Karthik Mahesh: ಬಿಗ್ ಬಾಸ್ ವಿನ್ನರ್ ಕಾರ್ತಿಕ್ ಗೆ ಸಿಕ್ಕ ಒಟ್ಟು ಬಹುಮಾನದ ಹಣ ಎಷ್ಟು, ಅಬ್ಬಬ್ಬಾ ದುಬಾರಿ ಬಹುಮಾನ

50 ಲಕ್ಷದ ಜೊತೆಗೆ ಭರ್ಜರಿ ಬಹುಮಾನ ಪಡೆದುಕೊಂಡ ಬಿಗ್ ಬಾಸ್ ಸೀಸನ್ 10 ರ ವಿನ್ನರ್ ಕಾರ್ತಿಕ್ ಮಹೇಶ್

Bigg Boss Winner Karthik Winning Prize Money: ಸದ್ಯ ಬಹುನಿರೀಕ್ಷಿತ Bigg Boss Season 10 ರ ಫೈನಲ್ ನಿನ್ನೆ ಮುಕ್ತಾಯಗೊಂಡಿದೆ. ಬಿಗ್ಗ್ ಬಾಸ್ ಮನೆಗೆ 19 ಜನ ಕಂಟೆಸ್ಟಂಟ್ ಗಳು ಎಂಟ್ರಿ ಕೊಟ್ಟಿದ್ದು 16 ವಾರಗಳ ಹಣಾಹಣಿಯಲ್ಲಿ ಒಬ್ಬ ಸ್ಪರ್ದಿ ಬಿಗ್ ಬಾಸ್ ವಿನ್ನರ್ ಪಟ್ಟವನ್ನು ಪಡೆದಿದ್ದಾರೆ.

ಈ ಬಾರಿ ಬಿಗ್ ಬಾಸ್ ವಿನ್ನರ್ ಯಾರಾಗಲಿದ್ದಾರೆ..? ಎನ್ನುವ ಸಂಪೂರ್ಣ ಲೆಕ್ಕಾಚಾರ ಉಲ್ಟಾ ಆಗಿದೆ. ನೋಡುಗರ ಊಹೆಗೆ ವಿರೋಧವಾಗಿ ಬಿಗ್ ಬಾಸ್ ವಿನ್ನರ್ ಪಟ್ಟವನ್ನು ಬೇರೆ ಸ್ಪರ್ದಿ ಪಡೆದಿದ್ದಾರೆ. ಹೌದು ಈ ಬಾರಿಯ ಬಿಗ್ ಬಾಸ್ ವಿನ್ನರ್ ಆಗಿ ಕಾರ್ತಿಕ್ (Karthik Mahesh) ಹೊರಹೊಮ್ಮಿದ್ದಾರೆ.

Bigg Boss Winner Karthik
Image Credit: Times Now

ಬಿಗ್ ಬಾಸ್ ಸೀಸನ್ 10 ರ ವಿನ್ನರ್ ಆದ್ರೂ ಕಾರ್ತಿಕ್ ಮಹೇಶ್
ಕನ್ನಡಿಗರ ಜನಪ್ರಿಯ ರಿಯಾಲಿಟಿ ಶೋ ನಿನ್ನೆಗೆ ಮುಕ್ತಾಯಗೊಂಡಿದೆ. BBK10 ರಲ್ಲಿ ಜನರ ನೆಚ್ಚಿನ “ಕಾರ್ತಿಕ್ ಮಹೇಶ್” ಬಿಗ್ ಬಾಸ್ ಟ್ರೋಫಿ ಪಡೆದುಕೊಂಡಿದ್ದಾರೆ. ಅತಿ ಹೆಚ್ಚು ವೋಟ್ ಗಳನ್ನೂ ಪಡೆದುಕೊಂಡು ಕಾರ್ತಿಕ್ ಟಾಪ್ ಒನ್ ಸ್ಥಾನವನ್ನು ಪಡೆದಿದ್ದಾರೆ.

ಕಾರ್ತಿಕ್ ಆಟವನ್ನು ಪ್ರೇಕ್ಷಕರು ಮೊದಲಿನಿಂದಲೂ ಇಷ್ಟಪಟ್ಟುಕೊಂಡು ಬಂದಿದ್ದಾರೆ. ಮಾಧ್ಯಮ ವರ್ಗದ ಸ್ಪರ್ದಿ ಬಿಗ್ ಬಾಸ್ ವಿನ್ನರ್ ಪಟ್ಟ ಪಡೆದಿರುವುದು ಕನ್ನಡಗರಿಗೆ ಬಾರಿ ಖುಷಿ ನೀಡಿದೆ. ಇದೀಗ ನಾವು ಬಿಗ್ ಬಾಸ್ ಸೀಸನ್ ಗೆದ್ದ ಕಾರ್ತಿಕ್ ಗೆ ಎಷ್ಟು ಬಹುಮಾನ ಲಭ್ಯವಾಗಿದೆ ಎನ್ನುವ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ.

Bigg Boss Winner Karthik Winning Prize Money
Image Credit: Filmibeat

50 ಲಕ್ಷದ ಜೊತೆಗೆ ಭರ್ಜರಿ ಬಹುಮಾನ ಪಡೆದಿದ್ದಾರೆ ಕಾರ್ತಿಕ್
ಹೌದು, ಬಿಗ್ ಬಾಸ್ 10 ರ ವಿನ್ನರ್ ಕಾರ್ತಿಕ್ ಗೆ ಬರೋಬ್ಬರಿ 50 ಲಕ್ಷ ನಗದು ಬಹುಮಾನ ಲಭಿಸಿದೆ. ಇದರ ಜೊತೆಗೆ Maruti Suzuki Brezza Car ಹಾಗೂ Bounce Infinity Electric Scooter ಅನ್ನು ಬಹುಮಾನವಾಗಿ ನೀಡಲಾಗಿದೆ. ಮಾರುಕಟ್ಟೆಯಲ್ಲಿ Maruti Suzuki Brezza ಮಾದರಿಯ ಬೆಲೆ ಸುಮಾರು 8 ರಿಂದ 14 ಲಕ್ಷವಾದರೆಗೆ ಇದೆ. ಇನ್ನು Infinity Electric Scooter ಬೆಲೆ 80 ರಿಂದ 1 ಲಕ್ಷದವರೆಗೆ ಇದೆ.

Join Nadunudi News WhatsApp Group

ಇನ್ನು BBK10 ರ ಎರಡನೇ ಸ್ಥಾನವನ್ನು ಡ್ರೋನ್ ಪ್ರರ್ಥಪ್ ಪಡೆದಿದ್ದಾರೆ. ಇವರಿಗೆ 10 ಲಕ್ಷ ನಗದು ಬಹುಮಾನ ಹಾಗೂ ಹಳದಿ ಬಣ್ಣದ Bounce Infinity Electric Scooter ಬಹುಮಾನವಾಗಿ ಲಭಿಸಿದೆ. ಇನ್ನು ಸೆಕೆಂಡ್ ರನ್ನರ್ ಅಪ್ ಆದ ಸಂಗೀತ ಅವರಿಗೆ 7 ಲಕ್ಷ ಬಹುಮಾನ ನೀಡಲಾಗಿದ್ದು, ಮೂರನೇ ರನ್ನರ್ ಅಪ್ ಆಗಿ ವಿನಯ್ ಹೊರಹೊಮ್ಮಿದ್ದು, 5 ಲಕ್ಷ ಬಹುಮಾನ ಪಡೆದುಕೊಂಡಿದ್ದಾರೆ.

Join Nadunudi News WhatsApp Group