BOB Home Loan: BOB ಬ್ಯಾಂಕ್ ನಲ್ಲಿ 50 ಲಕ್ಷ ಸಾಲ ಪಡೆದರೆ EMI ಎಷ್ಟು ಪಾವತಿಸಬೇಕಾಗುತ್ತದೆ…? ಇಲ್ಲಿದೆ ಡಿಟೈಲ್ಸ್.

BOB ಬ್ಯಾಂಕ್ ನಿಂದ 50 ಲಕ್ಷ ರೂ. ಗಳ ಸಾಲವನ್ನು ಪಡೆದರೆ ಎಷ್ಟು ಬಡ್ಡಿ ವಿಧಿಸಲಾಗುತ್ತದೆ..? ಎಷ್ಟು EMI ಪಾವತಿಸಬೇಕಾಗುತ್ತದೆ...?

BOB Home Loan EMI Details: ಸಾಮಾನ್ಯವಾಗಿ ಎಲ್ಲರು ಕೂಡ ತಮ್ಮ ಸ್ವಂತ ಮನೆ ನಿರ್ಮಾಣ ಅಥವಾ ಖರೀದಿಯ ಕನಸನ್ನು ಕಂಡಿರುತ್ತಾರೆ. ಸ್ವಂತ ಮನೆ ನಿರ್ಮಾಣದ ಕನಸು ನನಸು ಮಾಡಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಇದಕ್ಕಾಗಿ ಹೆಚ್ಚಿನ ಹಣದ ಅಗತ್ಯ ಇರುತ್ತದೆ. ಇನ್ನು ಈ ಕನಸನ್ನು ನನಸು ಮಾಡಿಕೊಳ್ಳಲು ಜನರು ಗೃಹ ಸಾಲದ ಮೊರೆ ಹೋಗುವುದು ಸಹಜ.

ಗೃಹ ಸಾಲವನ್ನು ತೆಗೆದುಕೊಂಡರೆ ಮನೆ ನಿರ್ಮಾಣದ ಜವಾಬ್ದಾರಿಯ ಜೊತೆಗೆ ಸಾಲದ EMI ಪಾವತಿಯ ಹೊರೆಯು ಕೂಡ ಹೆಚ್ಚಾಗುತ್ತದೆ. ಗೃಹ ಸಾಲವನ್ನು ತೆಗೆದುಕೊಂಡರೆ EMI ಬಗ್ಗೆ ಹೆಚ್ಚು ಚಿಂತೆ ಇರುತ್ತದೆ. ನಾವೀಗ ದೇಶದ ಜನಪ್ರಿಯ ಸರ್ಕಾರೀ ವಲಯದ ಬ್ಯಾಂಕ್ ಆಗಿರುವ Bank of Baroda ಬ್ಯಾಂಕ್ ನಿಂದ 50 ಲಕ್ಷ ರೂ. ಗಳ ಸಾಲವನ್ನು ಪಡೆದರೆ ಎಷ್ಟು ಬಡ್ಡಿ ವಿಧಿಸಲಾಗುತ್ತದೆ..? ಎಷ್ಟು EMI ಪಾವತಿಸಬೇಕಾಗುತ್ತದೆ…? ಎನ್ನುವ ಬಗ್ಗೆ ಮಾಹಿತಿ ಹೇಳಲಿದ್ದೇವೆ.

BOB Home Loan EMI Details
Image Credit: Navi

ಬ್ಯಾಂಕ್ ಆಫ್ ಬರೋಡ ಬಡ್ಡಿದರದ ಬಗ್ಗೆ ನಿಮಗೆಷ್ಟು ಗೊತ್ತು…?
ಬ್ಯಾಂಕ್ ಆಫ್ ಬರೋಡದ ಗೃಹ ಸಾಲದ EMI ಬಗ್ಗೆ ತಿಳಿಯಲು ಮೊದಲು ನಾವು ಬ್ಯಾಂಕ್ ನ ಬಡ್ಡಿದರದ ಬಗ್ಗೆ ತಿಳಿದರಬೇಕು. ಕಾರಣ EMI ಬಡ್ಡಿದರವನ್ನು ಅವಲಂಬಿಸಿರುತ್ತದೆ. ಬಡ್ಡಿ ದರವು ಕ್ರೆಡಿಟ್ ಸ್ಕೋರ್ ಅನ್ನು ಅವಲಂಬಿಸಿರುತ್ತದೆ. ಕ್ರೆಡಿಟ್ ಸ್ಕೋರ್ 700 ಮತ್ತು 800 ರ ನಡುವೆ ಇದ್ದರೆ ಬ್ಯಾಂಕ್ ಆಫ್ ಬರೋಡಾದಿಂದ ಗೃಹ ಸಾಲವು ಶೇಕಡಾ 8.40 ರ ಬಡ್ಡಿ ದರದಲ್ಲಿ ಲಭ್ಯವಿದೆ. ವ್ಯಕ್ತಿಯು 20 ವರ್ಷಗಳ ಅವಧಿಯಲ್ಲಿ ಗೃಹ ಸಾಲವನ್ನು ಮರುಪಾವತಿಸುತ್ತಾನೆ ಎಂದು ನಾವು ಭಾವಿಸೋಣ. ಹಾಗಾದರೆ ಈಗ 8.40% ಬಡ್ಡಿ ದರದಲ್ಲಿ 20 ವರ್ಷಗಳವರೆಗೆ ರೂ. 50 ಲಕ್ಷದ ಗೃಹ ಸಾಲದ ಮೇಲೆ EMI ಎಷ್ಟು ಬೀಳುತ್ತದೆ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

BOB ಬ್ಯಾಂಕ್ ನಲ್ಲಿ 50 ಲಕ್ಷ ಸಾಲ ಪಡೆದರೆ EMI ಎಷ್ಟು ಪಾವತಿಸಬೇಕಾಗುತ್ತದೆ
ಬ್ಯಾಂಕ್ ಆಫ್ ಬರೋಡಾ ಹೋಮ್ ಲೋನ್ ಕ್ಯಾಲ್ಕುಲೇಟರ್ ಪ್ರಕಾರ, ಒಬ್ಬ ವ್ಯಕ್ತಿಯು 20 ವರ್ಷಗಳ ಅವಧಿಗೆ ರೂ. 50 ಲಕ್ಷದ ಗೃಹ ಸಾಲವನ್ನು ತೆಗೆದುಕೊಂಡರೆ, ಅವನು ಪ್ರತಿ ತಿಂಗಳು 43,075 ರೂ. ಗಳ ಇಎಂಐ ಅನ್ನು ಶೇಕಡಾ 8.40 ರ ಬಡ್ಡಿ ದರದಲ್ಲಿ ಪಾವತಿಸಬೇಕಾಗುತ್ತದೆ. ಹಾಗೆಯೆ 53,38,054 ಬಡ್ಡಿ ಮಾತ್ರ ಪಾವತಿಸಬೇಕು.

20 ವರ್ಷಗಳಲ್ಲಿ ಅವರು ಒಟ್ಟು 1,03,38,054 ರೂ. ಬಡ್ಡಿ ಮತ್ತು ಅಸಲು ಪಾವತಿಸಬೇಕಾಗುತ್ತದೆ. ಬ್ಯಾಂಕ್ ಆಫ್ ಬರೋಡಾ ಅಥವಾ ಇನ್ನಾವುದೇ ಬ್ಯಾಂಕಿನಿಂದ ನೀವು ಗೃಹ ಸಾಲವನ್ನು ತೆಗೆದುಕೊಂಡರೆ, ನೀವು ಬಡ್ಡಿಯೊಂದಿಗೆ ಸಂಸ್ಕರಣಾ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಬ್ಯಾಂಕ್ ಆಫ್ ಬರೋಡಾವು ರೂ. 50 ಲಕ್ಷದ ಗೃಹ ಸಾಲದ ಮೇಲೆ ಶೇಕಡಾ 0.50 ರಷ್ಟು ಸಂಸ್ಕರಣಾ ಶುಲ್ಕವನ್ನು ಹೊಂದಿದೆ. ಇದರ ಜೊತೆಗೆ ಇತರ ತೆರಿಗೆಗಳ್ನ್ನು ಹೊಂದಿದೆ ಎನ್ನುವುದು ನಿಮಗೆ ತಿಳಿದಿರಲಿ.

Join Nadunudi News WhatsApp Group

BOB Home Loan
Image Credit: News 18

Join Nadunudi News WhatsApp Group