BSNL New Plan: 365 ದಿನಗಳು ಮತ್ತು 600 GB ಡೇಟಾ ಫ್ರೀ, BSNL ಗ್ರಾಹಕರಿಗೆ ಹಿಂದೆಂದೂ ಸಿಗದ ಬಂಪರ್ ರಿಚಾರ್ಜ್ ಪ್ಲ್ಯಾನ್.

ನೀವು BSNL ಗ್ರಾಹಕರಾಗಿದ್ದರೆ ಕಂಪನಿ ಬಿಡುಗಡೆಗೊಳಿಸಿರುವ ನೂತನ ಪ್ಲಾನ್ ವಿವರ ತಿಳಿದುಕೊಳ್ಳಿ.

BSNL 3 Best Annual Recharge Plan: ಪ್ರಸ್ತುತ ದೇಶದಲ್ಲಿ Airtel, Jio, Vi, BSNL ಟೆಲಿಕಾಂ ಕಂಪನಿಗಳು ಹೊಸ ಹೊಸ ರಿಚಾರ್ಜ್ ಪ್ಲ್ಯಾನ್ ಅನ್ನು ಪರಿಚಯಿಸುತ್ತ ಒಂದಕ್ಕೊಂದು ಅಪೈಪೋಟಿ ನೀಡುತ್ತಲೇ ಇರುತ್ತದೆ.

ಎಲ್ಲ ನೆಟ್ವರ್ಕ್ ನಲ್ಲಿಯೂ ಮಾಸಿಕ, ತ್ರೈಮಾಸಿ, ವಾರ್ಷಿಕ ರಿಚಾರ್ಜ್ ಪ್ಲ್ಯಾನ್ ಗಳು ಲಭ್ಯವಿರುವುದು ಸಹಜ. ಇನ್ನು ಸರ್ಕಾರಿ ಟೆಲಿಕಾಂ ಕಂಪನಿಯಾದ BSNL ಗ್ರಾಹಕರಿಗೆ ಅತಿ ಕಡಿಮೆ ಬೆಲೆಯಲ್ಲಿ ರಿಚಾರ್ಜ್ ಪ್ಲ್ಯಾನ್ ಅನ್ನು ನೀಡುವ ಬಗ್ಗೆ ಎಲ್ಲರಿಗು ತಿಳಿದೇ. ವಿವಿಧ ಕಂಪನಿಗಳು ಎಷ್ಟೇ ಕಡಿಮೆ ಬೆಲೆಯ Recharge Plan ಅನ್ನು ಪರಿಚಯಿಸಿದರು BSNL ಅನ್ನು ಹಿಂದಿಕ್ಕಲು ಸಾಧ್ಯವಾಗುತ್ತಿಲ್ಲ ಎನ್ನಬಹುದು.

BSNL Annual Recharge Plan
Image Credit: Telecomtalk

OTT ಚಂದಾದಾರಿಕೆಯ ಜೊತೆಗೆ ಭರ್ಜರಿ ಡೇಟಾ ನೀಡುತ್ತಿದೆ BSNL
ಬೇರೆ ಕಂಪನಿಗಳ ಅರ್ಧ ವಾರ್ಷಿಕ ರಿಚಾರ್ಜ್ ಪ್ಲ್ಯಾನ್ ಬೆಲೆಯಲ್ಲಿ BSNL ಗ್ರಾಹಕರು ವಾರ್ಷಿಕ ರಿಚಾರ್ಜ್ ಅನ್ನು ಮಾಡಿಕೊಳ್ಳುವಷ್ಟು BSNL ಅಗ್ಗವಾಗಿದೆ. ಇನ್ನು BSNL ತನ್ನ ಬಳಕೆದಾರರಿಗಾಗಿ ಇದೀಗ OTT ಪ್ಲಾಟ್ ಫಾರ್ಮ್ ಗಳಿಗೆ ಉಚಿತ ಚಂದಾದಾರಿಕೆಯನ್ನು ನೀಡುವುದರ ಜೊತೆಗೆ 600GB ಡೇಟಾ ನೀಡುವ ಹೊಸ ವಾರ್ಷಿಕ ಯೋಜನೆಯನ್ನು ಪರಿಚಯಿಸಿದೆ. ನೀವು BSNL ಗ್ರಾಹಕರಾಗಿದ್ದರೆ ಕಂಪನಿ ಬಿಡುಗಡೆಗೊಳಿಸಿರುವ ನೂತನ ಪ್ಲಾನ್ ವಿವರ ತಿಳಿದುಕೊಳ್ಳಿ.

365 ದಿನಗಳು ಮತ್ತು 600 GB ಡೇಟಾ ಫ್ರೀ
BSNL ಇದೀಗ ತನ್ನ ಗ್ರಾಹಕರಿಗೆ ಅನುಕೂಲವಾಗಲು ಹೊಸ ಬೆಲೆಯ ವಾರ್ಷಿಕ ರಿಚಾರ್ಜ್ ಪ್ಲ್ಯಾನ್ ಅನ್ನು ಬಿಡುಗಡೆಗೊಳಿಸಿದೆ. ಈ ಹೊಸ ಪ್ಲ್ಯಾನ್ 365 ದಿನಗಳ ವ್ಯಾಲಿಡಿಟಿ ಅಂದರೆ ಒಂದು ವರ್ಷದವರೆಗೆ ಮಾನ್ಯತೆ ನೀಡಲಿದೆ. BSNL ತನ್ನ ಗ್ರಾಹಕರಿಗಾಗಿ 1999 ರಿಚಾರ್ಜ್ ಪ್ಲ್ಯಾನ್ ಬಿಡುಗಡೆಗೊಳಿಸಿದ್ದು ಈ ಯೋಜನೆಯು ಬಳಕೆದಾರರಿಗೆ ಒಟ್ಟಾರೆ 600GB ಡೇಟಾ ನೀಡಲಿದೆ. ಡೇಟಾ ಜೊತೆಗೆ ಉಚಿತ ಕರೆಯ ಸೌಲಭ್ಯವನ್ನು ಕೂಡ ಪಡೆಯಬಹುದಾಗಿದೆ. ಈ ಯೋಜನೆಯಲ್ಲಿ OTT ಚಂದಾದಾರಿಕೆಯನ್ನು ಕೂಡ ಪಡೆಯಬಹುದಾಗಿದೆ.

BSNL 3 Best Annual Recharge Plan
Image Credit: Kalingatv

336 ದಿನಗಳ ಕಾಲ ಉಚಿತ ಕರೆ , ಡೇಟಾ ನೀಡುವ ವಾರ್ಷಿಕ ಪ್ಲ್ಯಾನ್
ಇನ್ನು BSNL ಬಳಕೆದಾರರು ಈ 1499 ರೂ. ಯೋಜನೆಯನ್ನು ರಿಚಾರ್ಜ್ ಮಾಡಿಸಿಕೊಳ್ಳುದರಿಂದ ನಿಮಗೆ 336 ದಿನಗಳ ಉಚಿತ ಸೇವೆ ಲಭ್ಯವಿದೆ. ಈ ಪ್ರೀಪೈಡ್ ಯೋಜನೆಯಲ್ಲಿ ಒಟ್ಟಾರೆ 24GB ಡೇಟಾ ಸೌಲಭ್ಯ ದೊರೆಯಲಿದೆ. ಪ್ರತಿದಿನ 100 SMS ಸೌಲಭ್ಯದ ಜೊತೆಗೆ ಅನಿಯಮಿತ ಕರೆಯ ಸೌಲಭ್ಯ ಕೂಡ ಈ ಪ್ರೀಪೈಡ್ ಯೋಜನೆಯಲ್ಲಿ ಸಿಗಲಿದೆ. ಡೇಟಾ ಮಿತಿಯನ್ನು ತಲುಪಿದ ನಂತರ BSNL ನ ಗ್ರಾಹಕರು 40Kbps ವೇಗದಲ್ಲಿ ಡಾಟಾವನ್ನು ಪಡೆಯಬಹುದು.

Join Nadunudi News WhatsApp Group

BSNL ನ ಅತಿ ಕಡಿಮೆ ವಾರ್ಷಿಕ Recharge Plan
BSNL ನಲ್ಲಿ ನಿಮಗೆ 797 ರೂ. ಗಳಲ್ಲಿ ವಾರ್ಷಿಕ ರಿಚಾರ್ಜ್ ಪ್ಲಾನ್ ಲಭ್ಯವಾಗಲಿದೆ. ಪ್ರತಿ ನಿತ್ಯ 2GB ಡೇಟಾ ಜೊತೆಗೆ ಅನಿಯಮಿತ ಕರೆಗಳ ಸೌಲಭ್ಯವನ್ನು 365 ದಿನಗಳವರೆಗೆ ಪಡೆಯಬಹುದುದಾಗಿದೆ. BSNL ಗ್ರಾಹಕರು ಈ ಮೂರು ವಾರ್ಷಿಕ ಯೋಜನೆಯಲ್ಲಿ ಯಾವುದೇ ಪ್ಲಾನ್ ಅನ್ನು ಆಯ್ಕೆ ಮಾಡಿದರು ಹೆಚ್ಚಿನ ಲಾಭವನ್ನು ಪಡೆಯಬಹುದಾಗಿದೆ.

Join Nadunudi News WhatsApp Group