Bharat Brand: ಇನ್ಮುಂದೆ ಕೇಂದ್ರದಿಂದ ಅಗ್ಗದ ಬೆಲೆಗೆ ಸಿಗಲಿದೆ ಅಕ್ಕಿ ಮತ್ತು ಬೆಲೆ, ಭರತ್ ಬ್ರಾಂಡ್ ಯೋಜನೆಗೆ ಚಾಲನೆ

ಅಗ್ಗದ ಬೆಲೆಯಲ್ಲಿ ಸಿಗಲಿದೆ "ಭಾರತ್ ಬ್ರಾಂಡ್" ನ ಅಕ್ಕಿ, ಗೋಧಿ, ಬೇಳೆ

Bharat Rice, Dal, Wheat: ದೇಶದ ಜನರು ಈಗಾಗಲೇ ಹಣದುಬ್ಬರತೆಯ ಪರಿಣಾಮವನ್ನು ಎದುರಿಸುತ್ತಿದ್ದಾರೆ. ಇನ್ನು ಕೇಂದ್ರ ಸರ್ಕಾರ ಬೆಲೆ ಏರಿಕೆಗೆ ಪರಿಣಾಮವನ್ನು ಕಡಿಮೆ ಮಾಡಲು ಆಗಾಗ ಕೆಲವು ಪರಿಹಾರವನ್ನು ನೀಡುತ್ತಿರುತ್ತದೆ. ಸದ್ಯ ದೇಶದಲ್ಲಿ ಅಕ್ಕಿಯ ಬೆಲೆಯಂತು ಗಗನಕ್ಕೇರಿದೆ ಎನ್ನಬಹುದು. ಸದ್ಯ ಬೆಲೆ ನಿಯಂತ್ರಣದ ಪ್ರಯತ್ನದಲ್ಲಿರುವ ಸರ್ಕಾರ ಇದೀಗ ಹೊಸ ನಿರ್ಧಾರ ಕೈಗೊಂಡಿದೆ.

Govt Launches Bharat Rice
Image Credit: India

ಭಾರತ್ ಬ್ರಾಂಡ್ ನ ಮೂಲಕ ಬೆಲೆ ಏರಿಕೆಗೆ ಬ್ರೇಕ್ ಹಾಕಲು ಮುಂದಾದ ಸರ್ಕಾರ
ಸದ್ಯ ಕೇಂದ್ರ ಸರ್ಕಾರ ಜನಸಮಾನ್ಯರಿಗೆ ಗುಡ್ ನ್ಯೂಸ್ ನೀಡಿದೆ. ಅಕ್ಕಿಯ ಬೆಲೆಯ ಕುರಿತು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಈ ಮೂಲಕ ಜನಸಾಮಾನ್ಯರಿಗೆ ಸರ್ಕಾರ ಬಿಗ್ ರಿಲೀಫ್ ನೀಡಿದೆ ಎನ್ನಬಹುದು. ಚಿಲ್ಲರೆ ಮಾರುಕಟ್ಟೆಯಲ್ಲಿ ಭಾರತ್ ರೈಸ್ ಮಾರಾಟ ಮಾಡಲು ಸರ್ಕಾರ ಅನುಮತಿ ನೀಡಿದೆ. ಜನಸಾಮಾನ್ಯರಿಗೆ ಭಾರತ್ ರೈಸ್ ಕೊಂಚ ಅಗ್ಗದ ದರದಲ್ಲಿ ಲಭ್ಯವಾಗಲಿದೆ.

ಇನ್ನುಮುಂದೆ ಅಗ್ಗದ ಬೆಲೆಯಲ್ಲಿ ಸಿಗಲಿದೆ “ಭಾರತ್ ಬ್ರಾಂಡ್” ನ ಅಕ್ಕಿ, ಗೋಧಿ, ಬೇಳೆ
ಭಾರತ್ ಬ್ರಾಂಡ್ ನ ಮೂಲಕ ಭಾರತ್ ರೈಸ್, ಭಾರತ್ ಹಿಟ್ಟು ಮತ್ತು ಭಾರತ್ ಬೆಳೆಗಳನ್ನು ಮಾರುಕಟ್ಟೆಯಲ್ಲಿ ಕಡಿಮೆ ದರದಲ್ಲಿ ಖರೀದಿಸಬಹುದು. ಚಿಲ್ಲರೆ ಮಾರುಕಟ್ಟೆಯಲ್ಲಿ ಭಾರತ್ ರೈಸ್ ಅನ್ನು ಕೇವಲ ರೂ. 29 ಕ್ಕೆ ಮಾರಾಟ ಮಾಡಲಾಗುತ್ತದೆ.

Bharat Rice, Dal, Wheat
Image Credit: Publictv

ಭಾರತ್ ಬ್ರಾಂಡ್ ನ ಪ್ರೊಡಕ್ಟ್ ಗಳನ್ನೂ ಎಲ್ಲಿ ಖರೀದಿಸಬಹುದು..?
ನ್ಯಾಷನಲ್ ಅಗ್ರಿಕಲ್ಚರಲ್ ಕೋ ಆಪರೇಟಿವ್ ಮಾರ್ಕೆಟಿಂಗ್ ಫೆಡರೇಷನ್ ಆಫ್ ಇಂಡಿಯಾ ಲಿಮಿಟೆಡ್ ಮತ್ತು ನ್ಯಾಷನಲ್ ಕೋ ಆಪರೇಟಿವ್ ಕನ್ಸ್ಯುಮಾರ್ ಫೆಡರೇಷನ್ ಆಫ್ ಇಂಡಿಯಾ ಲಿಮಿಟೆಡ್ ಸಂಸ್ಥೆಗಳಲ್ಲಿ ಲಭ್ಯವಿರುತ್ತದೆ. ಇಲ್ಲಿ ನೀವು ಭಾರತ್ ರೈಸ್ ಅನ್ನು ಕೇವಲ 29 ರೂ. ಗೆ ಖರೀದಿಸಬಹುದು.

ಭಾರತ್ ರೈಸ್ ಸೆಂಟ್ರಲ್ ಸ್ಟೋರ್‌ ಗಳಲ್ಲಿಯೂ ಲಭ್ಯವಿದೆ. ಸರ್ಕಾರ ಮೊಬೈಲ್ ವ್ಯಾನ್‌ ಗಳ ಮೂಲಕವೂ ಮಾರಾಟ ಮಾಡುತ್ತಿದೆ. ಭಾರತ್ ಬ್ರ್ಯಾಂಡ್ ಗೋಧಿ ಹಿಟ್ಟು ಕೇವಲ ಸಹಕಾರಿ ಸಂಸ್ಥೆಗಳಲ್ಲದೇ 2000 ಕ್ಕೂ ಹೆಚ್ಚು ಚಿಲ್ಲರೆ ಮಳಿಗೆಗಳಲ್ಲಿ ಲಭ್ಯವಿದೆ. ಇದನ್ನು ಮದರ್ ಡೈರಿ, ಸಫಲ್ ಮುಂತಾದ ಅಂಗಡಿಗಳಿಂದಲೂ ಖರೀದಿಸಬಹುದು. ಈ ಭಾರತ್ ರೈಸ್ ಅನ್ನು ಬಿಡುಗಡೆ ಮಾಡಿರುವ ಕಾರಣ ಜನಸಾಮಾನ್ಯರ ಆರ್ಥಿಕ ಹೊರೆ ಸ್ವಲ್ಪ ಮಟ್ಟಿಗೆ ಕಡಿಮೆ ಆಗಲಿದೆ.

Join Nadunudi News WhatsApp Group

Join Nadunudi News WhatsApp Group