Bigg Boss: ಬಿಗ್ ಬಾಸ್ ನಲ್ಲಿ ನಿರೂಪಣೆ ಮಾಡಲು ಈ ಮೂವರಲ್ಲಿ ಹೆಚ್ಚು ಸಂಭಾವನೆ ಪಡೆಯುವ ನಟ ಯಾರು…? ದುಬಾರಿ ಸಂಭಾವನೆ

ಬಿಗ್ ಬಾಸ್ ನಲ್ಲಿ ನಿರೂಪಣೆ ಮಾಡಲು ನಟರು ಪಡೆಯುವ ಸಂಭಾವನೆ ಎಷ್ಟು ಗೊತ್ತಾ...?

Bigg Boss Host Salary: ಬಿಗ್ ಬಾಸ್ (Bigg Boss) ಕಾರ್ಯಕ್ರಮ ಇದು ಎಲ್ಲಾ ಭಾಷೆಯಲ್ಲೂ ಬಹಳ ಜನಪ್ರಿಯತೆ ಪಡೆದುಕೊಂಡ ರಿಯಾಲಿಟಿ ಷೋ (Reality Show) ಆಗಿದೆ. 2006 ರಲ್ಲಿ ಬಿಗ್‌ ಬಾಸ್‌ ಮೊದಲ ಶೋ ಹಿಂದಿಯಲ್ಲಿ ಪ್ರಾರಂಭವಾಯಿತು ತದನಂತರ ಕನ್ನಡ, ತಮಿಳು, ತೆಲುಗು, ಮರಾಠಿ ಮತ್ತು ಮಲಯಾಳಂ ಸೇರಿದಂತೆ ವಿವಿಧ ಭಾರತೀಯ ಭಾಷೆಗಳಲ್ಲಿ ಈ ಕಾರ್ಯಕ್ರಮ ಹೆಸರುವಾಸಿ ಆಗಿದೆ.

ಬಿಗ್ ಬಾಸ್ ಕಾರ್ಯಕ್ರಮ ಆಗಾಗ್ಗೆ ವಿವಾದಗಳಿಂದ ಯಾವಾಗಲೂ ಸುದ್ದಿಯಲ್ಲಿರುತ್ತದೆ. ಬಿಗ್ ಬಾಸ್ ಕಾರ್ಯಕ್ರಮವನ್ನು ಆಯಾ ಭಾಷೆಯ ಸೂಪರ್‌ ಸ್ಟಾರ್ ನಟರು ನಿರೂಪಣೆ ಮಾಡುತ್ತಾರೆ. ಹೌದು ಕನ್ನಡ ಸೇರಿದಂತೆ ಹಲವು ಭಾಷೆಯಲ್ಲಿ ನಡೆಯುವ ಬಿಗ್ ಬಾಸ್ ಶೋ ನಲ್ಲಿ ಸ್ಟಾರ್ ನಟರು ನಿರೂಪಣೆ ಮಾಡುತ್ತಾರೆ. ಸ್ಟಾರ್ ನಟರು ಅಂದಮೇಲೆ ಅವರ ಸಂಭಾವನೆ ಕೂಡ ದೊಡ್ಡ ಮಟ್ಟದಲ್ಲಿ ಇರುತ್ತದೆ ಎಂದು ಹೇಳಬಹುದು.

Bigg Boss Host Salary
Image Credit: Filmi Beat

ಬಿಗ್ ಬಾಸ್ ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಿರುವ ದಿಗ್ಗಜ ನಟರು

ಬಿಗ್ ಬಾಸ್ ಕಾರ್ಯಕ್ರಮ ಹಲವು ಭಾಷೆಗಳಲ್ಲಿ ಮೂಡಿ ಬರುತ್ತಿದ್ದು, ಆಯಾ ಭಾಷೆಗಳಿಗೆ ಅನುಗುಣವಾಗಿ ದಿಗ್ಗಜ ನಟರು ಈ ಕಾರ್ಯಕ್ರಮಗಳನ್ನು ನಿರೂಪಣೆ ಮಾಡುತ್ತಿದ್ದಾರೆ. ತಮಿಳಿನಲ್ಲಿ ಕಮಲ್ ಹಾಸನ್ ಹೋಸ್ಟ್ ಮಾಡುತ್ತಿದ್ದಾರೆ, ಕನ್ನಡದಲ್ಲಿ ಕಿಚ್ಚ ಸುದೀಪ್‌, ಹಿಂದಿಯಲ್ಲಿ ಸಲ್ಮಾನ್‌ ಖಾನ್‌, ತೆಲುಗಿನಲ್ಲಿ ನಾಗಾರ್ಜುನ ಹೋಸ್ಟ್‌ ಮಾಡುತ್ತಿದ್ದಾರೆ.

ಬಿಗ್ ಬಾಸ್ ಕಾರ್ಯಕ್ರಮದ ನಿರೂಪಕರಾಗಿ ನಟ ಕಮಲ್ ಹಾಸನ್

Join Nadunudi News WhatsApp Group

ಕಮಲ್ ಹಾಸನ್ ಬಹುಮುಖ ಪ್ರತಿಭೆಯ ನಟ, ನಿರ್ದೇಶಕ ಮತ್ತು ಚಿತ್ರಕಥೆಗಾರ. ಇದರಿಂದಾಗಿ ಅನೇಕರು ಅವರನ್ನು ‘ವಿಶ್ವನಾಯಕ’ ಎಂದು ಕರೆಯುತ್ತಾರೆ. ನಟ ಕಮಲ್ ಹಾಸನ್ ಅವರು 2017 ರಿಂದ ಬಿಗ್ ಬಾಸ್ ಸ್ಪರ್ಧೆಯನ್ನು ಆಯೋಜಿಸುತ್ತಿದ್ದಾರೆ. ಅವರ ಅಭಿಪ್ರಾಯಗಳು ಮತ್ತು ವಿಷಯಗಳಿಗೆ ಅನೇಕ ಟೀಕೆಗಳು ಇದ್ದರೂ, ಜನರು ಅವರನ್ನು ತೆರೆಯ ಮೇಲೆ ಆನಂದಿಸುತ್ತಲೇ ಇರುತ್ತಾರೆ. ಕಮಲ್ ಹಾಸನ್ ಚಿತ್ರದಲ್ಲಿ ನಟಿಸಲು 70-80 ಕೋಟಿ ಸಂಭಾವನೆ ಪಡೆಯುತ್ತಾರೆ ಎನ್ನುವ ಮಾಹಿತಿ ಇದೆ. ಹೀಗಿರುವಾಗ ಬಿಗ್ ಬಾಸ್ ಹೋಸ್ಟ್‌ ಮಾಡಲು ವಿಶ್ವನಾಯಕ ಈ ಸೀಸನ್ ಗೆ 130 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.

Bigg Boss Host Latest News
Image Credit: Jagran

ಕೋಟಿ ಕೋಟಿ ಸಂಭಾವನೆ ಪಡೆಯುವ ಸ್ಟಾರ್ ನಟರು

ವಿದೇಶದಲ್ಲಿ ಬಿಗ್ ಬ್ರದರ್ ಎಂಬ ಹೆಸರಿನಲ್ಲಿ ನಡೆಸಲಾಗುತ್ತಿರುವ ಈ ಕಾರ್ಯಕ್ರಮ ಬಿಗ್ ಬಾಸ್ ಪರಿಕಲ್ಪನೆಯಲ್ಲೇ ಭಾರತದಲ್ಲಿ 17 ಸೀಸನ್ ಗಳನ್ನು ನಡೆಸುತ್ತಿದೆ. ಪ್ರಸ್ತುತ ಸಲ್ಮಾನ್‌ ಖಾನ್‌ ಪ್ರತಿ ವಾರದ ಸಂಚಿಕೆಗೆ ಸುಮಾರು 25 ಕೋಟಿ ಹಣ ಪಡೆಯುತ್ತಿದ್ದಾರೆ. ತೆಲುಗು ಬಿಗ್‌ಬಾಸ್‌ ಹಿಂದಿನ ಸಂಚಿಕೆಗೆ ನಾಗಾರ್ಜುನ ಅವರು 15 ಕೋಟಿ ರೂ. ಪಡೆದಿದ್ದರು. ಈ ಹಿಂದೆ ಕಿಚ್ಚ ಸುದೀಪ್‌ ಬಿಗ್‌ ಬಾಸ್‌ ಗೆ 20 ಕೋಟಿ ರೂ. ಸಂಭಾವನೆ ಪಡೆದಿದ್ದರು, ಪ್ರಸ್ತುತ ಈ ಹೋಸ್ಟ್‌ಗಳ ಸಂಭಾವನೆ ಹೆಚ್ಚಾಗಿದ್ದು ಅವುಗಳ ಬಗ್ಗೆ ಇನ್ನು ಯಾವುದೇ ವರದಿ ಹೊರಬಿದ್ದಿಲ್ಲ.

Join Nadunudi News WhatsApp Group