Bike Loan: ಬೈಕ್ ಖರೀದಿಸಲು ಲೋನ್ ಬೇಕಾ…? ಹಾಗಾದರೆ ಈ ದಾಖಲೆಗಳನ್ನ ರೆಡಿ ಇಟ್ಟುಕೊಳ್ಳಿ.

ಬೈಕ್ ಲೋನ್ ಪಡೆಯಲು ಈ ದಾಖಲೆಗಳನ್ನ ರೆಡಿ ಇಟ್ಟುಕೊಳ್ಳಿ

Bike Loan Details: ಸ್ವಂತ ಬೈಕ್ ಖರೀದಿಸುವ ಆಸೆ ಎಲ್ಲರಲ್ಲೂ ಇದ್ದೆ ಇರುತ್ತದೆ. ಆದರೆ ಹಣಕಾಸಿನ ತೊಂದರೆಯಿಂದಾಗಿ ಬೈಕ್ ಖರೀದಿಯ ಆಸೆಯನ್ನು ಕೈಬಿಟ್ಟವರು ಸಾಕಷ್ಟು ಜನರಿದ್ದಾರೆ. ನೀವು ಇನ್ನುಮುಂದೆ ಬೈಕ್ ಖರೀದಿಯ ನಿಮ್ಮ ಕನಸನ್ನು ಸುಲಭವಾಗಿ ನನಸು ಮಾಡಿಕೊಳ್ಳಬಹುದು. ನೀವು ಬ್ಯಾಂಕ್ ಉದ್ಯೋಗಿಯಾಗಿದ್ದರೆ ಅಥವಾ ನಿಮ್ಮ ಸ್ವಂತ ವ್ಯವಹಾರವನ್ನು ಹೊಂದಿದ್ದರೆ ನೀವು ಆಕ್ಸಿಸ್ ಬ್ಯಾಂಕ್‌ ನಿಂದ ಬೈಕ್‌ ಗಾಗಿ ಸಾಲವನ್ನು ಪಡೆಯಬಹುದು.

ಮನೆಯಲ್ಲಿ ಕುಳಿತು ಆನ್‌ ಲೈನ್ ಪ್ರಕ್ರಿಯೆಯ ಮೂಲಕ ನೀವು ಈ ಸಾಲವನ್ನು ಪಡೆಯಬಹುದು. ಲೋನ್ ತೆಗೆದುಕೊಂಡ ನಂತರ, ನೀವು 3 ವರ್ಷಗಳ ಅವಧಿಯಲ್ಲಿ ಸಣ್ಣ EMI ಗಳಲ್ಲಿ ನಿಮ್ಮ ಲೋನನ್ನು ಮರುಪಾವತಿಸಲು ಸಾಧ್ಯವಾಗುತ್ತದೆ. ಬೈಕ್ ಲೋನ್ ಎಷ್ಟು ಸಿಗಲಿದೆ…? ಅದರ EMI ಎಷ್ಟು…? ಎಷ್ಟು ಬಡಿದರದಲ್ಲಿ ಸಾಲ ಸಿಗಲಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

Bike Loan Application
Image Credit: consumer-voice

ಬೈಕ್ ಖರೀದಿಸಲು ಲೋನ್ ಬೇಕಾ…? ಇಲ್ಲಿದೆ ಡಿಟೈಲ್ಸ್
ಬ್ಯಾಂಕ್‌ ನಲ್ಲಿ ಸಂಬಳ ಪಡೆಯುವ ಅಥವಾ ಸ್ವಂತ ವ್ಯವಹಾರ ಹೊಂದಿರುವವರಿಗೆ ಬೈಕ್ ಖರೀದಿಸಲು ಆಕ್ಸಿಸ್ ಬ್ಯಾಂಕ್ 3 ಲಕ್ಷ ರೂ. ವರೆಗೆ ಸಾಲ ನೀಡುತ್ತಿದೆ. ನೀವು ಬ್ಯಾಂಕಿನಲ್ಲಿ ಸಂಬಳ ಪಡೆಯುವವರಾಗಿದ್ದರೆ ನಿಮ್ಮ ವಾರ್ಷಿಕ ವೇತನವು 1.44 ಲಕ್ಷ ರೂಪಾಯಿಗಳಾಗಿದ್ದಾರೆ ಸುಲಭ ವಿಧಾನದ ಮೂಲಕ ಬ್ಯಾಂಕ್ ನಲ್ಲಿ ಸಾಲವನ್ನು ಪಡೆಯಬಹುದು.

ನೀವು ಸ್ವಂತ ವ್ಯವಹಾರವನ್ನು ಹೊಂದಿದ್ದರೆ ಅದು 2.25 ಲಕ್ಷ ರೂಪಾಯಿಗಳಾಗಿರಬೇಕು. ಅರ್ಜಿದಾರರ ವಯಸ್ಸು 21 ರಿಂದ 65 ವರ್ಷಗಳ ನಡುವೆ ಇರಬೇಕು. ಇದಲ್ಲದೇ ಕಳೆದ ಮೂರು ವರ್ಷಗಳ ಬ್ಯಾಂಕ್ ಸ್ಟೇಟ್ ಮೆಂಟ್ ಉತ್ತಮವಾಗಿರಬೇಕು. ನೀವು ಅರ್ಹರಾಗಿದ್ದರೆ ನೀವು ಆಕ್ಸಿಸ್ ಬ್ಯಾಂಕ್ ಬೈಕ್ ಸಾಲವನ್ನು ಪಡೆಯಬಹುದು . ಈ ಸಾಲದ ಮೇಲೆ ಬ್ಯಾಂಕ್ ನಿಮಗೆ 15.50 ರಿಂದ 25.00% ವಾರ್ಷಿಕ ಬಡ್ಡಿ ದರವನ್ನು ವಿಧಿಸಲಿದೆ. ಆದರೆ ಸಿವಿಲ್ ಸ್ಕೋರ್ ಉತ್ತಮವಾಗಿದ್ದರೆ ಅವರು ಇನ್ನೂ ಕಡಿಮೆ ಶೇಕಡಾವಾರು ಮೊತ್ತದಲ್ಲಿ ಬ್ಯಾಂಕ್‌ ನಿಂದ ಬೈಕ್ ಸಾಲ ಪಡೆಯಬಹುದು.

Bike Loan Details
Image Credit: idfcfirstbank

ಬೈಕ್ ಲೋನ್ ಪಡೆಯಲು ಈ ದಾಖಲೆಗಳನ್ನ ರೆಡಿ ಇಟ್ಟುಕೊಳ್ಳಿ
•ಆಧಾರ್ ಕಾರ್ಡ್

Join Nadunudi News WhatsApp Group

•ಪ್ಯಾನ್ ಕಾರ್ಡ್

•ಸಂಬಳ ಚೀಟಿ

•ಆದಾಯ ತೆರಿಗೆ ರಿಟರ್ನ್

•ಪಾಸ್‌ ಪೋರ್ಟ್ ಗಾತ್ರದ ಫೋಟೋ

•ಮೊಬೈಲ್ ಸಂಖ್ಯೆ

ಆಕ್ಸಿಸ್ ಬ್ಯಾಂಕ್ ದ್ವಿಚಕ್ರ ವಾಹನ ಸಾಲಕ್ಕೆ ಅರ್ಜಿ ಸಲ್ಲಿಸುವುದು ಹೇಗೆ…?
•ಇದಕ್ಕಾಗಿ, ನೀವು ಮೊದಲು ಬ್ಯಾಂಕಿನ ಅಧಿಕೃತ ವೆಬ್‌ಸೈಟ್‌ಗೆ ಹೋಗಬೇಕು.

•ಇದರ ನಂತರ, ಮುಖಪುಟದಲ್ಲಿ ಎಕ್ಸ್‌ ಪ್ಲೋರ್ ಪ್ರಾಡಕ್ಟ್ಸ್ ಆಯ್ಕೆಯಲ್ಲಿ ಟೂ ವೀಲರ್ ಲೋನ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

•ಇದರ ನಂತರ ನೀವು ನಿಮ್ಮ ಮೊಬೈಲ್ ಸಂಖ್ಯೆ, ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ.

•ಈಗ ನಿಮ್ಮ ರಾಜ್ಯ, ನಗರ ಮತ್ತು ದ್ವಿಚಕ್ರ ವಾಹನ ಮಾದರಿಯನ್ನು ಆಯ್ಕೆಮಾಡಿ.

•ಇದರ ನಂತರ, ಕೆಲವು ಪ್ರಮುಖ ಮಾಹಿತಿಯನ್ನು ಭರ್ತಿ ಮಾಡಿ ಮತ್ತು ಡಾಕ್ಯುಮೆಂಟ್ ಅನ್ನು ಸ್ಕ್ಯಾನ್ ಮಾಡಿ ಮತ್ತು ಅಪ್ಲೋಡ್ ಮಾಡಿ.

•ಇದನ್ನು ಮಾಡಿದ ನಂತರ, ಸಾಲದ ಮೊತ್ತ ಮತ್ತು ಪಾವತಿ ಅವಧಿಯನ್ನು ಆಯ್ಕೆಮಾಡಿ.

•ಅಂತಿಮವಾಗಿ ಸಲ್ಲಿಸು ಆಯ್ಕೆಯನ್ನು ಕ್ಲಿಕ್ ಮಾಡಿದರೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮುಕ್ತಾಯಗೊಳ್ಳುತ್ತದೆ.

Bike Loan Intrestrate
Image Credit: Zeebiz

Join Nadunudi News WhatsApp Group