Blue Corner Notice: ಪ್ರಜ್ವಲ್ ರೇವಣ್ಣಗೆ ಬಂತು ಬ್ಲೂ ಕಾರ್ನರ್ ನೋಟೀಸ್, ಏನಿದು ಬ್ಲೂ ಕಾರ್ನರ್ ನೋಟೀಸ್…?

ಈ ಬ್ಲೂ ಕಾರ್ನರ್ ನೋಟಿಸ್ ಎಂದರೇನು...? ಅದು ಯಾವ ರೀತಿಯಲ್ಲಿರುತ್ತದೆ...?

Blue Corner Notice Meaning: ಲೋಕಸಭಾ ಚುನಾವಣೆಯ ಸಮಯದಲ್ಲಿಯೇ ಪ್ರಜ್ವಲ್ ರೇವಣ್ಣ ಅವರ ಪೆಣ್ ಡ್ರೈವ್ ಕೇಸ್ ಪ್ರಕರಣ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಇನ್ನು ಅಶ್ಲೀಲ ವಿಡಿಯೋಗಳಿರುವ ಪೆನ್ ಡ್ರೈವ್ ಪ್ರಕರಣ ಹೊರಬೀಳುತ್ತಿದ್ದಂತೆ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಏಪ್ರಿಲ್ 28 ರ ರಾತ್ರಿ ಜರ್ಮನಿಗೆ ಪರಾರಿಯಾಗಿದ್ದಾರೆ.

ಪ್ರಕರಣದ ತನಿಖೆಯ ಭಾಗವಾಗಿ ಸಿಬಿಐ ಅಧಿಕಾರಿಗಳು ಪ್ರಜ್ವಲ್ ವಿರುದ್ಧ ‘ಬ್ಲೂ ಕಾರ್ನರ್ ನೋಟಿಸ್’ ಜಾರಿ ಮಾಡಿದ್ದಾರೆ. ಅಷ್ಟಕ್ಕೂ ಈ ಬ್ಲೂ ಕಾರ್ನರ್ ನೋಟಿಸ್ ಎಂದರೇನು…? ಅದು ಯಾವ ರೀತಿಯಲ್ಲಿರುತ್ತದೆ…? ಎನ್ನುವ ಬಗ್ಗೆ ಸಾಕಷ್ಟು ಜನರಿಗೆ ಮಾಹಿತಿ ತಿಳಿದಿಲ್ಲ. ನಾವೀಗ ಈ ಲೇಖನದಲ್ಲಿ ಈ ವಿಚಾರಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.

Blue Corner Notice issued against Prajwal
Image Credit: Lokmatnews

ಏನಿದು ಬ್ಲೂ ಕಾರ್ನರ್ ನೋಟೀಸ್…?
ನೀಲಿ ಅಥವಾ Blue Corner Notice ಸೂಚನೆಯು ಇಂಟರ್‌ ಪೋಲ್‌ ನ ಕೋಡೆಡ್ ಸೂಚನೆಗಳ ಒಂದು ಭಾಗವಾಗಿದೆ. ಈ ಸೂಚನೆಯು ಜಾರಿಗೆ ಬಂದರೆ, ಪ್ರಪಂಚದಾದ್ಯಂತದ ವಿವಿಧ ದೇಶಗಳ ಅಧಿಕಾರಿಗಳಿಗೆ ಮಾಹಿತಿ, ಎಚ್ಚರಿಕೆಗಳು ಮತ್ತು ಮನವಿಗಳನ್ನು ಕಳುಹಿಸಲಾಗುತ್ತದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸಲು ಪ್ರಮುಖ ನಿರ್ಣಾಯಕ ಅಪರಾಧಗಳ ಮಾಹಿತಿಯನ್ನು ಹಂಚಿಕೊಳ್ಳಲು ಈ ಸೂಚನೆಯು ಸಹಾಯ ಮಾಡುತ್ತದೆ. ವ್ಯಕ್ತಿಯ ಗುರುತು, ಸ್ಥಳ ಅಥವಾ ಚಟುವಟಿಕೆಗಳ ಕುರಿತು ಹೆಚ್ಚುವರಿ ಮಾಹಿತಿಯನ್ನು ಸಂಗ್ರಹಿಸಲು ‘Blue Notice’ ಸಹಾಯ ಮಾಡುತ್ತದೆ.

ಬ್ಲೂ ಕಾರ್ನರ್ ನೋಟಿಸ್‌ ಗಳಂತಹ ಒಟ್ಟು 07 ಏಳು ವಿಧದ ನೋಟಿಸ್‌ ಗಳನ್ನು ತನಿಖಾಧಿಕಾರಿ ಅಥವಾ ಸಂಬಂಧಪಟ್ಟ ಸಂಸ್ಥೆ, ಅಧಿಕಾರಿಗಳು ಪ್ರಕರಣಕ್ಕೆ ಅನುಗುಣವಾಗಿ ನೀಡಬಹುದು. ‘ಕೆಂಪು ಸೂಚನೆ’, ‘ಹಳದಿ ನೋಟೀಸು’, ‘ಬ್ಲೂ ನೋಟಿಸ್‌ ’, ‘ಕಪ್ಪು ನೋಟೀಸು’, ‘ಹಸಿರು ನೋಟೀಸು’, ‘ಕಿತ್ತಳೆ ನೋಟೀಸು’ ಮತ್ತು ‘ನೇರಳೆ ನೋಟೀಸು’ ಎಂಬ ಏಳು ನೋಟೀಸ್‌ ಗಳು ವಿಭಿನ್ನ ಅರ್ಥಗಳನ್ನು ಹೊಂದಿವೆ.

Blue Corner Notice Meaning
Image Credit: Boldsky

ವಿವಿಧ ನೋಟಿಸ್ ಗಳ ಬಗ್ಗೆ ತಿಳಿದುಕೊಳ್ಳಿ
•Red Notice
ಅಪರಾಧ ಚಟುವಟಿಕೆಯಲ್ಲಿ ತೊಡಗಿರುವ ವ್ಯಕ್ತಿಯನ್ನು ಪತ್ತೆ ಮಾಡುವುದು, ಬಂಧಿಸುವುದು ಅಥವಾ ಕಾನೂನು ಕ್ರಮ ಜರುಗಿಸುವುದು ಎಂದರ್ಥ.

Join Nadunudi News WhatsApp Group

•Yellow Notice
ಕಾಣೆಯಾದವರನ್ನು ಪತ್ತೆ ಹಚ್ಚಲು ಸಹಾಯ ಮಾಡುವ ಸೂಚನೆ ಇದಾಗಿದೆ. ಅಪ್ರಾಪ್ತ ವಯಸ್ಕರು ಅಥವಾ ತಮ್ಮನ್ನು ಗುರುತಿಸಿಕೊಳ್ಳಲು ಸಾಧ್ಯವಾಗದ ವ್ಯಕ್ತಿಗಳನ್ನು ಒಳಗೊಂಡ ಪ್ರಕರಣಗಳಲ್ಲಿ ಇದನ್ನು ಸಾಮಾನ್ಯವಾಗಿ ಜಾರಿಗೊಳಿಸಲಾಗುತ್ತದೆ.

•Black Notice
ಈ ಕಪ್ಪು ನೋಟೀಸ್ ಅಪರಿಚಿತ ವ್ಯಕ್ತಿಗಳ ಶವಗಳ ಬಗ್ಗೆ ಮಾಹಿತಿ ಪಡೆಯಲು ಅಧಿಕಾರಿಗಳಿಗೆ ಸಹಾಯ ಮಾಡುತ್ತದೆ.

•Green Notice
ವ್ಯಕ್ತಿಯ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆ ಎಚ್ಚರಿಸಲು, ಅಲ್ಲಿ ವ್ಯಕ್ತಿಯನ್ನು ಸಾರ್ವಜನಿಕ ಸುರಕ್ಷತೆಗೆ ಸಂಭಾವ್ಯ ಬೆದರಿಕೆ ಎಂದು ಪರಿಗಣಿಸಲಾಗುತ್ತದೆ.

•Orange Notice
ಈ ಸೂಚನೆಯು ಸಾರ್ವಜನಿಕ ಸುರಕ್ಷತೆಗೆ ಗಂಭೀರ ಮತ್ತು ಸನ್ನಿಹಿತ ಬೆದರಿಕೆಯನ್ನು ಪ್ರತಿನಿಧಿಸುತ್ತದೆ. ಘಟನೆ, ವ್ಯಕ್ತಿ, ವಿಷಯ ಅಥವಾ ಪ್ರಕ್ರಿಯೆಯ ಬಗ್ಗೆ ಎಚ್ಚರಿಸಲು ಇದನ್ನು ಅಳವಡಿಸಲಾಗಿದೆ.

•Purple Notice
ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವವರು ಬಳಸುವ ವಿಧಾನಗಳು, ಸಾಮಗ್ರಿಗಳು, ಆಯುಧಗಳ ಬಗ್ಗೆ ಮಾಹಿತಿ ಪಡೆಯಲು ಅಧಿಕಾರಿಗಳು ಈ ನೇರಳೆ ನೋಟೀಸ್ ಅನ್ನು ಅನ್ವಯಿಸುತ್ತಾರೆ.

Types Of Notice
Image Credit: Boldsky

Join Nadunudi News WhatsApp Group