Booyoung Group: ಮಗುವಿಗೆ ಜನ್ಮ ನೀಡಿದರೆ ಸಿಗಲಿದೆ 62 ಲಕ್ಷ ರೂ, ಈ ಕಂಪನಿಯಿಂದ ಬಂಪರ್ ಆಫರ್

ಈ ಕಂಪನಿಯ ಮಗುವಿಗೆ ಜನ್ಮ ನೀಡಿದರೆ 62 ಲಕ್ಷ ರೂ ನೀಡುವುದಾಗಿ ಆಫರ್ ಘೋಷಣೆ ಮಾಡಿದೆ

Booyoung Group: ಮಹಿಳೆಯರು ಮಕ್ಕಳನ್ನು ಪಡೆಯಲು ಬಯಸುತ್ತಾರೆ. ಮಕ್ಕಳ ಲಾಲನೆ ಪಾಲನೆ ಮಾಡುವುದೆಂದರೆ ತಾಯಂದಿರಿಗೆ ಹೆಚ್ಚು ಇಷ್ಟವಾಗುತ್ತದೆ. ಇನ್ನು ತಂದೆ ತಾಯಿ ಮಗುವನ್ನು ಮಾಡಿಕೊಂಡರೆ ಅವರಿಗೆ ಜವಾಬ್ದಾರಿಯು ಹೆಚ್ಚಾಗುತ್ತದೆ. ಮಕ್ಕಳ ಶಿಕ್ಷಣ, ಮದುವೆ, ಉದ್ಯೋಗ ಎಲ್ಲದರ ಬಗ್ಗೆ ಮಕ್ಕಳು ಹುಟ್ಟಿದಾಗಲೇ ಜವಾಬ್ದಾರಿ ಆರಂಭವಾಗುತ್ತದೆ.

ಇನ್ನು ಮಕ್ಕಳನ್ನು ಬೆಳಸಲು ಎಷ್ಟು ಹಣವನ್ನು ಕೂಡಿಟ್ಟುಕೊಂಡರು ಸಾಕಾವುದಿಲ್ಲ. ಇದೀಗ ಈ ಕಂಪನಿಯೊಂದು ಮಕ್ಕಳನ್ನು ಪಡೆಯುವವರಿಗೆ ಬಂಪರ್ ಆಫರ್ ಅನ್ನು ಘೋಷಿಸಿದೆ. ಕಂಪನಿಯು ನೀಡುತ್ತಿರುವ ಆಫರ್ ಗಳಲ್ಲಿ ಇದು ಕೂಡ ಸೇರಿಕೊಂಡಿದೆ.

South Korean firm offers staff ₹62.28 lakh to have a child
Image Credit: bnnbreaking

ಮಗುವಿಗೆ ಜನ್ಮ ನೀಡಿದರೆ ಸಿಗಲಿದೆ 62 ಲಕ್ಷ ರೂಪಾಯಿ
ಸದ್ಯ Booyoung Group ಕಂಪನಿ ಇದೀಗ ಮಕ್ಕಳನ್ನು ಪಡೆಯುವ ಉದ್ಯೋಗಿಗಳಿಗೆ ಹಣದ ಸಹಾಯ ಮಾಡಲು ಮುಂದಾಗಿದೆ. ಉದ್ಯೋಗಿಗಳಿಗೆ ಮಗುವನ್ನು ಹೊಂದಲು 100 ಮಿಲಿಯನ್ ಕೊರಿಯನ್ ವಾನ್ ಅಂದರೆ ಸುಮಾರು 62.34 ಲಕ್ಷ ರೂಪಾಯಿಗಳನ್ನು ನೀಡಲಾಗುತ್ತದೆ.

ಇದಲ್ಲದೆ, ಕಂಪನಿಯು 2021 ರಿಂದ ಒಟ್ಟು 70 ಮಕ್ಕಳನ್ನು ಹೊಂದಿರುವ ಸಿಬ್ಬಂದಿ ಸದಸ್ಯರಿಗೆ ಒಟ್ಟು 7 ಬಿಲಿಯನ್ ಕೊರಿಯನ್ ವಾನ್ ಸುಮಾರು 43.6 ಕೋಟಿ ರೂಪಾಯಿಗಳನ್ನು ನಗದು ರೂಪದಲ್ಲಿ ವಿತರಿಸಲು ಘೋಷಿಸಿದೆ. ಇಲ್ಲಿ ಮಹಿಳಾ ಉದ್ಯೋಗಿಗಳಷ್ಟೇ ಅಲ್ಲದೆ ಪುರುಷ ಉದ್ಯೋಗಿಗಳಿಗೂ ಮಕ್ಕಳಾಗಲು ಆರ್ಥಿಕ ನೆರವು ದೊರೆಯಲಿದೆ.

South Korean company offers $75,000 to employees with newborn babies
Image Credit: Newsbytesapp

ಕಂಪನಿಯು ಈ ಭರ್ಜರಿ ಆಫರ್ ಘೋಷಿಸಲು ಕಾರಣವೇನು…?
ಕೊರಿಯಾದಲ್ಲಿ ಜನನ ಪ್ರಮಾಣವು ವೇಗವಾಗಿ ಕುಸಿಯುತ್ತಿದೆ. ಪ್ರಸ್ತುತ ದರವು ಶೇಕಡಾ 0.78 ರಷ್ಟಿದೆ. ಇದು ವಿಶ್ವದಲ್ಲೇ ಅತ್ಯಂತ ಕಡಿಮೆ ಫಲವತ್ತತೆ ದರವನ್ನು ಹೊಂದಿದೆ. ಅಧಿಕೃತ ಕೊರಿಯಾದ ಮಾಹಿತಿಯ ಪ್ರಕಾರ, ಈ ದರವು 2025 ರ ವೇಳೆಗೆ 0.65 ಶೇಕಡಾವನ್ನು ತಲುಪುವ ಸಾಧ್ಯತೆಯಿದೆ. ಈ ಕಾರಣಕ್ಕಾಗಿ ಕಂಪನಿಯು ಇಂತಹ ಕ್ರಮವನ್ನು ಕೈಗೊಂಡಿದೆ.

Join Nadunudi News WhatsApp Group

ಹೆಚ್ಚು ಮಕ್ಕಳನ್ನು ಹೊಂದಿರುವ ಉದ್ಯೋಗಿಗಳಿಗೆ ಕಂಪನಿಯು ಆರ್ಥಿಕ ಪ್ರೋತ್ಸಾಹವನ್ನು ಘೋಷಿಸಿದೆ. ಮೂರು ಮಕ್ಕಳಿರುವ ಉದ್ಯೋಗಿಗಳಿಗೆ ಬಾಡಿಗೆ ಮನೆ ಅಥವಾ 1.8 ಕೋಟಿ ರೂ. ಇವೆರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು. ಈ ಕಂಪನಿಯನ್ನು 1983 ರಲ್ಲಿ ಸ್ಥಾಪಿಸಲಾಯಿತು. ಇಲ್ಲಿಯವರೆಗೆ 270,000 ಮನೆಗಳನ್ನು ನಿರ್ಮಿಸಲಾಗಿದೆ. ಈ ಕಂಪನಿಯು ಕೊರಿಯನ್ ಸರ್ಕಾರ ಮತ್ತು ಕೆಲವು ಸಂಸ್ಥೆಗಳಿಗೆ ವಾರ್ಷಿಕ ನೆರವು ನೀಡುತ್ತದೆ.

Join Nadunudi News WhatsApp Group