Bharat Rice: ಕೇಂದ್ರದ ಭರತ್ ರೈಸ್ ಅಕ್ಕಿ ಎಲ್ಲಿ ಸಿಗುತ್ತದೆ ಮತ್ತು ಯಾರು ಯಾರಿಗೆ ಸಿಗುತ್ತದೆ…? ಇಲ್ಲಿದೆ ಡೀಟೇಲ್ಸ್.

ಕೇಂದ್ರದ ಭಾರತ್ ರೈಸ್ ಅಕ್ಕಿ ಎಲ್ಲಿ ಸಿಗುತ್ತದೆ ಮತ್ತು ಯಾರು ಯಾರಿಗೆ ಸಿಗುತ್ತದೆ...?

Bharat Rice Information: ದೇಶದಲ್ಲಿ ಹೆಚ್ಚುತ್ತಿರುವ ಅಕ್ಕಿಯ ಬೆಲೆಯ ಕುರಿತು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಈ ಮೂಲಕ ಕೇಂದ್ರ ಸರ್ಕಾರ ಜನಸಮಾನ್ಯರಿಗೆ ಗುಡ್ ನ್ಯೂಸ್ ನೀಡಿದೆ.

ಒಂದು ರೀತಿಯಲ್ಲಿ ಜನಸಾಮಾನ್ಯರಿಗೆ ಸರ್ಕಾರ ಬಿಗ್ ರಿಲೀಫ್ ನೀಡಿದೆ ಎನ್ನಬಹುದು. ಚಿಲ್ಲರೆ ಮಾರುಕಟ್ಟೆಯಲ್ಲಿ ಭಾರತ್ ರೈಸ್ ಮಾರಾಟ ಮಾಡಲು ಸರ್ಕಾರ ಅನುಮತಿ ನೀಡಿದ್ದು, ಇನ್ನುಮುಂದೆ ಜನರು ಭಾರತ್ ರೈಸ್ ಅನ್ನು ಅಗ್ಗದ ದರದಲ್ಲಿ ಖರೀದಿಸಬಹುದಾಗಿದೆ.

Govt Launches Bharat Rice
Image Credit: Oneindia

ಇನ್ನುಮುಂದೆ ಜನಸಾಮನ್ಯರಿಗೆ ಲಭ್ಯವಾಗಲಿದೆ ಭಾರತ್ ರೈಸ್
ಭಾರತ್ ಬ್ರಾಂಡ್ ನ ಮೂಲಕ ಭಾರತ್ ರೈಸ್, ಭಾರತ್ ಹಿಟ್ಟು ಮತ್ತು ಭಾರತ್ ಬೆಳೆಗಳನ್ನು ಮಾರುಕಟ್ಟೆಯಲ್ಲಿ ಕಡಿಮೆ ದರದಲ್ಲಿ ಖರೀದಿಸಬಹುದು. ಚಿಲ್ಲರೆ ಮಾರುಕಟ್ಟೆಯಲ್ಲಿ ಭಾರತ್ ರೈಸ್ ಅನ್ನು ಕೇವಲ ರೂ. 29 ಕ್ಕೆ ಮಾರಾಟ ಮಾಡಲಾಗುತ್ತದೆ. ಇನ್ನು ಬೆಂಗಳೂರಿನಲ್ಲಿ ಐದು ಕಡೆಗಳಲ್ಲಿ ಮೊಬೈಲ್ ವ್ಯಾನ್ ಗಳು ಸೇವೆ ನೀಡುತ್ತಿವೆ. ರಾಜ್ಯದಾದ್ಯಂತ 20 ಮೊಬೈಲ್ ವ್ಯಾನ್ ಗಳು ಸಂಚರಿಸುತ್ತಿದ್ದು, ಇದರಲ್ಲಿ ಜನರು ಭಾರತ್ ರೈಸ್ ಅನ್ನು ಖರೀದಿಸಬಹುದಾಗಿದೆ.

ಕೇಂದ್ರದ ಭಾರತ್ ರೈಸ್ ಅಕ್ಕಿ ಎಲ್ಲಿ ಸಿಗುತ್ತದೆ ಮತ್ತು ಯಾರು ಯಾರಿಗೆ ಸಿಗುತ್ತದೆ…?
ನ್ಯಾಷನಲ್ ಅಗ್ರಿಕಲ್ಚರಲ್ ಕೋ ಆಪರೇಟಿವ್ ಮಾರ್ಕೆಟಿಂಗ್ ಫೆಡರೇಷನ್ ಆಫ್ ಇಂಡಿಯಾ ಲಿಮಿಟೆಡ್ ಮತ್ತು ನ್ಯಾಷನಲ್ ಕೋ ಆಪರೇಟಿವ್ ಕನ್ಸ್ಯುಮಾರ್ ಫೆಡರೇಷನ್ ಆಫ್ ಇಂಡಿಯಾ ಲಿಮಿಟೆಡ್ ಸಂಸ್ಥೆಗಳಲ್ಲಿ ಲಭ್ಯವಿರುತ್ತದೆ. ಇಲ್ಲಿ ನೀವು ಭಾರತ್ ರೈಸ್ ಅನ್ನು ಕೇವಲ 29 ರೂ. ಗೆ ಖರೀದಿಸಬಹುದು.

Bharat Rice Information
Image Credit: Goodreturns

ಭಾರತ್ ರೈಸ್ ಸೆಂಟ್ರಲ್ ಸ್ಟೋರ್‌ ಗಳಲ್ಲಿಯೂ ಲಭ್ಯವಿದೆ. ಸರ್ಕಾರ ಮೊಬೈಲ್ ವ್ಯಾನ್‌ ಗಳ ಮೂಲಕವೂ ಮಾರಾಟ ಮಾಡುತ್ತಿದೆ. ಭಾರತ್ ಬ್ರ್ಯಾಂಡ್ ಗೋಧಿ ಹಿಟ್ಟು ಕೇವಲ ಸಹಕಾರಿ ಸಂಸ್ಥೆಗಳಲ್ಲದೇ 2000 ಕ್ಕೂ ಹೆಚ್ಚು ಚಿಲ್ಲರೆ ಮಳಿಗೆಗಳಲ್ಲಿ ಲಭ್ಯವಿದೆ. ಇದನ್ನು ಮದರ್ ಡೈರಿ, ಸಫಲ್ ಮುಂತಾದ ಅಂಗಡಿಗಳಿಂದಲೂ ಖರೀದಿಸಬಹುದು.

Join Nadunudi News WhatsApp Group

Join Nadunudi News WhatsApp Group