Bharat Rice: ಇನ್ಮುಂದೆ ಕೇಂದ್ರ ಸರ್ಕಾರದಿಂದ ಸಿಗಲಿದೆ 29 ರೂಪಾಯಿಗೆ ಅಕ್ಕಿ, ಭರತ್ ರೈಸ್ ಯೋಜನೆ ಜಾರಿ

ದೇಶದ ಜನತೆಗೆ ಕೇಂದ್ರದಿದ ಗುಡ್ ನ್ಯೂಸ್, ರೂ. 29 ಗೆ ಸಿಗಲಿದೆ ಭಾರತ್ ರೈಸ್.

Bharat Rice Available At 29 Rs Per KG: ಸದ್ಯ ದೇಶದಲ್ಲಿ ದಿನನಿತ್ಯ ಬಳಕೆಯ ವಸ್ತುಗಳ ಬೆಲೆ ಬಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಜನರು ನಿತ್ಯದ ಜೀವನ ನಿರ್ವಹಣೆ ವಸ್ತುಗಳನ್ನು ಖರೀದಿಸಲು ಹೆಚ್ಚಿನ ಹಣವನ್ನು ನೀಡುವ ಪರಿಸ್ಥಿತಿ ಎದುರಗುತ್ತಿದೆ ಎನ್ನಬಹುದು.

ಇನ್ನು ಕೇಂದ್ರ ಸರ್ಕಾರ ಬೆಲೆ ಏರಿಕೆಗೆ ಪರಿಣಾಮವನ್ನು ಕಡಿಮೆ ಮಾಡಲು ಆಗಾಗ ಕೆಲವು ಪರಿಹಾರವನ್ನು ನೀಡುತ್ತಿರುತ್ತದೆ. ಸದುಅ ದೇಶದಲ್ಲಿ ಅಕ್ಕಿಯ ಬೆಲೆಯಂತು ಗಗನಕ್ಕೇರಿದೆ ಎನ್ನಬಹುದು. ಸದ್ಯ ಬೆಲೆ ನಿಯಂತ್ರಣದ ಪ್ರಯತ್ನದಲ್ಲಿರುವ ಸರ್ಕಾರ ಇದೀಗ ಹೊಸ ಹೆಜ್ಜೆ ಇಟ್ಟಿದೆ.

central government bharat rice scheme
Image Credit: Original Source

ದೇಶದ ಜನತೆಗೆ ಕೇಂದ್ರದಿದ ಗುಡ್ ನ್ಯೂಸ್
ಸದ್ಯ ಕೇಂದ್ರ ಸರ್ಕಾರ ಜನಸಮಾನ್ಯರಿಗೆ ಗುಡ್ ನ್ಯೂಸ್ ನೀಡಿದೆ. ಅಕ್ಕಿಯ ಬೆಲೆಯ ಕುರಿತು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಈ ಮೂಲಕ ಜನಸಾಮಾನ್ಯರಿಗೆ ಸರ್ಕಾರ ಬಿಗ್ ರಿಲೀಫ್ ನೀಡಿದೆ ಎನ್ನಬಹುದು. ಮುಂದಿನ ವಾರದಿಂದ ಚಿಲ್ಲರೆ ಮಾರುಕಟ್ಟೆಯಲ್ಲಿ ಭಾರತ್ ರೈಸ್ ಮಾರಾಟ ಮಾಡಲು ಸರ್ಕಾರ ಅನುಮತಿ ನೀಡಿದೆ. ಜನಸಾಮಾನ್ಯರಿಗೆ ಭಾರತ್ ರೈಸ್ ಕೊಂಚ ಅಗ್ಗದ ದರದಲ್ಲಿ ಲಭ್ಯವಾಗಲಿದೆ.

ರೂ. 29 ಗೆ ಸಿಗಲಿದೆ ಭಾರತ್ ರೈಸ್
ಮುಂದಿನ ವಾರದಿಂದ ಚಿಲ್ಲರೆ ಮಾರುಕಟ್ಟೆಯಲ್ಲಿ ಭಾರತ್ ರೈಸ್ ಅನ್ನು ಕೇವಲ ರೂ. 29 ಕ್ಕೆ ಮಾರಾಟ ಮಾಡಲಾಗುತ್ತದೆ. ಈ ಬಗ್ಗೆ ಕೇಂದ್ರ ಸರ್ಕಾರ ಅಧಿಕೃತ ಘೋಷಣೆ ಹೊರಡಿಸಿದೆ. ಬೆಲೆಯನ್ನು ನಿಯಂತ್ರಿಸುವ ಪ್ರಯತ್ನದಲ್ಲಿ ಅಕ್ಕಿ ದಾಸ್ತಾನು ಬಹಿರಂಗಪಡಿಸುವಂತೆ ಸರ್ಕಾರವು ಅಕ್ಕಿ ವ್ಯಾಪಾರಿಗಳಿಗೆ ನಿರ್ದೇಶನ ನೀಡಿದೆ.

bharat rice latest update
Image Credit: Original Source

ಭಾರತ್ ರೈಸ್ ಎಲ್ಲಿ ಖರೀದಿಸಬಹುದು..?
ಭಾರತ್ ರೈಸ್ ಎರಡು ಸಹಕಾರಿ ಸಂಸ್ಥೆಗಳಲ್ಲಿ ಲಭ್ಯವಿರುತ್ತದೆ. ನ್ಯಾಷನಲ್ ಅಗ್ರಿಕಲ್ಚರಲ್ ಕೋ ಆಪರೇಟಿವ್ ಮಾರ್ಕೆಟಿಂಗ್ ಫೆಡರೇಷನ್ ಆಫ್ ಇಂಡಿಯಾ ಲಿಮಿಟೆಡ್ ಮತ್ತು ನ್ಯಾಷನಲ್ ಕೋ ಆಪರೇಟಿವ್ ಕನ್ಸ್ಯುಮಾರ್ ಫೆಡರೇಷನ್ ಆಫ್ ಇಂಡಿಯಾ ಲಿಮಿಟೆಡ್ ಸಂಸ್ಥೆಗಳಲ್ಲಿ ಲಭ್ಯವಿರುತ್ತದೆ. ಇಲ್ಲಿ ನೀವು ಭಾರತ್ ರೈಸ್ ಅನ್ನು ಕೇವಲ 29 ರೂ. ಗೆ ಖರೀದಿಸಬಹುದು.

Join Nadunudi News WhatsApp Group

Join Nadunudi News WhatsApp Group