Bharath Rice: ಕೇಂದ್ರದಿಂದ ಜಾರಿಗೆ ಬಂತು “ಭಾರತ್ ರೈಸ್”, ಕೇಂದ್ರದಿಂದ ಕೇವಲ 25 ರೂಪಾಯಿಗೆ ಸಿಗಲಿದೆ ಭಾರತ್ ಅಕ್ಕಿ

ಹೊಸ ವರ್ಷಕ್ಕೆ ಅಕ್ಕಿ ಬೆಲೆಯಲ್ಲಿ ಇಳಿಕೆ ಮಾಡಲು ತೀರ್ಮಾನ ಮಾಡಿರುವ ಸರ್ಕಾರ ಭಾರತ್ ರೈಸ್ ಯೋಜನೆಯನ್ನ ಜಾರಿಗೆ ಬಂದಿದೆ

Bharath Rice: ಇತೀಚಿನ ದಿನಗಳಲ್ಲಿ ಎಲ್ಲಾ ತರಕಾರಿ ಬೆಲೆಗಳು ಗಗನಕ್ಕೆ ಏರುತ್ತಿದ್ದು, ಇದರ ಜೊತೆಗೆ ದಿನಸಿ ಪದಾರ್ಥಗಳ ಬೆಲೆ ಕೂಡ ಹೆಚ್ಚಾಗುತ್ತಿದೆ. ಈ ಹಿಂದೆ ತರಕಾರಿ ಬೆಲೆ ಹಾಗು ಹಾಲು, ಮೊಸಲು ಉತ್ಪನ್ನಗಳ ಬೆಲೆ ಏರಿಕೆ ಆಗಿದ್ದನ್ನು ನಾವು ನೋಡಿದ್ದೇವೆ. ಬೇಳೆ ಕಾಳು, ಅಕ್ಕಿ, ಗೋದಿ ಹಿಟ್ಟು ಗಳಂತಹ ಬಹಳ ಅಗತ್ಯ ವಸ್ತುಗಳ ಬೆಲೆಯಲ್ಲೂ ಏರಿಕೆಯಾಗಿ ಜನಸಾಮಾನ್ಯರು ಬಹಳ ಕಷ್ಟ ಅನುಭವಿಸದ್ದು ಎಲ್ಲರಿಗೂ ತಿಳಿದಿರುವ ವಿಚಾರ ಆಗಿದೆ

ಈಗ 2024 ರ ಚುನಾವಣೆಗೂ ಮುನ್ನ ಅಗತ್ಯ ಆಹಾರ ಪದಾರ್ಥಗಳ ಬೆಲೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಪ್ರಯತ್ನಿಸುತ್ತಿದೆ ಎನ್ನಲಾಗಿದೆ. ಸದ್ಯ ಕೇಂದ್ರ ಸರ್ಕಾರದ ಈಗ ಅಗತ್ಯ ವಸ್ತುಗಳ ಬೆಲೆ ಇಳಿಕೆ ಮಾಡಲು ತೀರ್ಮಾನವನ್ನ ಮಾಡಿದ್ದು ಇದು ಜನರ ಸಂತಸಕ್ಕೆ ಕಾರಣವಾಗಿದೆ. ಮುಂದಿನ ವರ್ಷ ಪೆಟ್ರೋಲ್ ಡೀಸೆಲ್ ಬೆಲೆ ಇಳಿಕೆ ಮಾಡಿರುವ ಭಾರತ ಸರ್ಕಾರ ಈಗ ಭರತ್ ರೈಸ್ ಅನ್ನುವ ಅಕ್ಕಿಯನ್ನ ಕಡಿಮೆ ಬೆಲೆಗೆ ಬಿಡುಗಡೆ ಮಾಡಿದೆ.

Bharat Rice at Rs 25 per kilogram
Image Credit: Tgnns

ಆಹಾರ ಪದಾರ್ಥಗಳ ಬೆಲೆಯಲ್ಲಿ ರಿಯಾಯಿತಿ

ಅಗತ್ಯ ಆಹಾರ ಪದಾರ್ಥಗಳ ಬೆಲೆ ಏರಿಕೆಯನ್ನು ನಿಭಾಯಿಸುವ ಪ್ರಯತ್ನಗಳ ಭಾಗವಾಗಿ ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಮುಂಚಿತವಾಗಿ ಪ್ರತಿ ಕಿಲೋಗ್ರಾಂಗೆ 25 ರೂ.ಗಳ ರಿಯಾಯಿತಿ ದರದಲ್ಲಿ ‘ಭಾರತ್ ಅಕ್ಕಿ’ ಪರಿಚಯಿಸಲು ಸರ್ಕಾರ ಪರಿಗಣಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಭಾರತ್ ಅಟ್ಟಾ’ (ಗೋಧಿ ಹಿಟ್ಟು) ಮತ್ತು ‘ಭಾರತ್ ದಾಲ್’ (ಬೇಳೆ ಕಾಳುಗಳು) ರಿಯಾಯಿತಿ ದರಗಳನ್ನು ಯಶಸ್ವಿಯಾಗಿ ಜಾರಿಗೆ ತಂದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.

Modi Government Bharth Rice
Image Credit: Hindutamil

ಅಗತ್ಯ ಆಹಾರ ಪದಾರ್ಥಗಳ ಬೆಲೆ ಕಡಿಮೆ ಮಾಡುವುದೇ ಸರ್ಕಾರದ ಗುರಿ

Join Nadunudi News WhatsApp Group

ಭಾರತ್ ಅಕ್ಕಿಯನ್ನು ರಿಯಾಯಿತಿ ದರದಲ್ಲಿ ನೀಡಲಾಗುವುದು ಮತ್ತು ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟ (ನಾಫೆಡ್), ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ ನಿಯಮಿತ (ಎನ್ಸಿಸಿಎಫ್), ಕೇಂದ್ರೀಯ ಭಂಡಾರ್ ಮಳಿಗೆಗಳು ಮತ್ತು ಮೊಬೈಲ್ ವ್ಯಾನ್ ಗಳಂತಹ ಸರ್ಕಾರಿ ಸಂಸ್ಥೆಗಳ ಮೂಲಕ ಲಭ್ಯವಾಗಬಹುದು ಎನ್ನಲಾಗಿದೆ.

ಅಕ್ಕಿಯ ಅಖಿಲ ಭಾರತ ಸರಾಸರಿ ಚಿಲ್ಲರೆ ಬೆಲೆಯಲ್ಲಿ ಗಮನಾರ್ಹ ಏರಿಕೆಯ ಮಧ್ಯೆ ಈ ನಿರ್ಧಾರ ಬಂದಿದ್ದು, ಪ್ರತಿ ಕಿಲೋಗ್ರಾಂಗೆ 43.3 ರೂ.ಗೆ ತಲುಪಿದೆ, ಪ್ರಸ್ತುತ, ಸರ್ಕಾರವು ಗ್ರಾಹಕರಿಗೆ ಭಾರತ್ ಗೋಧಿ ಹಿಟ್ಟು ಮತ್ತು ಕಡಲೆ ಬೇಳೆಯನ್ನು ಕ್ರಮವಾಗಿ ಪ್ರತಿ ಕಿಲೋಗ್ರಾಂಗೆ 27.50 ಮತ್ತು 60 ರೂ.ಗಳ ರಿಯಾಯಿತಿ ದರದಲ್ಲಿ ಒದಗಿಸಲಾಗುತ್ತದೆ.

Join Nadunudi News WhatsApp Group