Gas Cylinder: ಮನೆಯಲ್ಲಿ ಕುಳಿತು ವಾಟ್ಸಾಪ್ ಮೂಲಕ ಗ್ಯಾಸ್ ಸಿಲಿಂಡರ್ ಬುಕ್ ಮಾಡುವುದು ಹೇಗೆ…? ಸುಲಭ ವಿಧಾನ

ವಾಟ್ಸಾಪ್ ಮೂಲಕ ಬಹಳ ಸುಲಭವಾಗಿ ನಿಮ್ಮ ಮನೆಗೆ ಗ್ಯಾಸ್ ಸಿಲಿಂಡರ್ ಬುಕ್ ಮಾಡಿಕೊಳ್ಳಬಹುದಾಗಿದೆ, ಇಲ್ಲಿದೆ ವಿಧಾನ

Book Gas Cylinder Through Whatsapp App: ಪ್ರತಿಯೊಬ್ಬರ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಬಳಕೆ ಮಾಡುವುದು ಸಹಜ. ಗ್ಯಾಸ್ ಸಿಲಿಂಡರ್ ಇಲ್ಲದ ಮನೆ ಬಹಳ ಕಡಿಮೆ ಎನ್ನಬಹುದು. ಕೆಲವರಿಗೆ ಗ್ಯಾಸ್ ಬುಕ್ ಮಾಡುವುದೇ ಕಷ್ಟ ಅನಿಸಿ ಬಿಟ್ಟಿದೆ.

ಅಂಥವರು ಈ ಸುದ್ದಿಯನ್ನು ಸರಿಯಾಗಿ ಗಮನಿಸಿ. ಗ್ಯಾಸ್ ಕಂಪನಿಗಳು ತನ್ನ ಗ್ರಾಹಕರಿಗೆ ಯಾವುದೇ ತೊಂದರೆ ಆಗಬಾರದೆಂದು ಉತ್ತಮ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಇನ್ನು ಮುಂದೆ ಬಹಳ ಸುಲಭ ವಿಧಾನದ ಮೂಲಕ ಮನೆಯಲ್ಲೇ ಕುಳಿತು ನಿಮ್ಮ ಮೊಬೈಲ್ ನಲ್ಲಿರುವ ವಾಟ್ಸಾಪ್ ಅಪ್ಲಿಕೇಶನ್ (WhatsApp Application) ಮೂಲಕ ಗ್ಯಾಸ್ ಸಿಲಿಂಡರ್ ಅನ್ನು ಬುಕ್ ಮಾಡಿಕೊಳ್ಳಬಹುದಾಗಿದೆ.

Book Gas Cylinder Through Whatsapp App
Image Credit: Newsnationtv

ವಾಟ್ಸಾಪ್ ಅಪ್ಲಿಕೇಶನ್ ಮೂಲಕ ಗ್ಯಾಸ್ ಸಿಲಿಂಡರ್ ಬುಕ್ ಮಾಡಿಕೊಳ್ಳಬಹುದಾಗಿದೆ

ಸಾಮಾನ್ಯವಾಗಿ ಗ್ರಾಹಕರು ಗ್ಯಾಸ್ ಸಿಲಿಂಡರ್ ಬೇಕಾದಾಗ ತಮ್ಮ ಗ್ಯಾಸ್ ಏಜೆನ್ಸಿ ಸಂಖ್ಯೆ ಅಥವಾ ಅವರ ಏಜೆನ್ಸಿ ಅಥವಾ ವಿತರಕರಿಗೆ ಕರೆ ಮಾಡುವ ಮೂಲಕ ಅಥವಾ ಕಂಪನಿಯ ವೆಬ್ಸೈಟ್ಗೆ ಹೋಗಿ ಅಲ್ಲಿ ಆರ್ಡರ್ ಮಾಡುವ ಮೂಲಕ ಹಲವಾರು ರೀತಿಯಲ್ಲಿ ಕಾಯ್ದಿರಿಸುತ್ತಾರೆ. ಆದರೆ ಈಗ ಹಾಗಿಲ್ಲ ವಾಟ್ಸಾಪ್ ಮೂಲಕವೂ ಬಹಳ ಸುಲಭವಾಗಿ ಹಾಗು ಶೀಘ್ರವಾಗಿ ನಿಮ್ಮ ಗ್ಯಾಸ್ ಸಿಲಿಂಡರ್ ಅನ್ನು ಮನೆಗೆ ತರಿಸಿಕೊಳ್ಳಬಹುದಾಗಿದೆ.

ವಾಟ್ಸಾಪ್ ಮೂಲಕ ಇಂಡೇನ್ ಗ್ರಾಹಕರು ಎಲ್ಪಿಜಿ ಸಿಲಿಂಡರ್ಗಳನ್ನು ಬುಕ್ ಮಾಡಲು ಹೀಗೆ ಮಾಡಿ

Join Nadunudi News WhatsApp Group

ಇಂಡೇನ್ ಗ್ರಾಹಕರು ಎಲ್ಪಿಜಿ ಸಿಲಿಂಡರ್ ಕಾಯ್ದಿರಿಸಲು 7718955555 ಹೊಸ ಸಂಖ್ಯೆಗೆ ಕರೆ ಮಾಡಬಹುದು. ನೀವು ವಾಟ್ಸಾಪ್ ಅಪ್ಲಿಕೇಶನ್ ಮೂಲಕವೂ ಬುಕ್ ಮಾಡಬಹುದು. ವಾಟ್ಸಾಪ್ ಅಪ್ಲಿಕೇಶನ್ ನಲ್ಲಿ ರೀಫಿಲ್ ಎಂದು ಟೈಪ್ ಮಾಡಿ ಮತ್ತು ಅದನ್ನು 7588888824 ಗೆ ಕಳುಹಿಸಿ. ಗ್ರಾಹಕರು ಕಂಪನಿಯಲ್ಲಿ ನೋಂದಾಯಿಸಲಾದ ಮೊಬೈಲ್ ಸಂಖ್ಯೆಯಿಂದ ಮಾತ್ರ ಸಂದೇಶವನ್ನು ಕಳುಹಿಸಲು ಸಾಧ್ಯವಾಗುತ್ತದೆ.

LPG Gas Booking Through WhatsApp
Image Credit: Zeebiz

ಎಚ್ಪಿ ಗ್ರಾಹಕರಾಗಿದ್ದರೆ ವಾಟ್ಸಾಪ್ ಮೂಲಕ ಎಲ್ಪಿಜಿ ಸಿಲಿಂಡರ್ಗಳನ್ನು ಈ ರೀತಿಯಾಗಿ ಕಾಯ್ದಿರಿಸಿ

ನೀವು ವಾಟ್ಸಾಪ್ ಬಳಸಿ 9222201122 ಸಂದೇಶವನ್ನು ಕಳುಹಿಸಬಹುದು. ನೀವು ಬುಕ್ ಎಂದು ಟೈಪ್ ಮಾಡಿ ಈ ಸಂಖ್ಯೆಗೆ ಕಳುಹಿಸಬೇಕು. ನೀವು ಬುಕ್ ಮಾಡಿದಾಗ, ಕೆಲವು ಮಾಹಿತಿಗಾಗಿ ನಿಮ್ಮನ್ನು ಕೇಳಲಾಗುತ್ತದೆ. ನಿಮ್ಮ ಎಲ್ಪಿಜಿ ಕೋಟಾ, ಎಲ್ಪಿಜಿ ಐಡಿ, ಎಲ್ಪಿಜಿ ಸಬ್ಸಿಡಿ ಸೇರಿದಂತೆ ಇತರ ಅನೇಕ ಸೇವೆಗಳ ಬಗ್ಗೆ ತಿಳಿದುಕೊಳ್ಳಲು ಈ ಸಂಖ್ಯೆಯನ್ನು ಬಳಸಬಹುದು. ಈ ರೀತಿಯ ಸುಲಭ ವಿಧಾನ ಬಳಸಿ ಗ್ಯಾಸ್ ಸಿಲಿಂಡರ್ ಬುಕ್ ಮಾಡಬಹುದಾಗಿದೆ.

Join Nadunudi News WhatsApp Group