Ration Card 2024: ಜನವರಿ ಮೊದಲ ವಾರದಲ್ಲೇ ಸಿಗಲಿದೆ ಹೊಸ BPL ಕಾರ್ಡ್, ಹೊಸ ಕಾರ್ಡಿಗಾಗಿ ಕಾಯುತ್ತಿದ್ದವರಿಗೆ ಬಿಗ್ ಅಪ್ಡೇಟ್

ಜನವರಿ ಮೊದಲ ವಾರದಲ್ಲಿಯೇ ಹೊಸ APL -BPL ರೇಷನ್ ಕಾರ್ಡ್ ವಿತರಣೆ

BPL- APL Ration Card Latest Update: ಸದ್ಯ ರಾಜ್ಯದಲ್ಲಿ Ration Card ಮೇಲಿನ ಬೇಡಿಕೆ ಹೆಚ್ಚುತ್ತಿದೆ. ಇದಕ್ಕೆ ಕಾರಣ ರಾಜ್ಯ ಸರ್ಕಾರ ಉಚಿತ ಗ್ಯಾರಂಟಿ ಯೋಜನೆಗಳನ್ನು ಪರಿಚಯಿಸಿರುವುದು.  ಹೌದು, ರಾಜ್ಯದಲ್ಲಿಉಚಿತ ಗ್ಯಾರಂಟಿ ಯೋಜನೆಗಳು ಜಾರಿಗೆ ಬಂದಾಗಿನಿಂದ ರಾಜ್ಯದಲ್ಲಿ BPL ಹಾಗೂ APL Ration Card ಗೆ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ರಾಜ್ಯ ಸರ್ಕಾರ ಜನರಿಗೆ ರೇಷನ್ ಕಾರ್ಡ್ ತಿದ್ದುಪಡಿ ಮತ್ತು ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆಗೆ ಆಗಾಗ ಅವಕಾಶವನ್ನು ನೀಡುತ್ತಿದೆ. ಸದ್ಯ ಹೊಸ ವರ್ಷಕ್ಕೆ ಹೊಸ BPL ಮತ್ತು APL Card ಗೆ ಅರ್ಜಿ ಸಲ್ಲಿಸಿದವರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದೆ.

BPL- APL Ration Card Latest Update
Image Credit: News Next Live

BPL -APL ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದವರಿಗೆ ಗುಡ್ ನ್ಯೂಸ್
ಸರ್ಕಾರದ ಗ್ಯಾರಂಟಿ ಯೋಜನೆಗಳು ಘೋಷಣೆಯಾದ ಬೆನ್ನಲ್ಲೇ ಲಕ್ಷಾಂತರ ಜನರು BPL ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದ್ದಾರೆ. ಕಳೆದ ತಿಂಗಳಿನಲ್ಲಿ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆಗೆ ಸರ್ಕಾರ ಅವಕಾಶ ನೀಡಿತ್ತು. ಇನ್ನು ಲಕ್ಷಾಂತರ ಫಲಾನುಭವಿಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದ್ದಾರೆ. ಪಡಿತರ ಚೀಟಿಗಾಗಿ ಕಾದು ಕುಳಿತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದೀಗ BPL Card ನಿರೀಕ್ಷೆಯಲ್ಲಿದ್ದವರಿಗೆ ಸರ್ಕಾರ ಸಿಹಿಸುದ್ದಿ ನೀಡಿದೆ.

BPL- APL Ration Card Distribution
Image Credit: DNA India

ಜನವರಿ ಮೊದಲ ವಾರದಲ್ಲಿಯೇ ಹೊಸ ರೇಷನ್ ಕಾರ್ಡ್ ವಿತರಣೆ
ವಿಧಾನಸಭಾ ಚುನಾವಣೆಗೂ ಮುನ್ನ BPL ಕಾರ್ಡ್‌ಗೆ ಅರ್ಜಿ ಸಲ್ಲಿಸಿದವರಿಗೆ ಶೀಘ್ರದಲ್ಲಿ ಹೊಸ ಕಾರ್ಡ್‌ ವಿತರಣೆ ನಡೆಸಲಾಗುವುದು ಎಂದು ಆಹಾರ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ವಿಧಾನಸಭಾ ಚುನಾವಣೆಗೂ ಮುನ್ನ ಸರಿ ಸುಮಾರು 3 ಲಕ್ಷ ಅರ್ಜಿಯನ್ನು BPL ಕಾರ್ಡ್ ಗೆ ಸಲ್ಲಿಸಿದ್ದರು, ಸದ್ಯ ಅರ್ಜಿಗಳ ಪರಿಶೀಲನೆ ನೆಡೆಸಿ 7 ಸಾವಿರ ಮಂದಿಗೆ ರೇಷನ್ ಕಾರ್ಡ್ ವಿತರಣೆ ಮಾಡುವುದಾಗಿ ಸರಕಾರ ಮಾಹಿತಿ ನೀಡಿದೆ. ಜನವರಿ ಮೊದಲ ವಾರದಲ್ಲಿಯೇ ಹೊಸ APL -BPL ರೇಷನ್ ಕಾರ್ಡ್ ವಿತರಣೆ ಮಾಡಲಾಗುವುದು ಎಂದು ರಾಜ್ಯ ಸರಕಾರ ಮಾಹಿತಿ ನೀಡಿದೆ.

Join Nadunudi News WhatsApp Group

Join Nadunudi News WhatsApp Group