BoAT Earbuds: ಅಗ್ಗದ ಬೆಲೆಗೆ ಎರಡು ಇಯರ್ ಬುಡ್ಸ್ ಲಾಂಚ್ ಮಾಡಿದ ಬೊಟ್, ದಾಖಲೆಯ ಮಾರಾಟ

ಮಾರುಕಟ್ಟೆಯಲ್ಲಿ ಎರಡು ವಿಶೇಷ ಇಯಾರ್ ಬಡ್ಸ್ ಪರಿಚಯಿಸಿದ ಬೋಟ್ ಕಂಪನಿ

Bot Immortal 201 And AirPods 91 Earbud: ಸದ್ಯ ದೇಶಿಯ ಮಾರುಕಟ್ಟೆಯಲ್ಲಿ ಸ್ಮಾರ್ಟ್ ಫೋನ್ ಗಳ ಬೇಡಿಕೆಯ ಜೊತೆಗೆ Ear Buds ಗಳಿಗೆ ಹೆಚ್ಚಿನ ಬೇಡಿಕೆ ಇದೆ. ಸ್ಮಾರ್ಟ್ ಫೋನ್ ಬಳಸುವ ಪ್ರತಿಯೊಬ್ಬರೂ ಕೂಡ ಏಆರ್ ಬಡ್ಸ್ ಬಳಸಲು ಇಷ್ಟಪಡುತ್ತಾರೆ.

ಇನ್ನು ಮಾರುಕಟ್ಟೆಯಲ್ಲಿ BoAt ಕಂಪನಿಯು Airdopes ಪರಿಚಯಿಸುವಲ್ಲಿ ಯಶಸ್ವಿಯಾಗಿದೆ. ಬೋಟ್ ಕಂಪನಿಯ Airdopes ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತವೆ. ಸದ್ಯ ಬೋಟ್ ಕಂಪನಿಯು ಮಾರುಕಟ್ಟೆಯಲ್ಲಿ ಹೊಸತಾಗಿ ಎರಡು ವಿಶೇಷ ಇಯಾರ್ ಬಡ್ಸ್ ಗಳನ್ನೂ ಪರಿಚಯಿಸಿದೆ. ಇದೀಗ ನಾವು ಈ ಇಯಾರ್ ಬಡ್ಸ್ ಗಳ ಬಗ್ಗೆ ಮಾಹಿತಿ ತಿಳಿಯೋಣ.

BoAt Immortal 201
Image Credit: Gizbot

ಎರಡು ಹೊಸ ಇಯರ್ ಬಡ್ಸ್ ಲಾಂಚ್ ಮಾಡಿದ ಬೋಟ್
ಬೋಟ್ ಕಂಪನಿಯು ಇತ್ತೀಚೆಗೆ Bot Immortal 201 ಮತ್ತು AirPods 91 Earbud ಗಳನ್ನು ಬಿಡುಗಡೆ ಮಾಡಿದೆ. ಇದು BoAt Immortal 201 Buds RGB ಲೈಟಿಂಗ್, 10mm ಆಡಿಯೋ ಡ್ರೈವರ್‌ ಗಳನ್ನು ಹೊಂದಿದೆ. ಇದು boAt ಸಿಗ್ನೇಚರ್ ಸೌಂಡ್ ತಂತ್ರಜ್ಞಾನದೊಂದಿಗೆ ಬರುತ್ತದೆ. ಮಾರುಕಟ್ಟೆಯಲ್ಲಿ Airdopes 91 Buds ಅತೀ ಅಗ್ಗದ ಬೆಲೆಯಲ್ಲಿ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ.

BoAt Immortal 201
BoAt Immortal 201 ಇಯರ್ ಬಡ್ಸ್ RGB ಲೈಟಿಂಗ್ ಮತ್ತು ಬಡ್ಸ್‌ ನಲ್ಲಿ ಚಾರ್ಜಿಂಗ್ ಕೇಸ್‌ ನೊಂದಿಗೆ ಬರಲಿದೆ. ಇದು ಇನ್‌ ಸ್ಟಾ ವೇಕ್ ಎನ್ ವೈಶಿಷ್ಟ್ಯಗಳನ್ನು ಹೊಂದಿದ್ದು ಅದು ಸ್ಮಾರ್ಟ್‌ ಫೋನ್‌ ಗಳು ಅಥವಾ ಲ್ಯಾಪ್‌ ಟಾಪ್‌ ಗಳೊಂದಿಗೆ ತಡೆರಹಿತ ಸಂಪರ್ಕವನ್ನು ಒದಗಿಸುತ್ತದೆ. ಈ ಇಯರ್‌ ಬಡ್‌ ಗಳು 10mm ಆಡಿಯೊ ಡ್ರೈವರ್‌ ಗಳನ್ನು ಹೊಂದಿವೆ ಮತ್ತು ಬಾಟ್ ಸಿಗ್ನೇಚರ್ ಸೌಂಡ್ ಆಡಿಯೊವನ್ನು ಬೆಂಬಲಿಸುತ್ತದೆ. ಇದು ENx ತಂತ್ರಜ್ಞಾನದೊಂದಿಗೆ ಕ್ವಾಡ್ ಮೈಕ್ ಅನ್ನು ಸಹ ಹೊಂದಿದೆ.

BoAt Airdopes 91 Buds
Image Credit: Thetechoutlook

ಬೋಟ್ ಇಮ್ಮಾರ್ಟಲ್ 201 ಇಯರ್‌ ಬಡ್‌ ಗಳ ಪ್ರತಿ ಇಯ ರ್‌ಬಡ್ 40mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದರ ಚಾರ್ಜಿಂಗ್ ಕೇಸ್ 380mAh ಬ್ಯಾಟರಿಯನ್ನು ಹೊಂದಿದೆ. ಇಯರ್‌ ಬಡ್‌ ಗಳು ASAP ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ ಮತ್ತು 10 ನಿಮಿಷಗಳ ಚಾರ್ಜ್‌ ನಲ್ಲಿ 180 ನಿಮಿಷಗಳ ಪ್ಲೇಬ್ಯಾಕ್ ಸಮಯವನ್ನು ಒದಗಿಸುತ್ತದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್ 5.3, USB ಟೈಪ್-ಸಿ ಆಯ್ಕೆಯನ್ನು ಪಡೆದುಕೊಂಡಿದೆ.

Join Nadunudi News WhatsApp Group

BoAt Airdopes 91 Buds
BoAt Airdopes 91 ಇಯರ್‌ ಬಡ್‌ ಗಳು ವಿಶಿಷ್ಟ ವಿನ್ಯಾಸವನ್ನು ಹೊಂದಿವೆ. ಇದು ಕಾಂಪ್ಯಾಕ್ಟ್ ಚಾರ್ಜಿಂಗ್ ಕೇಸ್ ಅನ್ನು ಹೊಂದಿದೆ ಮತ್ತು ಬೋಟ್ ಸಿಗ್ನೇಚರ್ ಧ್ವನಿಯನ್ನು ಸಹ ಹೊಂದಿದೆ. ಈ ಇಯರ್‌ ಬಡ್‌ಗಳು 10mm ಆಡಿಯೊ ಡ್ರೈವರ್‌ ಗಳನ್ನು ಸಹ ಹೊಂದಿವೆ. ENx ತಂತ್ರಜ್ಞಾನದೊಂದಿಗೆ ಡ್ಯುಯಲ್ ಮೈಕ್, 50ms ಕಡಿಮೆ ಲೇಟೆನ್ಸಿಯೊಂದಿಗೆ ಬೀಸ್ಟ್ ಮೋಡ್ ಅನ್ನು ಸಹ ಪಡೆದುಕೊಂಡಿದೆ. ಈ ಬಡ್ಸ್ IPX4 ಬೆವರು ಮತ್ತು ಸ್ಪ್ಲಾಶ್ ಪ್ರತಿರೋಧವನ್ನು ಸಹ ಒಳಗೊಂಡಿರುತ್ತವೆ.

Join Nadunudi News WhatsApp Group