹತ್ಯೆ ತಡೆಯಲು ಹಾಗೂ ಹೆಣ್ಣು ಮಗು ಚೆನ್ನಾಗಿ ಬೆಳೆಯಲು ರಾಜ್ಯ ಸರ್ಕಾರ ಈ ಯೋಜನೆ ಜಾರಿಗೊಳಿಸಿದೆ.

ಮಗು ಜನಿಸಿದ ನಂತರ ಮಗುವಿಗೆ 50 ಸಾವಿರ ರೂಪಾಯಿ ಬಾಂಡ್ ನೀಡಲಾಗುತ್ತದೆ. ಹೀಗಾಗಿ 21 ವರ್ಷ ತುಂಬಿದ ಪ್ರತಿ ಹೆಣ್ಣು ಮಗುವಿಗೆ 2 ಲಕ್ಷ ರೂಪಾಯಿ ನೀಡಲಾಗುವುದು. ಇದರಿಂದ ವಿವಿಧ ಹಂತದಲ್ಲಿರುವ ಹೆಣ್ಣು ಮಕ್ಕಳು ಭಾಗ್ಯಲಕ್ಷ್ಮಿ ಯೋಜನೆಯ ಸೌಲಭ್ಯ ಪಡೆಯಲು ಸಾಧ್ಯವಾಗುತ್ತದೆ. ಮಗಳ ಶಿಕ್ಷಣ ಅಥವಾ ಮದುವೆಗಾಗಿ ಈ ಯೋಜನೆಯಡಿ ಬರುವ ಲಾಭದ ಹಣವನ್ನು ಉಪಯೋಗಿಸಿಕೊಳ್ಳಬಹುದು.

Bhagyalakshmi Yojana Latest Update
Image Credit: Kannada News Today

ಭಾಗ್ಯಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹತೆಗಳೇನು..?
•ಅರ್ಜಿದಾರರು ಭಾರತದ ನಾಗರಿಕರಾಗಿರಬೇಕು.

Join Nadunudi News WhatsApp Group

•ನಿಮ್ಮ ವಾರ್ಷಿಕ ಆದಾಯ 2 ಲಕ್ಷಕ್ಕಿಂತ ಕಡಿಮೆ ಇರಬೇಕು.

•ನಿಮ್ಮ ಮಗಳು 18 ವರ್ಷ ತುಂಬುವ ಮೊದಲು ಮದುವೆಯಾಗಬಾರದು.

•ಹೆಣ್ಣು ಮಗು ಜನಿಸಿದಾಗ ಅಂಗನವಾಡಿ ಕೇಂದ್ರಕ್ಕೆ ಬಂದು ನೋಂದಣಿ ಮಾಡಿಕೊಳ್ಳಬೇಕು.

•ಮಾರ್ಚ್ 31, 2006 ರ ನಂತರ ಜನಿಸಿದ ರಾಜ್ಯದ ಎಲ್ಲಾ ಹೆಣ್ಣುಮಕ್ಕಳು ಈ ಯೋಜನೆಯ ಪ್ರಯೋಜನವನ್ನು ಪಡೆಯಬಹುದು.

•ಒಂದು ಕುಟುಂಬದಲ್ಲಿ ಇಬ್ಬರು ಹೆಣ್ಣು ಮಕ್ಕಳಿಗೆ ಈ ಸೌಲಭ್ಯ ಸಿಗಲಿದೆ.

Bhagyalakshmi Yojana Profit
Image Credit: Thebegusarai

ಈ ದಾಖಲೆ ಇದ್ದರೆ ಮಾತ್ರ ಅರ್ಜಿ ಸಲ್ಲಿಸಲು ಸಾಧ್ಯ
*ಮಗುವಿನ ಪೋಷಕರ ಆಧಾರ್ ಕಾರ್ಡ್

*ವಿಳಾಸ ಪುರಾವೆ

*ಕಾಸ್ಟ್ ಸರ್ಟಿಫಿಕೇಟ್

*ಆದಾಯ ಪ್ರಮಾಣಪತ್ರ

*ತಂದೆ ಮತ್ತು ತಾಯಿಯ ಪಾಸ್‌ ಪೋರ್ಟ್ ಅಳತೆಯ ಭಾವಚಿತ್ರ

*ಹೆಣ್ಣು ಮಗುವಿನ ಜನನ ಪ್ರಮಾಣಪತ್ರ

*ದೂರವಾಣಿ ಸಂಖ್ಯೆ

*ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ

Join Nadunudi News WhatsApp Group