BMW: ಸಿಂಗಲ್ ಚಾರ್ಜ್ ನಲ್ಲಿ 440 Km ರೇಂಜ್, ಈ BMW ಕಾರಿಗೆ ದೇಶದಲ್ಲಿ ಹೆಚ್ಚಾಗಿದೆ ಬೇಡಿಕೆ.

ಇದೀಗ BMW Company ಎಲೆಕ್ಟ್ರಿಕ್ SUV ಆವೃತ್ತಿಯನ್ನು ಬಿಡುಗಡೆ ಮಾಡಿದೆ.

BMW iX1 electric SUV launch: ದೇಶದಲ್ಲಿ ಈಗಾಗಲೇ ಸಾಕಷ್ಟು ರೀತಿಯ ಎಲೆಕ್ಟ್ರಿಕ್ ಕಾರ್ ಗಳನ್ನೂ (Electric Cras) ಅದೆಷ್ಟೋ ಪ್ರಸಿದ್ಧ ಕಂಪನಿಗಳು ಬಿಡುಗಡೆ ಮಾಡುತ್ತಿದೆ. ಹೊಸ ರೀತಿಯ ಫೀಚರ್ ಗಳೊಂದಿಗೆ, ವಿಭಿನ್ನ ಕೊಡುಗೆಗಳ ಜೊತೆಗೆ ವಿವಿಧ ರೀತಿಯ ಎಲೆಕ್ಟ್ರಿಕ್ ಕಾರ್ ಗಳನ್ನೂ ಮಾರುಕಟ್ಟೆಗೆ ತರಲಾಗುತ್ತಿದೆ. ಇದೀಗ ಬಿಎಂಡಬ್ಲ್ಯೂ ಕಂಪನಿ (BMW Company) ಎಲೆಕ್ಟ್ರಿಕ್ SUV ಆವೃತ್ತಿಯನ್ನು ಬಿಡುಗಡೆ ಮಾಡಿದೆ.

BMW iX1 Electric SUV Features
Image Credit: Indiacarnews

BMW iX1 Electric SUV Launch
ಐಷಾರಾಮಿ ಕಾರು ಉತ್ಪಾದನಾ ಕಂಪನಿಯಾಗಿರುವ BMW ಕಂಪನಿಯು ತನ್ನ ಬಹುನೀರಿಕ್ಷಿತ BMW IX1 XDrive30 ಎಲೆಕ್ಟ್ರಿಕ್ SUV ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ IX, I4 ಮತ್ತು I7 ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡುತ್ತಿರುವ BMW ಕಂಪನಿ ಇದೀಗ X1 ಆಧರಿಸಿ ನಿರ್ಮಾಣವಾಗಿರುವ IX1 EV ಮಾದರಿಯನ್ನು ಪರಿಚಯಿಸಿದೆ.

BMW iX1 EV Battery Capacity And Range
ಇದೀಗ ಹೊಸ BMW iX1 EV ಕಾರ್ ನಲ್ಲಿ 66 .4kWh ಬ್ಯಾಟರಿ ಪ್ಯಾಕ್ ಜೊತೆ ಡ್ಯುಯಲ್ ಎಲೆಕ್ಟ್ರಿಕ್ ಮೋಟಾರ್ ಅನ್ನು ಜೋಡಣೆ ಮಾಡಲಾಗಿದೆ. iX1 EV ಗರಿಷ್ಠ 440 ಕಿಲೋಮೀಟರ್ ಮೈಲೇಜ್ ಅನ್ನು ನೀಡುತ್ತದೆ. ಕೇವಲ 5 .6 ಸೆಕೆಂಡುಗಳಲ್ಲಿ ಸೊನ್ನೆಯಿಂದ 100 ಕಿಲೋಮೀಟರ್ ವೇಗಪಡೆದುಕೊಳ್ಳುವ ಮೂಲಕ ಪ್ರತಿ ಗಂಟೆಗೆ ಗರಿಷ್ಠ 180 ಕಿಲೋಮೀಟರ್ ಟಾಪ್ ಸ್ಪೀಡ್ ನಲ್ಲಿ ಚಲಿಸುತ್ತದೆ. ಹಾಗೆ 130kW ಡಿಸಿ ಫಾಸ್ಟ್ ಚಾರ್ಜಿಂಗ್ ನಿಂದ ಕೇವಲ 29 ನಿಮಿಷಗಳಲ್ಲಿ ಶೇಕಡಾ 80 ರಷ್ಟು ಚಾರ್ಜ್ ಆಗುತ್ತದೆ.

BMW iX1 electric SUV launch
Image Credit: Timesofindia

BMW iX1 Electric SUV Features
ಹೊಸ iX1 EV ಕಾರ್ ನ ಮುಂಭಾಗದ ಗ್ರಿಲ್ ನಲ್ಲಿ i ಬ್ಯಾಡ್ಜ್ ಸೇರಿದಂತೆ 18 ಇಂಚಿನ ಅಲಾಯ್ ವ್ಹೀಲ್, ಅಡಾಪ್ಟಿವ್ LED ಹೆಡ್ ಲೈಟ್, ಆಟೋಮ್ಯಾಟಿಕ್ ಟೈಲ್ ಗೇಟ್ ಆಪರೇಷನ್ ಸಿಸ್ಟಂ, ಪನೊರಮಿಕ್ ಸನ್ ರೂಫ್, ಹಾಗೆ Grey, Silver, Black and White ಬಣ್ಣಗಳಲ್ಲಿ iX1 EV ಲಭ್ಯವಿದೆ. BMW iX1 ಕಾರ್ ನ ಒಳಭಾಗದಲ್ಲಿ ಕೂಡ ಹಲವಾರು ಫೀಚರ್ಸ್ ಪಡೆದಿದೆ. ಆಕರ್ಷಕವಾದ ಡ್ಯಾಶ್ ಬೋರ್ಡ್, 10 .7 ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್ ಮೆಂಟ್ ಸಿಸ್ಟಂ, 10 .25 ಇಂಚಿನ ಡಿಜಿಟಲ್ ಇನ್ಪಾರ್ಮೆಷನ್ ಡಿಸ್ ಪ್ಲೇ, 6 ಏರ್ ಬ್ಯಾಗ್ ಗಳು ಸೇರಿದಂತೆ ಹಲವಾರು ಸೌಲಭ್ಯಗಳಿವೆ.

BMW iX1 EV Price
iX1 EV ಕಾರು ಈ ಹಿಂದಿನ ಮೂರು EV ಕಾರ್ ಗಳಿಗಿಂತ ಅತಿ ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. BMW iX1 EV ಕಾರ್ ನ ಬೆಲೆ ದೆಹಲಿ ಎಕ್ಸ್ ಶೋರೂಮ್ ಪ್ರಕಾರ 66 .90 ಲಕ್ಷ ಬೆಲೆಯನ್ನು ಹೊಂದಿದೆ. iX1 EV Mercedes Benz ECU and Volvo XC40 Recharge Car ಗಿಂತ ಭರ್ಜರಿ ಬೇಡಿಕೆ ಪಡೆಯುವ ನಿರೀಕ್ಷೆಯಲ್ಲಿದೆ.

Join Nadunudi News WhatsApp Group

Join Nadunudi News WhatsApp Group