BHIM Cash Back: BHIM App ಬಳಸುವವರಿಗೆ ಬಂಪರ್ ಆಫರ್, ಉಚಿತವಾಗಿ ಸಿಗಲಿದೆ 750 ರೂ

ಭರ್ಜರಿ 750 ರೂ. ಕ್ಯಾಶ್ ಬ್ಯಾಕ್ ಆಫರ್ ಘೋಷಣೆ ಮಾಡಿದ BHIM.

BHIM App Cash Back Available Up To 750 Rs: ದೇಶದ ಜನತೆಗೆ ವಿವಿಧ UPI ಅಪ್ಲಿಕೇಶನ್ ಗಳು ಡಿಜಿಟಲ್ ಪಾವತಿಗೆ ಅವಕಾಶವನ್ನು ಮಾಡಿಕೊಡುತ್ತಿದೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಆನ್ಲೈನ್ ವಹಿವಾಟನ್ನು ನಡೆಸುತ್ತಿದ್ದಾರೆ.

ಸದ್ಯ ಜನಪ್ರಿತ ಡಿಜಿಟಲ್ ಪೇಮೆಂಟ್ ಅಪ್ಲಿಕೇಶನ್ ಆಗಿರುವ BHIM App ಇದೀಗ ತನ್ನ ಬಳಕೆದಾರರಿಗೆ ಬಂಪರ್ ಆಫರ್ ಅನ್ನು ಘೋಷಣೆ ಮಾಡಿದೆ. ಹೌದು, BHIM ಅಪ್ಪಿಕೇಷನ್ ನ ಮೂಲಕ ವಹಿವಾಟನ್ನು ನಡೆಸುವವರು BHIM App ನ ಆಫರ್ ಅನ್ನು ಬಳಸಿಕೊಂಡು ಹಣವನ್ನು ಗಳಿಸಬಹುದು. BHIM App ನೀಡಿರುವ ಆಫರ್ ನ ಬಗ್ಗೆ ಸಂಪೂರ್ಣ ವಿವರ ಈ ಲೇಖನದಲ್ಲಿದೆ.

BHIM App Cash Back Available Up To 750 Rs
Image Credit: ABP News

ಗ್ರಾಹಕರಿಗೆ ಭರ್ಜರಿ ಆಫರ್ ಘೋಷಣೆ ಮಾಡಿದ BHIM App
ಸದ್ಯ BHIM App ಗ್ರಾಹಕರಿಗೆ ಭರ್ಜರಿ 750 ರೂ. ಕ್ಯಾಶ್ ಬ್ಯಾಕ್ ಅನ್ನು ಪಡೆಯುವ ಆಫರ್ ಅನ್ನು ಘೋಷಣೆ ಮಾಡಿದೆ. ಈ ಮೂಲಕ ಇನ್ನಷ್ಟು ಗ್ರಾಹಕರನ್ನು ಸೆಳೆಯುವ ಪ್ಲಾನ್ ಹಾಕಿಕೊಂಡಿದೆ. ಆದರೆ ನೀವು ಗಮನಿಸಬೇಕಾದ ವಿಷಯವೆಂದರೆ, ಈ ಆಫರ್ ಸೀಮಿತ ಅವಧಿಯವರೆಗೆ ಮಾತ್ರ ಲಭ್ಯವಿರುತ್ತದೆ. ಮಾರ್ಚ್ 31 ರ ವರಗೆ ನೀವು BHIM App ನ ಕೊಡುಗೆ ಅಡಿಯಲ್ಲಿ ಕ್ಯಾಶ್ ಬ್ಯಾಕ್ ಅನ್ನು ಪಡೆಯುವ ಅವಕಾಶ ಇರುತ್ತದೆ.

ಯಾವ ರೀತಿ ಕ್ಯಾಶ್ ಬ್ಯಾಕ್ ಅನ್ನು ಪಡೆಯಬಹುದು…?
*ಹೋಟೆಲ್ ಊಟದ ಬಿಲ್ ಪಾವತಿಗಳು ಅಥವಾ ಟಿಕೆಟ್‌ ಗಳನ್ನು ಬುಕ್ ಮಾಡುವ ಪ್ರಯಾಣಿಕರಿಗೆ 150 ರೂ.ವರೆಗಿನ ಕ್ಯಾಶ್‌ ಬ್ಯಾಕ್ ಆಫರ್ ಲಭ್ಯವಿರುತ್ತದೆ.

*ಭೀಮ್ ಆ್ಯಪ್ ಮೂಲಕ 100 ರೂ.ಗಿಂತ ಹೆಚ್ಚಿನ ಆಹಾರ ಮತ್ತು ಪ್ರಯಾಣದ ವಹಿವಾಟಿನ ಮೇಲೆ ಗ್ರಾಹಕರು ಫ್ಲಾಟ್ ರೂ.30 ಕ್ಯಾಶ್‌ ಬ್ಯಾಕ್ ಪಡೆಯಬಹುದು.

Join Nadunudi News WhatsApp Group

Bhim Cashback Offer
Image Credit: Live Hindustan

600 ರೂ. ಕ್ಯಾಶ್ ಬ್ಯಾಕ್ ನ ಆಫರ್ ಹೀಗಿದೆ
ಈ ಕೊಡುಗೆಯು ಟಿಕೆಟ್ ಬುಕಿಂಗ್, ಗ್ಯಾಬ್ ರೈಡ್‌ಗಳು, ಯುಪಿಐ ಕ್ಯೂಆರ್ ಕೋಡ್ ಮೂಲಕ ಪಾವತಿಸಿದ ರೆಸ್ಟೋರೆಂಟ್‌ ಬಿಲ್ ಸೇರಿದಂತೆ ಹಲವು ವಹಿವಾಟುಗಳಿಗೆ. ಗರಿಷ್ಠ 150 ರೂಪಾಯಿಗಳಿಗೆ ಈ ಕೊಡುಗೆಗಳು ಐದು ಬಾರಿಯ ವಹಿವಾಟಿಗೆ ಮಾತ್ರ ಲಭ್ಯವಿರಲಿದೆ.

ಇನ್ನು ರೂ. 100 ಕ್ಕಿಂತ ಹೆಚ್ಚಿನ ಮೊದಲ ಮೂರು ವಹಿವಾಟುಗಳಿಗೆ ರೂ. 100 ಕ್ಯಾಶ್‌ಬ್ಯಾಕ್. ಪ್ರತಿ ತಿಂಗಳು ರೂ. 200 ಕ್ಕಿಂತ ಹೆಚ್ಚಿನ ಪ್ರತಿ 10 ವಹಿವಾಟುಗಳಿಗೆ ರೂ. 30 ಕ್ಯಾಶ್‌ ಬ್ಯಾಕ್. ಈ ಎಲ್ಲಾ ವಹಿವಾಟುಗಳನ್ನು BHIM ಅಪ್ಲಿಕೇಶನ್‌ ನಲ್ಲಿ ಮಾಡಿದರೆ ಒಟ್ಟಾರೆಯಾಗಿ 600 ರೂ.ವರೆಗೆ ಕ್ಯಾಶ್ ಬ್ಯಾಕ್ ರಿಡೀಮ್ ಮಾಡಬಹುದು.

Join Nadunudi News WhatsApp Group