Borewell Tragedy: ಪುಟ್ಟ ಮಗು ಸಾತ್ವಿಕ್ ಕೊಳವೆ ಬಾವಿಗೆ ಬಿದ್ದಿದ್ದು ಹೇಗೆ…? 14 ಘಂಟೆ ಅನ್ನ ನೀರು ಇಲ್ಲದೆ ನರಳಿದ ಸಾತ್ವಿಕ್.

ಎರಡು ವರ್ಷದ ಪುಟ್ಟ ಮಗು ಸಾತ್ವಿಕ್ ಕೊಳವೆ ಭಾವಿಗೆ ಬಿದ್ದಿದ್ದು ಹೇಗೆ

Borewell Tragedy In Vijayapura: ಈಗಾಗಲೇ ಸಾಕಷ್ಟು ಮಕ್ಕಳು ಕೊಳವೆ ಬಾವಿಯಲ್ಲಿ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ. ಸುದೀರ್ಘ ಕಾರ್ಯಾಚರಣೆ ನಡೆದರೂ ಕೂಡ ಕೊಳವೆ ಬಾವಿಯಲ್ಲಿ ಬಿದ್ದ ಮಕ್ಕಳು ಬದುಕುಳಿದಿರುವ ಸಂಭವನೀಯತೆ ಕಡಿಮೆ ಇದೆ. ಈ ಹಿಂದೆ ಇಂತಹ ಸಾಕಷ್ಟು ಪ್ರಕರಣಗಳು ನಡೆದಿವೆ. ಇದರಿಂದ ಎಚ್ಚೆತ್ತುಕೊಂಡ ಜನರು ಕೊಳವೆ ಬಾವಿ ಕೊರೆದ ತಕ್ಷಣ ಅದನ್ನು ಮುಚ್ಚಿಡಲು ಪ್ರಾರಂಭಿಸಿದ್ದರು.ಇದರಿಂದಾಗಿ ಕೊಳವೆ ಬಾವಿಗೆ ಬೀಳುವ ಪ್ರಕರಣಗಳು ಕಡಿಮೆ ಆಗಿದ್ದವು.

ಇದೀಗ ವಿಜಯಪುರ ಜಿಲ್ಲೆಯಲ್ಲಿ ಇಂತಹ ಮತ್ತೊಂದು ಪ್ರಕರಣವೊಂದು ಬೆಳಕಿಗೆ ಬಂದಿದೆ. ಆಟವಾಡುವ ಸಮಯದಲ್ಲಿ ಕೊಳವೆ ಭಾವಿಗೆ ಬಿದ್ದಿದ್ದಾನೆ. ಪುಟ್ಟ ಮಗು ಸಾತ್ವಿಕ್ ಕೊಳವೆ ಬಾವಿಗೆ ಬಿದ್ದಿದ್ದು ಹೇಗೆ…? ಎಂದು ಎಲ್ಲರು ಯೋಚಿಸುತ್ತಿದ್ದಾರೆ.

Borewell Tragedy In Vijayapura
Image Credit: Vistara News

ಪುಟ್ಟ ಮಗು ಸಾತ್ವಿಕ್ ಕೊಳವೆ ಬಾವಿಗೆ ಬಿದ್ದಿದ್ದು ಹೇಗೆ…?
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಬುಧವಾರ 2 ವರ್ಷದ ಮಗು ಸಾತ್ವಿಕ್ ಕೊಳವೆ ಬಾವಿಗೆ ಬಿದ್ದಿದೆ. ಸಾತ್ವಿಕ್ ನ ರಕ್ಷಣೆಗಾಗಿ ರಕ್ಷಣಾ ಕಾರ್ಯಕ್ಕೆ ರಕ್ಷಣಾ ಕಾರ್ಯತಂಡ ಧಾವಿಸಲಾಗಿದ್ದು.ಮಗುವನ್ನ ಹೊರಗೆ ತಗೆಯುವಲ್ಲಿ ಯಶಸ್ವಿಯಾಗಿದೆ

ಮಗುವಿನ ಚಲನವಲನಗಳನ್ನು ಕ್ಯಾಮೆರಾದಲ್ಲಿ ಗಮನಿಸುತ್ತಿದ್ದು, ಮಗುವಿನ ಕಾಲು ನಡುಗುತ್ತಿರುವುದು ಕ್ಯಾಮೆರಾದಲ್ಲಿ ದಾಖಲಾಗಿದೆ. ಎರಡು ವರ್ಷದ ಬಾಲಕ ಸಾತ್ವಿಕ್ ಆಟವಾಡುವಾಗ ಕೊಳವೆಬಾವಿಗೆ ಬಿದ್ದ ತಕ್ಷಣ ಮಗುವಿನ ಚಲನವಲನಗಳನ್ನ ಗಮನಿಸಿದ ರಕ್ಷಣಾ ಸಿಬ್ಬಂದಿ ತಕ್ಷಣ ಕಾರ್ಯಾಚರಣೆ ಆರಂಭ ಮಾಡಿ ಮಗುವನ್ನ ಆಚೆ ತಗೆಯುವಲ್ಲಿ ಯಶಸ್ಸನ್ನ ಸಾಧಿಸಿದಿದೆ.

2 year old child fell into a tubewell
Image Credit: Public Today

14 ಘಂಟೆ ಅನ್ನ ನೀರು ಇಲ್ಲದೆ ನರಳಿದ ಸಾತ್ವಿಕ್
ಕೊಳವೆಬಾವಿಯ 16 ಅಡಿ ಆಳದಲ್ಲಿ ಮಗು ಸಿಕ್ಕಿಹಾಕಿಕೊಂಡಿದ್ದು, 20 ಅಡಿ ಅಗೆಯಲಾಗಿದ್ದು, ಮಗುವನ್ನು ರಕ್ಷಿಸಲು ಮತ್ತೊಂದು 5 ಅಡಿ ಸುರಂಗ ಕೊರೆಯಲಾಗಿದೆ. 5 ಅಡಿ ಸುರಂಗವನ್ನ ಮಾಡುವುದರ ಮೂಲಕ ಬ್ಲಾಕನನ್ನ ಹೊರಗೆ ತೆಗೆಯಲಾಗಿದೆ. ಬಂಡೆಗಳ ಅಡಚಣೆಯಿಂದಾಗಿ ಕಾರ್ಯಾಚರಣೆ ವಿಳಂಬ ಕೂಡ ಆಗಿತ್ತು. ಇನ್ನು SDRF ತಂಡ ಬಂಡೆಗಳನ್ನು ಒಡೆಯುವ ಕೆಲಸ ಕೂಡ ಮಾಡಿದೆ.

Join Nadunudi News WhatsApp Group

ಹಾಗೆಯೆ ಲಚ್ಯಾನ ಗ್ರಾಮದ ಸಿದ್ದಪ್ಪ ಮಹಾರಾಜರ ಗದುಗೆಗೆ ಇಡೀ ಊರಿನ ಜನರು ಮಗು ಸಾತ್ವಿಕ್ ಬದುಕಿ ಬರಲೆಂದು ವಿಶೇಷ ಪೂಜೆ ಸಲ್ಲಿಸಿದರು. ಪೋಷಕರು ಮತ್ತು ಕುಟುಂಬ ಸದಸ್ಯರು ಸಾತ್ವಿಕ್ ಬರುವಿಕೆಯಿಂದ ಸಂತಸವನ್ನ ಹೊರಹಾಕಿದ್ದಾರೆ. ಮಗುವನ್ನು ಹೊರತೆಗೆದ ತಕ್ಷಣ ವೈದ್ಯರ ತಂಡ ಹಾಗೂ ಆ್ಯಂಬುಲೆನ್ಸ್ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಸತತ 14 ಗಂಟೆಗಳ ಕಾಲ ಎರಡು ವರ್ಷದ ಬಾಲಕ ಸಾತ್ವಿಕ ಅನ್ನ ನೀರು ಇಲ್ಲದೆ ಕೊಳವೆ ಬಾವಿಯಲ್ಲಿ ನರಳಾಡುತ್ತಿದ್ದಾನೆ.

Borewell Tragedy
Image Credit: Prasthutha

Join Nadunudi News WhatsApp Group