Ration Card Benefits: BPL ರೇಷನ್ ಕಾರ್ಡ್ ಇರುವವರಿಗೆ ಸರ್ಕಾರದಿಂದ ಸಿಗಲಿದೆ ಈ ಎಲ್ಲಾ ಸವಲತ್ತು, ಈ ಎಲ್ಲಾ ಸೇವೆ ಉಚಿತ

APL ಹಾಗೂ BPL ಪಡಿತರ ಚೀಟಿದಾರರಿಗೆ ಉಚಿತ ಚಿಕಿತ್ಸೆ ಲಭ್ಯ

BPL And APL Ration Card Facility: ಭಾರತೀಯ ಪ್ರಜೆಯಾದವರಿಗೆ ಆಧಾರ್ ಕಾರ್ಡ್, ಪಾನ್ ಕಾರ್ಡ್ ಎಷ್ಟು ಮುಖ್ಯವೋ ಅದೇ ರೀತಿ Ration Card ಕೂಡ ಮುಖ್ಯ ದಾಖಲೆಯಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಎಲ್ಲ ಯೋಜನೆಗಳ ಲಾಭ ಪಡೆಯಲು ರೇಷನ್ ಕಾರ್ಡ್ ಇಲ್ಲದಿದ್ದರೆ ಸಾಧ್ಯವಾಗುವುದಿಲ್ಲ ಎನ್ನಬಹುದು. ಎಲ್ಲ ಯೋಜನೆಗಳ ಸೌಲಭ್ಯ ಪಡೆಯಬೇಕಿದ್ದರೆ Ration Card ಮುಖ್ಯವಾಗಿದೆ. ಸದ್ಯ ರಾಜ್ಯ ಸರ್ಕಾರ ಪರಿಚಯಿಸುವ ಆರೋಗ್ಯ ಯೋಜನೆಗಳ ಲಾಭ ಪಡೆಯಲು ರೇಷನ್ ಕಾರ್ಡ್ ಮುಖ್ಯವಾಗಿದೆ.

ಇನ್ನು ರೇಷನ್ ಕಾರ್ಡ್ ಹೊಂದಿರುವ ಜನರಿಗೆ ಕೇಂದ್ರದಿಂದ ಮತ್ತು ರಾಜ್ಯ ಸರ್ಕಾರದಿಂದ ಸಾಕಷ್ಟು ಯೋಜನೆಗಳು ಇದ್ದು ಈ ಯೋಜನೆಯ ಬಗ್ಗೆ ಸರಿಯಾದ ಮಾಹಿತಿ ಸಾಕಷ್ಟು ಜನರಿಗೆ ಇನ್ನು ಕೂಡ ತಿಳಿದಿಲ್ಲ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ರೇಷನ್ ಕಾರ್ಡ್ ಹೊಂದಿರುವ ಜನರು ಈ ಕೆಲದಿನ ಸೌಲಭ್ಯಗಳನ್ನ ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ.

BPL And APL Ration Card
Image Credit: DNA India

BPL ರೇಷನ್ ಕಾರ್ಡ್ ಇರುವವರಿಗೆ ಸರ್ಕಾರದಿಂದ ಸಿಗಲಿದೆ ಈ ಎಲ್ಲಾ ಸವಲತ್ತು
ಜನರಿಗಾಗಿ BPL Ration Card ಹಾಗೂ APL Ration Card ಅನ್ನು ನೀಡಲಾಗುತ್ತದೆ. ಈ ಎರಡು ರೇಷನ್ ಕಾರ್ಡ್ ಗಳು ಆರೋಗ್ಯ ಯೋಜನೆಯ ಲಾಭ ಪಡೆಯಲು ಅತಿ ಮುಖ್ಯವಾಗಿದೆ. ಸರ್ಕಾರದ ಈ ಆರೋಗ್ಯ ಯೋಜನೆಯ ಹೆಸರು Ayushman Bharat ಯೋಜನೆಯಾಗಿದೆ.

ಈ ಯೋಜನೆಯಡಿ ರೇಷನ್ ಕಾರ್ಡ್ ಹೊಂದಿರುವವರು ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆಯನ್ನು ಪಡೆಯಬಹುದು. ಯಾವುದೇ ಚಿಕಿತ್ಸಾ ವೆಚ್ಚವನ್ನು ನಿದರೆ ನಿಮ್ಮ ಆರೋಗ್ಯ ಸಮಸ್ಯೆಗೆ ಚಿಕಿತ್ಸೆಯನ್ನು ಪಡೆದುಕೊಳ್ಳಬಹುದು. APL ಹಾಗೂ BPL ಪಡಿತರ ಚೀಟಿದಾರರು ಈ ಯೋಜನೆಯಡಿ ಚಿಕಿತ್ಸೆಗೆ ಸಹಾಯಧನವನ್ನು ಪಡೆಯಬಹುದು.

BPL And APL Ration Card Facility
Image Credit: Informal News

APL ಹಾಗೂ BPL ಪಡಿತರ ಚೀಟಿದಾರರಿಗೆ ಉಚಿತ ಚಿಕಿತ್ಸೆ ಲಭ್ಯ
Ayushman Bharat ಯೋಜನೆಯ ಮೂಲಕ BPL Ration Card ಹೊಂದಿರುವವರು ಮತ್ತು ರಾಷ್ಟ್ರೀಯ ಭೀಮಾ ಯೋಜನೆಯಲ್ಲಿ ನೋಂದಾಯಿತರಾಗಿರುವ ಫಲಾನುಭವಿಗಳು ವಾರ್ಷಿಕ ಕುಟುಂಬಕ್ಕೆ ತಲಾ 5,00,000 ರೂ. ವರೆಗೂ ನೋಂದಾಯಿತ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆಯನ್ನು ಪಡೆಯಬಹುದು.

Join Nadunudi News WhatsApp Group

APL ಕಾರ್ಡ್ ದಾರರು ಅಥವಾ BPL Card ಹೊಂದಿಲ್ಲದವರು ಪಾವತಿ ಆಧಾರದ ಮೇಲೆ ಸರ್ಕಾರೀ ಪ್ಯಾಕೇಜ್ ದರದ ಶೇ. 30 ರಷ್ಟು ಚಿಕಿತ್ಸಾ ವೆಚ್ಚ ಲಭ್ಯವಿದ್ದು, ವಾರ್ಷಿಕ ಪ್ರತಿ ಕುಟುಂಬಕ್ಕೆ 1,50,000 ರೂ. ವರೆಗೆ ಪಡೆಯಬಹುದಾಗಿದೆ. ಭೂಮಿಯನ್ನು ಹೊಂದಿಲ್ಲದವರು, ಮನೆ ಇಲ್ಲದವರು, ದಿನಗೂಲಿ ಕಾರ್ಮಿಕರು, ಪರಿಶಿಷ್ಟ ಜಾತಿ ಅಥವಾ ಪಂಗಡದಿಂದ ಬಂದವರು ಆಯುಷ್ಮಾನ್ ಯೋಜನೆಯಡಿ ಪ್ರಯೋಜನವನ್ನು ಪಡೆಯಬಹುದು. ಅದೇ ರೀತಿಯಲ್ಲಿ ರೇಷನ್ ಕಾರ್ಡ್ ಹೊಂದಿರುವ ಜನರು ರಾಜ್ಯ ಮತ್ತು ಕೇಂದ್ರದ ಕೆಲವು ಯೋಜನೆಯ ಅಡಿಯಲ್ಲಿ ಮೂರೂ ಲಕ್ಷದ ತನಕ ಬಿಸಿನೆಸ್ ಲೋನ್ ಕೂಡ ಪಡೆದುಕೊಳ್ಳಬಹುದಾಗಿದೆ.

Join Nadunudi News WhatsApp Group