Bhagyalakshmi: 5 ಗ್ಯಾರೆಂಟಿ ಕಾರಣ ರಾಜ್ಯದಲ್ಲಿ ರದ್ದಾಗಲಿದೆ ಇನ್ನೊಂದು ಯೋಜನೆ, ಸ್ಪಷ್ಟನೆ ನೀಡಿದ ಸರ್ಕಾರ

ರಾಜ್ಯದಲ್ಲಿ ರದ್ದಾಗುತ್ತ ಭಾಗ್ಯಲಕ್ಷ್ಮಿ ಯೋಜನೆ...? ಸ್ಪಷ್ಟನೆ ನೀಡಿದ ಲಕ್ಷ್ಮಿ ಹೆಬ್ಬಾಳ್ಕರ್

Bhagyalakshmi Yojana Latest Update: ಹೆಣ್ಣುಮಕ್ಕಳಿಗಾಗಿ ಈಗಾಗಲೇ ರಾಜ್ಯ ಮತ್ತು ಕೇಂದ್ರ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿವೆ. ಹೆಣ್ಣುಮಕ್ಕಳ ಭವಿಷ್ಯಕ್ಕೆ ಆರ್ಥಿಕವಾಗಿ ಸ್ಥಿರತೆ ಕಾಣಲು ವಿವಿಧ ಯೋಜನೆಗಳು ಸಹಕಾರಿಯಾಗುತ್ತವೆ. ಇನ್ನು ರಾಜ್ಯ ಸರ್ಕಾರ ಹೆಣ್ಣು ಮಕ್ಕಳ ಅಭಿವೃದ್ದಿಗಾಗಿ ಪರಿಚಯಿಸಿರುವ ಯೋಜನೆಗಳಲ್ಲಿ “ಭಾಗ್ಯಲಕ್ಷ್ಮಿ ಯೋಜನೆ” ಕೂಡ ಒಂದಾಗಿದೆ.

ಈ ಯೋಜನೆಯಡಿ ನೀವು ನಿಮ್ಮ ಮಗಳ ಭವಿಷ್ಯಕ್ಕೆ ಲಕ್ಷ ಲಕ್ಷ ಲಾಭವನ್ನು ಪಡೆಯಬಹುದಾಗಿದೆ. ಸದ್ಯ ಭಾಗ್ಯಲಕ್ಷ್ಮಿ ಯೋಜನೆ ರದ್ದಾಗುತ್ತದೆ ಎನ್ನುವ ಬಗ್ಗೆ ಸುದ್ದಿ ಕೇಳಿಬಂದಿತ್ತು. ಇದೀಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಭಾಗ್ಯಲಕ್ಷ್ಮಿ ಯೋಜನೆಯ ರದ್ದತಿಯ ಬಗ್ಗೆ ಮಾಹಿತಿ ನೀಡಿದ್ದಾರೆ.

Bhagyalakshmi Scheme In Karnataka
Image Credit: Informal News

ರಾಜ್ಯದಲ್ಲಿ ರದ್ದಾಗುತ್ತ ಭಾಗ್ಯಲಕ್ಷ್ಮಿ ಯೋಜನೆ…!
ಬಡತನ ರೇಖೆಗಿಂತ ಕೆಳಗಿರುವ ಕುಟುಂಬದಲ್ಲಿ ಜನಿಸಿದ ಹೆಣ್ಣು ಮಗುವನ್ನು ಸಬಲೀಕರಣಗೊಳಿಸುವ ಮತ್ತು ಆರ್ಥಿಕ ಸಹಾಯದ ಮೂಲಕ ಸ್ವಾವಲಂಬಿಯಾಗಿಸುವ ಯೋಜನೆ ಇದಾಗಿದೆ. 2006ರಿಂದ ಈ ಯೋಜನೆ ಜಾರಿಯಲ್ಲಿದೆ. ಹೆಣ್ಣು ಮಕ್ಕಳ ಭವಿಷ್ಯದ ಆಶಾಕಿರಣವಾಗಿರುವ ‘ಭಾಗ್ಯಲಕ್ಷ್ಮಿ ಯೋಜನೆ’ಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ವಿಧಾನ ಪರಿಷತ್ತಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

ಸುಕನ್ಯಾ ಸಮೃದ್ಧಿ ಖಾತೆ ಯೋಜನೆಯಡಿ ಜಾರಿಯಾಗಲಿದೆ
ಸುಕನ್ಯಾ ಸಮೃದ್ಧಿ ಯೋಜನೆ ಕೇಂದ್ರ ಸರ್ಕಾರದದ್ದೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಇದು ಕೇಂದ್ರ ಸರ್ಕಾರದ ಸುಕನ್ಯಾ ಸಮೃದ್ಧಿ ಯೋಜನೆ ಅಲ್ಲ. ಇದು ರಾಜ್ಯ ಸರ್ಕಾರದ ಪ್ರತ್ಯೇಕ ಯೋಜನೆಯಾಗಿದೆ. ಇತ್ತೀಚೆಗೆ ನಮ್ಮ ಸರ್ಕಾರ ಈ ಯೋಜನೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ ಎಂದು ಹೇಳಿದರು. ಭಾಗ್ಯಲಕ್ಷ್ಮಿ ಯೋಜನೆಯಡಿ ಈ ಹಿಂದೆ ಹೆಣ್ಣು ಮಗುವಿನ ಹೆಸರಿನಲ್ಲಿ ಬಾಂಡ್‌ ಗಳನ್ನು ನೀಡಲಾಗುತ್ತಿತ್ತು.

Bhagyalakshmi Yojana Latest Updates
Image Credit: Thebegusarai

ಆದರೆ ಈಗ ಮಗುವಿನ ಹೆಸರಿನಲ್ಲಿ ವಾರ್ಷಿಕ 3000 ರೂ.ನಂತೆ 15 ವರ್ಷಗಳವರೆಗೆ ಒಟ್ಟು 45,000 ರೂ. ಗಳನ್ನೂ ಅಂಚೆ ಇಲಾಖೆಯ ಸುಕನ್ಯಾ ಸಮೃದ್ಧಿ ಖಾತೆ ಯೋಜನೆಯಡಿ ಹೂಡಿಕೆ ಮಾಡಲಾಗುತ್ತದೆ ಎಂದಿದ್ದಾರೆ. ಮಗುವಿಗೆ 21 ವರ್ಷಗಳು ಪೂರ್ಣಗೊಂಡ ನಂತರ ಅಂದಾಜು ಮೆಚ್ಯೂರಿಟಿ ಮೊತ್ತವನ್ನು ನೀಡಲಾಗುತ್ತದೆ. ಅಷ್ಟೇ ಅಲ್ಲ, 18 ವರ್ಷ ಪೂರ್ಣಗೊಂಡ ನಂತರ ಉನ್ನತ ಶಿಕ್ಷಣಕ್ಕಾಗಿ ಖಾತೆಯಲ್ಲಿರುವ ಶೇ.50 ರಷ್ಟು ಮೊತ್ತವನ್ನು ಹಿಂಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

Join Nadunudi News WhatsApp Group

Join Nadunudi News WhatsApp Group