Digital Detox Challenge: ಮೊಬೈಲ್ ಬಳಸುವವರಿಗೆ ಬಿಗ್ ಚಾಲೆಂಜ್, ಈ ಟಾಸ್ಕ್ ನಲ್ಲಿ ಗೆದ್ದರೆ 8 ಲಕ್ಷ ರೂ ಬಹುಮಾನ

ಮೊಬೈಲ್ ಬಳಸುವವರಿಗೆ ಒಂದು ಚಾಲೆಂಜ್ ಘೋಷಣೆ ಆಗಿದ್ದು ಈ ಚಾಲೆಂಜ್ ಗೆದ್ದರೆ 8 ಲಕ್ಷ ರೂ ಬಹುಮಾನ

Digital Detox Challenge 2024: ಸದ್ಯದ ಡಿಜಿಟಲ್ ದುನಿಯಲ್ಲಿ ಸ್ಮಾರ್ಟ್ ಫೋನ್ ಎಷ್ಟು ಮುಖ್ಯ ಪಾತ್ರ ವಹಿಸುತ್ತಿದೆ ಎನ್ನುವದು ಎಲ್ಲರಿಗು ತಿಳಿದೇ ಇದೆ. ಸದ್ಯ ಮೊಬೈಲ್ ಬಳಕೆಗೆ ಯಾವುದೇ ವಯಸ್ಸಿನ ಮಿತಿ ಇಲ್ಲ ಎನ್ನಬಹುದು. ಸಣ್ಣ ವಯಸ್ಸಿನ ಮಕ್ಕಳಿಂದ ಹಿಡಿದು ವಯೋವೃದ್ಧರು ಕೂಡ ಸ್ಮಾರ್ಟ್ ಫೋನ್ ಗಳನ್ನೂ ಎಥೇಚ್ಚವಾಗಿ ಬಳಸುತ್ತಿದ್ದಾರೆ.

ಈಗಂತೂ ಸ್ಮಾರ್ಟ್ ಫೋನ್ ನಲ್ಲಿ ಹೆಚ್ಚಿನ ಸೌಲಭ್ಯಗಳು ಲಭ್ಯವಾಗುವ ಕಾರಣ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸ್ಮಾರ್ಟ್ ಫೋನ್ ಅನ್ನು ಬಳಸುತಿದ್ದರೆ. ಪ್ರಸ್ತುತ ಸ್ಮಾರ್ಟ್ ಫೋನ್ ಮನುಷ್ಯರ ಅವಿಭಾಜ್ಯ ಅಂಗವಾಗಿದೆ ಎಂದರೆ ತಪ್ಪಾಗಲಾರದು. ಇದೀಗ ಮೊಬೈಲ್ ನಿಂದ ದೂರವಿದ್ದರೆ ಭರ್ಜರಿ ಬಹುಮಾನವನ್ನು ಪಡೆಯುವ ಅವಕಾಶವೊಂದು ಬಂದೊದಗಿದೆ.

siggi's Digital Detox Program
Image Credit: India Today

ಒಂದುತಿಂಗಳು ಮೊಬೈಲ್ ನಿಂದ ದೊರವಿದ್ದರೆ ಸಿಗಲಿದೆ ಭರ್ಜರಿ ಬಹುಮಾನ
ಇದೀಗ ಅಮೇರಿಕ ಕಂಪನಿಯೊಂದು ಬಹುದೊಡ್ಡ ಚಾಲೆಂಜ್ ಅನ್ನು ನೀಡಿದೆ. ಈ ಚಾಲೆಂಜ್ ನಲ್ಲಿ ಗೆದ್ದರೆ ಭರ್ಜರಿ ಬಹುಮಾನವನ್ನು ಪಡೆಯಬಹುದಾಗಿದೆ. ನಿಮ್ಮ ಮೊಬೈಲ್ ಅನ್ನು ಒಂದು ತಿಂಗಳ ಕಾಲ ದೂರ ಇಟ್ಟರೆ ಲಕ್ಷ ರೂಪಾಯಿ ಗೆಲ್ಲುವ ಅವಕಾಶ ಇಲ್ಲಿದೆ. ಅಮೆರಿಕದ ಮೊಸರು ಕಂಪನಿ ಸಿಗ್ಗೀಸ್ ಡೈರಿ ಈ ಅವಕಾಶವನ್ನು ಒದಗಿಸುತ್ತಿದೆ.

ಡಿಜಿಟಲ್ ಡಿಟಾಕ್ಸ್ ಎನ್ನುವುದು ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಮತ್ತು ಸಾಮಾಜಿಕ ಮಾಧ್ಯಮ ಸೇರಿದಂತೆ ಯಾವುದೇ ಡಿಜಿಟಲ್ ಸಾಧನಗಳನ್ನು ನಿಗದಿತ ಅವಧಿಯವರೆಗೆ ಬಳಸದಿರುವ ಕ್ರಿಯೆಯಾಗಿದೆ.

Join Nadunudi News WhatsApp Group

ಲಕ್ಷ ಲಕ್ಷ ಹಣ ಗೆಲ್ಲುವ ಅವಕಾಶ
ಸಿಗ್ಗೀಸ್ ಡೈರಿ, ಅಮೇರಿಕನ್ ಮೊಸರು ತಯಾರಕ, ಡಿಜಿಟಲ್ ಡಿಟಾಕ್ಸ್ ಸವಾಲಿನಲ್ಲಿ ಭಾಗವಹಿಸಲು ಜನರನ್ನು ಆಹ್ವಾನಿಸುತ್ತಿದೆ. ಈ ಚಾಲೆಂಜ್ ಅನ್ನು ಗೆದ್ದರೆ $10000 ಭಾರತೀಯ ರೂ. ಗಳಲ್ಲಿ 8.3 ಲಕ್ಷ ರೂ. ಪಡೆಯಬಹುದು. ಇದರ ಜೊತೆಗೆ ಇನ್ನಿತರ ಬಹುಮಾನವನ್ನು ಕೊಡ ಗೆಲ್ಲಬಹುದು.

ಸಿಗ್ಗಿಯ ಡಿಜಿಟಲ್ ಡಿಟಾಕ್ಸ್ ಕಾರ್ಯಕ್ರಮದ ಭಾಗವಾಗಿ ಒಂದು ತಿಂಗಳ ಕಾಲ ನಿಮ್ಮ ಸ್ಮಾರ್ಟ್‌ ಫೋನ್ ಅನ್ನು ಬಿಟ್ಟುಕೊಡುವಂತೆ ಸಿಗ್ಗೀಸ್ ಡೈರಿ ನಿಮಗೆ ಸವಾಲು ಹಾಕುತ್ತದೆ. ಈ ಸ್ಪರ್ಧೆಯಲ್ಲಿ ಭಾಗವಹಿಸುವವರು ತಮ್ಮ ಸ್ಮಾರ್ಟ್ ಫೋನ್‌ ಗಳನ್ನು ಒಂದು ತಿಂಗಳ ಕಾಲ ಲಾಕ್‌ ಬಾಕ್ಸ್‌ ನಲ್ಲಿ ಇಡಬೇಕು. ಈ ಸ್ಪರ್ಧೆಯಲ್ಲಿ ನೀವು ಗೆದ್ದರೆ ನೀವು ಫ್ಲಿಪ್ ಫೋನ್, ಪ್ರಿಪೇಯ್ಡ್ ಬ್ಯಾಲೆನ್ಸ್ ಹೊಂದಿರುವ ಸಿಮ್ ಕಾರ್ಡ್ ಮತ್ತು 3 ತಿಂಗಳ ಮೌಲ್ಯದ ಸಿಗ್ಗಿ ಯೋಗರ್ಟ್ ಅನ್ನು ಪಡೆಯುತ್ತೀರಿ.

Join Nadunudi News WhatsApp Group