Bigg Boss Winner: ಫೈನಲ್ ಗು ಮುನ್ನವೇ ಬದಲಾಗಿದೆ ಎಲ್ಲಾ ಲೆಕ್ಕಾಚಾರ, ಬಿಗ್ ಬಾಸ್ ವಿನ್ ಆಗುವುದು ಇವರೇ

ಈ ಬಾರಿ ಬಿಗ್ ಬಾಸ್ ವಿನ್ ಆಗುವುದು ಇವರೇ, ಬದಲಾಗಿದೆ ವೋಟಿಂಗ್ ಲೆಕ್ಕಾಚಾರ

Bigg Boss Kannada Season 10 Winner: ಕನ್ನಡಿಗರ ಜನಪ್ರಿಯ ರಿಯಾಲಿಟಿ ಶೋ ಆಗಿರುವ Bigg Boss ಇದೀಗ ಸೀಸನ್ 10 ರ ಫಿನಾಲೆ ಹಂತದಲ್ಲಿದೆ. ಇದೀಗ ಎಲ್ಲೆಡೆ ಸೀಸನ್ 10 ಬಗ್ಗೆ ಚರ್ಚೆ ನಡೆಯುತ್ತಿದೆ. BBk10 ರ ಟೈಟಲ್ ಯಾರ ಪಾಲಾಗುತ್ತದೆ ಎನ್ನುವುದನ್ನು ತಿಳಿಯಲು ಕೋಟ್ಯಾಂತರ ಕನ್ನಡಿಗರು ಕುತೂಹಲರಾಗಿದ್ದಾರೆ.

ಇನ್ನು ಫಿನಾಲೆ ತಲುಪಿರುವ 6 ಮಂದಿ ಕಂಟೆಸ್ಟಂಟ್ ಗಳಲ್ಲಿ ತುಕಾಲಿ ಸಂತೋಷ್ ಅವರು ಎಲಿಮಿನೇಟ್ ಆಗಿ ಮನೆಯಿಂದ ಹೊರಬಂದಿರುವುದು ದೃಢಪಟ್ಟಿದೆ. ಇನ್ನು ಉಳಿದ 5 ಮಂದಿ ಸ್ಪರ್ದಿಗಳಲ್ಲಿ ಹಣಾಹಣಿ ನಡೆಯುತ್ತಿದೆ. ಈವರೆಗೆ ಬಿಗ್ ಬಾಸ್ ವಿನ್ನರ್ ಇವರೇ ಎನ್ನುವ ಭರವಸೆ ಸಾಕಷ್ಟು ಜನರಲ್ಲಿ ಇತ್ತು. ಆದರೆ ಇದೀಗ ಈ ಒಂದು ಎಪಿಸೋಡ್ ನಿಂದ ಸೀಸನ್ ವಿನ್ನರ್ ಬದಲಾಗಿದ್ದಾರೆ ಎನ್ನುವ ಬಗ್ಗೆ ಸುದ್ದಿ ವೈರಲ್ ಆಗಿದೆ.

Bigg Boss Season 10 Drone Prathap
Image Credit: Vistaranews

ಫೈನಲ್ ಗು ಮುನ್ನವೇ ಬದಲಾಗಿದೆ ಎಲ್ಲಾ ಲೆಕ್ಕಾಚಾರ
ಇನ್ನು ಸಂಗೀತ, ವಿನಯ್, ಕಾರ್ತಿಕ್, ವರ್ತೂರ್ ಸಂತೋಷ್ ಹಾಗೂ ಪ್ರತಾಪ್ ಫೈನಲ್ ಹಂತ ತಲುಪಿದ್ದಾರೆ. ಐದು ಜನ ಸ್ಪರ್ದಿಗಳಲ್ಲಿ ಇಬ್ಬರು ಮಾತ್ರ ಟಾಪ್ 2 ನಲ್ಲಿ ಇರಲಿದ್ದಾರೆ. ಈವರೆಗಿನ ಲೆಕ್ಕಾಚಾರದ ಪ್ರಕಾರ ಈ ಬಾರಿ ಹೆಣ್ಣು ಮಗಳು ಜಯ ಸಾಧಿಸಲಿದ್ದಾಳೆ. ಸೀಸನ್ 1 ನಂತರ ಸೀಸನ್ 10 ವಿನ್ನರ್ ಪಟ್ಟ ಮಹಿಳೆ ಪಡೆಯಲಿದ್ದಾಳೆ ಅದು ಸಂಗೀತ ಎನ್ನುವ ಬಗ್ಗೆ ಎಲ್ಲರು ಮಾತನಾಡುತ್ತಿದ್ದರು. ಆದರೆ ಇದೀಗ ಈ ಲೆಕ್ಕಾಚಾರ ಉಲ್ಟಾ ಆಗಿದೆ ಎನ್ನಬಹುದು.

ಹೌದು, ಕಳೆದ ವರದ ಎಪಿಸೋಡ್ ನಲ್ಲಿ ಸ್ಪರ್ದಿಗಳ ಆಸೆಯನ್ನು ಈಡೇರಿಸುವಲ್ಲಿ ಕಾರ್ತಿಕ್ ಅವರ ಆಸೆಯನ್ನು ಬಿಗ್ ಬಾಸ್ ಈಡೇರಿಸಿದ್ದರು. ಕಾರ್ತಿಕ್ ಅವರು ತಮ್ಮ ತಂಗಿಯ ಜೊತೆ ಮಾತನಾಡಬೇಕು ಎನ್ನುವ ಆಸೆಯನ್ನು ಹಂಚಿಕೊಂಡಿದ್ದರು. ಕಾರ್ತಿಕ ಅವರ ಆಸೆಯಂತೆಯೇ ಬಿಗ್ ಬಾಸ್ ಕಾರ್ತಿಕ್ ಅವರ ತಂಗಿಯನ್ನು ವಿಡಿಯೋ ಕಾಲ್ ನಲ್ಲಿ ಮಾತನಾಡಿಸಿದ್ದಾರೆ. ಈ ಎಪಿಸೋಡ್ ಕಂಡ ವೀಕ್ಷಕರು ಕಾರ್ತಿಕ್ ಅವರನ್ನು ಗೆಲ್ಲಿಸಬೇಕು ಎನ್ನುವ ಪಣ ತೊಟ್ಟಿದ್ದಾರೆ.

Image Credit: Vistaranews

ಬಿಗ್ ಬಾಸ್ ಸೀಸನ್ 10 ವಿನ್ ಆಗುವುದು ಇವರೇ
ವಿಡಿಯೋ ಕಾಲ್ ನಲ್ಲಿ ಕಾರ್ತಿಕ್ ಅವರ ಮನೆಯನ್ನು ನೋಡಿದ ವೀಕ್ಷಕರು ಬಡವರ ಮಕ್ಕಳು ಬೆಳೀಬೇಕು ಎಂದು ಕಾರ್ತಿಕ್ ಅವರನ್ನು ಗೆಲ್ಲಿಸಲು ಮುಂದಾಗಿದ್ದಾರೆ. ಇನ್ನು ಟಾಪ್ 2 ನಲ್ಲಿ ಸಂಗೀತ ಹಾಗೂ ವಿನಯ್ ಇರುತ್ತಾರೆ ಎಂದು ಸಾಕಷ್ಟು ಜನರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.

Join Nadunudi News WhatsApp Group

ಆದರೆ ಈ ಲೆಕ್ಕಾಚಾರ ಕೂಡ ಉಲ್ಟಾ ಆಗಿದೆ ಎನ್ನಬಹುದು. ಇನ್ನು ತುಕಾಲಿ ಸಂತೋಷ್ ಆದ ಮೇಲೆ ವಿನಯ್ ಎಲಿಮಿನೇಟ್ ಆಗಿದ್ದಾರೆ ಎನ್ನುವ ಬಗ್ಗೆ ಸಾಮಾಜಿಕ ಮಾಧ್ಯಮದಿಂದ ಮಾಹಿತಿ ತಿಳಿದುಬಂದಿದೆ. ವಿನಯ್ ಎಲಿಮಿನೇಟ್ ಆದದ್ದು ಪಕ್ಕ ಆದರೆ ಟಾಪ್ 2 ನಲ್ಲಿ ಸಂಗೀತ ಕಾರ್ತಿಕ್ ಇರಲಿದ್ದು, ಈ ಬಾರಿ ಕಿಚ್ಚ ಎತ್ತುವ ಕೈ ಕಾರ್ತಿಕ್ ಅವರದ್ದೇ ಎನ್ನುವುದು ಸದ್ಯದ ಮಾತಾಗಿದೆ. ಅದೇನೇ ಇರಲಿ ಇಂದು ಬಿಗ್ ಬಿಸ್ 10 ರ ಫಿನಾಲೆ ನಡೆಯಲಿದ್ದು, ಯಾರು ಬಿಗ್ ಬಾಸ್ ವಿನ್ನರ್ ಆಗುತ್ತಾರೆ ಎನ್ನುವುದು ಬಹಿರಂಗವಾಗಲಿದೆ.

Join Nadunudi News WhatsApp Group