Blood Groups: ಯಾವ ರಕ್ತದ ಗುಂಪಿನವರು ಯಾವ ಆಹಾರ ಸೇವಿಸಬೇಕು, ರಕ್ತದ ಗುಂಪಿಗೆ ತಕ್ಕಂತೆ ಇದೆ ಆಹಾರ ಪದ್ಧತಿ

ನಮ್ಮ ರಕ್ತದ ಗುಂಪಿಗೆ ಅನುಗುಣವಾಗಿ ಆಹಾರ ಸೇವಿಸಿದರೆ ನಾವು ಆರೋಗ್ಯವಾಗಿರಬಹುದು.

Blood Groups And Food: ಪ್ರತಿಯೊಬ್ಬ ವ್ಯಕ್ತಿಯು ಆರೋಗ್ಯವಾಗಿರಲು ಉತ್ತಮ ಆಹಾರವನ್ನೇ ತಿನ್ನಬೇಕು, ಮನಷ್ಯನ ಆರೋಗ್ಯವು ಆತ ತಿನ್ನುವ ಆಹಾರವನ್ನು ಅವಲಂಭಿಸಿರುತ್ತದೆ. ಯಾವ ಸಮಯದಲ್ಲಿ ಆಹಾರ ಸೇವಿಸಬೇಕು, ಯಾರು ಯಾವ ರೀತಿಯ ಆಹಾರ ಸೇವಿಸಬೇಕು ಇವೆಲ್ಲಾ ಬಹಳ ಗಣನೆಗೆ ತೆಗೆದುಕೊಳ್ಳುವ ವಿಚಾರ ಆಗಿದೆ.

ಅಷ್ಟೇ ಅಲ್ಲದೆ ಆಹಾರವು ರಕ್ತದ ಗುಂಪಿನ ಮೇಲೆ ಅವಲಂಬಿತವಾಗಿರುತ್ತದೆ ಎಂದು ತಜ್ಞರು ಹೇಳಿಕೆ ನೀಡಿದ್ದಾರೆ. ಹೌದು, ನಮ್ಮ ರಕ್ತದ ಗುಂಪಿನ ಪ್ರಕಾರ ಆಹಾರ ಕ್ರಮದಲ್ಲಿ ಬದಲಾವಣೆ ಮಾಡಿಕೊಳ್ಳಬೇಕು ಹಾಗು ರಕ್ತದ ಗುಂಪಿಗೆ ಅನುಗುಣವಾಗಿ ಆಹಾರ ಸೇವಿಸಿದರೆ ದೇಹ ಆರೋಗ್ಯವಾಗಿರುವುದರ ಜೊತೆಗೆ ತೂಕವೂ ನಿಯಂತ್ರಣದಲ್ಲಿರುತ್ತದೆ ಎನ್ನುತ್ತಾರೆ ತಜ್ಞರು.

Blood Groups New Updates
Image Credit: 1mg

‘A’ ರಕ್ತದ ಗುಂಪು ಇರುವವರು ಈ ರೀತಿಯ ಆಹಾರ ಸೇವಿಸಬೇಕು

‘ಎ’ ರಕ್ತದ ಗುಂಪು ಇರುವವರು ಹಣ್ಣು, ತರಕಾರಿ, ಸಿರಿಧಾನ್ಯಗಳನ್ನೂ ಸೇವಿಸಬೇಕು ಹಾಗು ಸಮುದ್ರ ಆಹಾರ, ಅನಾನಸ್, ಆಲಿವ್ ಎಣ್ಣೆ, ಸೋಯಾ ತಿನ್ನಬೇಕು. ‘ಎ’ ರಕ್ತದ ಗುಂಪು ಇರುವವರು ಗೋಧಿ, ಕಾರ್ನ್, ಕಿಡ್ನಿ ಬೀನ್ಸ್ ತೆಗೆದುಕೊಳ್ಳಬೇಡಿ ಎಂದು ತಜ್ಞರು ಹೇಳುತ್ತಾರೆ.

B’ ರಕ್ತದ ಗುಂಪು ಇರುವವರು ಈ ರೀತಿಯ ಆಹಾರ ಸೇವಿಸಬೇಕು

Join Nadunudi News WhatsApp Group

‘ಬಿ’ ರಕ್ತದ ಗುಂಪಿನವರು ತಮ್ಮ ಆಹಾರದಲ್ಲಿ ಹಣ್ಣುಗಳು, ಡೈರಿ ಉತ್ಪನ್ನಗಳು, ಸಮುದ್ರಾಹಾರ ಮತ್ತು ಧಾನ್ಯಗಳನ್ನ ಸೇರಿಸಿಕೊಳ್ಳಬೇಕು ಎಂದು ತಜ್ಞರು ಹೇಳುತ್ತಾರೆ. ಈ ರಕ್ತದ ಗುಂಪಿನ ಜನರು ತೂಕ ಇಳಿಸಿಕೊಳ್ಳಲು ಬಯಸಿದರೆ ಅವರು ಹಸಿರು ತರಕಾರಿಗಳು, ಮೊಟ್ಟೆಗಳು, ಯಕೃತ್ತು ಮತ್ತು ಲೈಕೋರೈಸ್ ಚಹಾವನ್ನ ಕುಡಿಯಬೇಕು.

Blood Groups And Food
Image Credit: Balanceintohealth

‘AB’ ರಕ್ತದ ಗುಂಪು ಇರುವವರು ಈ ರೀತಿಯ ಆಹಾರ ಸೇವಿಸಬೇಕು

‘ಎಬಿ’ ರಕ್ತದ ಗುಂಪಿನವರು ಡೈರಿ, ಮೀನು, ಧಾನ್ಯಗಳು, ಹಣ್ಣುಗಳು ಮತ್ತು ತರಕಾರಿಗಳನ್ನ ತಿನ್ನಬೇಕು ಎಂದು ತಜ್ಞರು ಹೇಳುತ್ತಾರೆ. ಎಬಿ ರಕ್ತದ ಗುಂಪಿನವರು ಚಿಕನ್, ಕಾರ್ನ್ ಮತ್ತು ಬೀನ್ಸ್ ತೆಗೆದುಕೊಳ್ಳಬೇಕು.

‘O’ ರಕ್ತದ ಗುಂಪು ಇರುವವರು ಈ ರೀತಿಯ ಆಹಾರ ಸೇವಿಸಬೇಕು

‘O’ ರಕ್ತದ ಗುಂಪಿನವರು ಪ್ರೋಟೀನ್ ಯುಕ್ತ ಆಹಾರವನ್ನ ಸೇವಿಸಬೇಕು. ಅವರು ಹೆಚ್ಚಾಗಿ ಮಾಂಸ, ಮೀನು, ಹಸಿರು ತರಕಾರಿಗಳು ಮತ್ತು ಹಣ್ಣುಗಳನ್ನ ತಿನ್ನಬೇಕು. ಅಲ್ಲದೇ ಬೀನ್ಸ್ ಮತ್ತು ಕಾಳುಗಳು ಆಹಾರದ ಭಾಗವಾಗಿರಬೇಕು. ಸಮುದ್ರ ಆಹಾರ, ಸಮುದ್ರ ಸಸ್ಯ, ಕೋಸುಗಡ್ಡೆ, ಪಾಲಕ್, ಆಲಿವ್ ಎಣ್ಣೆಯನ್ನ ತೆಗೆದುಕೊಳ್ಳುವುದರಿಂದ ರಕ್ತದ ಗುಂಪಿನ ಜನರು ತೂಕವನ್ನ ಕಳೆದುಕೊಳ್ಳಬಹುದು. ಓ ರಕ್ತದ ಗುಂಪಿನವರು ಗೋಧಿ, ಜೋಳ ಮತ್ತು ಡೈರಿ ಉತ್ಪನ್ನಗಳಿಂದ ದೂರವಿರುವುದು ಉತ್ತಮ. ಹೀಗೆ ನಿಮ್ಮ ರಕ್ತ ಗುಂಪಿಗೆ ಅನುಗುಣವಾಗುವ ಆಹಾರ ಶೈಲಿಯನ್ನು ಅಳವಡಿಸಿಕೊಂಡು ಆರೋಗ್ಯವಾಗಿರಿ.

Join Nadunudi News WhatsApp Group