BoAt New: ಒಮ್ಮೆ ಚಾರ್ಜ್ ಮಾಡಿದರೆ 5 ದಿನ ಬ್ಯಾಟರಿ ಬ್ಯಾಕ್ ಅಪ್, ಈ ಅಗ್ಗದ ಸ್ಮಾರ್ಟ್ ವಾಚಿಗೆ ಸಕತ್ ಡಿಮ್ಯಾಂಡ್

5 ದಿನದ ಬ್ಯಾಟರಿ ಬ್ಯಾಕಪ್ ಹೊಂದಿರುವ ನೂತನ ವಿನ್ಯಾಸದ ಸ್ಮಾರ್ಟ್ ವಾಚ್ ಲಾಂಚ್ ಮಾಡಿದ ಬೋಟ್

BoAt Ultima Select Smart Watch: ಸದ್ಯ ಜನರು ಟ್ರೆಂಡ್ ಗೆ ತಕ್ಕಂತೆ ಬದಲಾಗುತ್ತಿದ್ದಾರೆ. ಈಗಂತೂ ಎಲ್ಲವು ಡಿಜಿಟಲೀಕರಣವಾಗಿದೆ. ಜನರ ಕೈಯಲ್ಲಿ ಕೂಡ ಸ್ಮಾರ್ಟ್ ವಾಚ್ ರಾರಾಜಿಸುತ್ತಿದೆ. ಹೆಚ್ಚಿನ ಜನರು ಇದೀಗ ಸ್ಮಾರ್ಟ್ ವಾಚ್ ಗಳನ್ನೂ ಬಳಸುತ್ತಿದ್ದು, ಸಾಮಾನ್ಯ ವಾಚ್ ಗಳು ಮೂಲೆ ಸೇರುತ್ತಿವೆ ಎನ್ನಬಹುದು.

ಇನ್ನು ಮಾರುಕಟ್ಟೆಯಲ್ಲಿ BoAT ಕಂಪನಿಯು ಸ್ಮಾರ್ಟ್ ವಾಚ್ ತಯಾರಿಕೆಯಲ್ಲಿ ಮುಂಚೂಣಿಯಲ್ಲಿದೆ. ಇದೀಗ ಕಂಪನಿಯು ನವೀನ ವಿನ್ಯಾಸದೊಂದೊಗೆ ಹೊಸ ಸ್ಮಾರ್ಟ್ ವಾಚ್ ಅನ್ನು ಲಾಂಚ್ ಮಾಡಿದೆ. ಈ ಸ್ಮಾರ್ಟ್ ವಾಚ್ ನ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

BoAt Ultima Select Smart Watch
Image Credit: Fonearena

ನೂತನ ವಿನ್ಯಾಸದ ಸ್ಮಾರ್ಟ್ ವಾಚ್ ಲಾಂಚ್ ಮಾಡಿದ ಬೋಟ್

BoAt Ultima Select ಸ್ಮಾರ್ಟ್ ವಾಚ್ 2.01 ಇಂಚಿನ AMOLED ಡಿಸ್ಪ್ಲೇ ಹೊಂದಿದೆ. ಈ ಡಿಸ್ಪ್ಲೇ 410 x 502 ಪಿಕ್ಸೆಲ್ ಗಳ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ. ಇದು 1000 ನಿಟ್‌ಗಳ ಗರಿಷ್ಠ ಹೊಳಪಿನೊಂದಿಗೆ ಬರುತ್ತದೆ. ಈ ಸ್ಮಾರ್ಟ್ ವಾಚ್ 100 ಪ್ಲಸ್ ಗ್ರಾಹಕೀಯಗೊಳಿಸಬಹುದಾದ ವಾಚ್‌ ಫೇಸ್‌ ಗಳನ್ನು ಸಹ ಒಳಗೊಂಡಿದೆ. ಇದಲ್ಲದೆ, ಸ್ಮಾರ್ಟ್ ವಾಚ್ IP68 ರೇಟಿಂಗ್ ಅನ್ನು ಹೊಂದಿದೆ, ಇದು ನೀರು ಮತ್ತು ಧೂಳಿನ ವಿರುದ್ಧ ರಕ್ಷಣೆ ನೀಡುತ್ತದೆ.

BoAt Ultima Select ಸ್ಮಾರ್ಟ್ ವಾಚ್ ಬ್ಲೂಟೂತ್ ಕರೆ ಮಾಡುವ ಬೆಂಬಲವನ್ನು ಸಹ ಹೊಂದಿದೆ. ಇದರಿಂದ ಸ್ಮಾರ್ಟ್ ವಾಚ್ ಮೂಲಕವೇ ಫೋನ್ ಕರೆಗಳನ್ನು ನಿಯಂತ್ರಿಸಬಹುದಾಗಿದೆ. ಇದು ಇನ್ ಬಿಲ್ಟ್ ಮೈಕ್ ಮತ್ತು ಡಯಲ್ ಪ್ಯಾಡ್ ಅನ್ನು ಹೊಂದಿದೆ. ಜೊತೆಗೆ 10 ಕಾಂಟ್ಯಾಕ್ಟ್ ಗಳನ್ನು ಸ್ಮಾರ್ಟ್ ವಾಚ್ ನಲ್ಲಿ ಸೇವ್ ಮಾಡಿಕೊಳ್ಳಬಹುದು.

Join Nadunudi News WhatsApp Group

BoAt Ultima Select Smart Watch Price
Image Credit: Fonearena

5 ದಿನದ ಬ್ಯಾಟರಿ ಬ್ಯಾಕಪ್ ಹೊಂದಿರುವ ಈ ಸ್ಮಾರ್ಟ್ ವಾಚ್ ಬೆಲೆ ಎಷ್ಟು…?
ಸ್ಮಾರ್ಟ್ ವಾಚ್ ಹೃದಯ ಬಡಿತ, SpO2, ಒತ್ತಡ ಮತ್ತು ನಿದ್ರೆ ಟ್ರ್ಯಾಕಿಂಗ್‌ ನಂತಹ ವಿವಿಧ ಆರೋಗ್ಯ ಟ್ರ್ಯಾಕ್‌ ಗಳನ್ನು ಸಹ ಒಳಗೊಂಡಿದೆ. ಹೆಲ್ತ್ ಟ್ರ್ಯಾಕರ್ ಜೊತೆಗೆ, ಸ್ಮಾರ್ಟ್ ವಾಚ್ ಪಾವತಿ QR, ಕುಳಿತುಕೊಳ್ಳುವ ಎಚ್ಚರಿಕೆಗಳು, ಕ್ಯಾಮೆರಾ ನಿಯಂತ್ರಣ, ಅಂತರ್ನಿರ್ಮಿತ ಆಟಗಳು, ಸಂಗೀತ ನಿಯಂತ್ರಣ, ಹವಾಮಾನ, ಅಲಾರ್ಮ್, ಕೌಂಟ್‌ಡೌನ್, ಸ್ಟಾಪ್‌ವಾಚ್, DND, ಫೈನ್ಡ್ ಮೈ ಫೋನ್ ಮುಂತಾದ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ವಿಶೇಷವೆಂದರೆ BoAt Ultima Select ಸ್ಮಾರ್ಟ್ ವಾಚ್ 5 ದಿನಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ. ನೀವು ಈ BoAt Ultima Select ಸ್ಮಾರ್ಟ್ ವಾಚ್ ಅನ್ನು ಕೇವಲ 2999 ರೂ. ಗಳಲ್ಲಿ ಖರೀದಿಸಬಹುದು. ಫೆ. 9 ರಿಂದ ಅಮೆಜಾನ್ ಸೇರಿದಂತೆ ಇನ್ನಿತರ ಆನ್ಲೈನ್ ಫ್ಲಾಟ್ ಫಾರ್ಮ್ ನಲ್ಲಿ ಖರೀಡಿಫ್ ಲಭ್ಯವಿದೆ.

Join Nadunudi News WhatsApp Group