BSNL: 2024 ರ ಇನ್ನೊಂದು ಬಂಪರ್ ರಿಚಾರ್ಜ್ ಪ್ಲಾನ್ ಘೋಷಣೆ ಮಾಡಿದ BSNL, ಪ್ರತಿನಿತ್ಯ 2GB ಡೇಟಾ ಉಚಿತ

ಅಗ್ಗದ ಬೆಲೆಯ ಅಧಿಕ ಪ್ರಯೋಜನ ನೀಡುವ ಯೋಜನೆ ಜಾರಿಗೆ ತಂದ BSNL ,ಇಲ್ಲಿದೆ ಈ ಯೋಜನೆಯ ಸಂಪೂರ್ಣ ಮಾಹಿತಿ

BSNL New Recharge Plan 2024: BSNL ಗ್ರಾಹಕರು ಬಹಳ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್(Recharge Plan) ಅನ್ನು ಹುಡುಕುತ್ತಿದ್ದರೆ ನಿಮಗಿದೆ ಉತ್ತಮ ಪ್ರಯೋಜನ ಇರುವ ಕಡಿಮೆ ಬೆಲೆಯ ರಿಚಾರ್ಜ್ ಯೋಜನೆ. ಭಾರತದ ಸರ್ಕಾರಿ ಟೆಲಿಕಾಂ ಕಂಪನಿ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಡೇಟಾ ವೋಚರ್ ವಿಭಾಗದಲ್ಲಿ ವಿಶೇಷ ಯೋಜನೆಯನ್ನು ಜಾರಿಗೆ ತಂದಿದ್ದು,

ಈ ಯೋಜನೆಯ ಬೆಲೆ ರೂ 300 ಕ್ಕಿಂತ ಕಡಿಮೆಯಾಗಿದ್ದು,ಇದರಲ್ಲಿ ಯಾವುದೇ ವಾಯ್ಸ್ ಕರೆ ಅಥವಾ SMS ಪ್ರಯೋಜನ ಸಿಗದು, ಇದು ಕೇವಲ ಡೇಟಾ ವೋಚರ್ ಪ್ಲಾನ್ ಆಗಿದೆ. ಸಾಕಷ್ಟು ಪ್ರಯೋಜನಗಳೊಂದಿಗೆ ಈ ರಿಚಾರ್ಜ್ ಪ್ಲಾನ್ ಗಳನ್ನೂ ಉಪಯೋಗಿಸಿಕೊಳ್ಳಿ.

BSNL New Recharge Plans
Image Credit: Telecomtalk

BSNL ನ ಉತ್ತಮ ಡೇಟಾ ವೋಚರ್ ಪ್ಲಾನ್

ಬಿಎಸ್‌ಎನ್‌ಎಲ್ (BSNL) ಗ್ರಾಹಕರು ಆಕ್ಟಿವ್ ಯೋಜನೆಯಿಂದ ರೀಚಾರ್ಜ್ ಮಾಡುವುದು ಅವಶ್ಯಕವಾಗಿರುತ್ತದೆ ಗ್ರಾಹಕರು ಯಾವುದೇ ಸಕ್ರಿಯ ಯೋಜನೆಯನ್ನು ಹೊಂದಿಲ್ಲದಿದ್ದರೆ ಅಥವಾ ಸಂಖ್ಯೆಗೆ ಯಾವುದೇ ಮಾನ್ಯತೆ ಇಲ್ಲದಿದ್ದರೆ ಮೊದಲು ನೀವು ಮೂಲ ಯೋಜನೆಯಿಂದ ರೀಚಾರ್ಜ್ ಮಾಡಬೇಕಾಗುತ್ತದೆ. ನಂತರ ಮಾತ್ರ ಈ ವಿಶೇಷ ಡೇಟಾ ವೋಚರ್ ಅನ್ವಯಿಸುತ್ತದೆ. ಇದಲ್ಲದೆ BSNL ಆಯ್ದ ವಲಯಗಳಲ್ಲಿ ಮಾತ್ರ 4G ವೇಗದ ಪ್ರಯೋಜನವನ್ನು ನೀಡುತ್ತಿದೆ .

BSNL 288 Rs Recharge Plan 2024
Image Credit: Gizbot

BSNL 288 ರೂ ಪ್ರಿಪೇಯ್ಡ್ ಯೋಜನೆಯ ಪ್ರಯೋಜನಗಳು

Join Nadunudi News WhatsApp Group

ಬಿಎಸ್‌ಎನ್‌ಎಲ್ (BSNL) ರೂ 288 ಪ್ರಿಪೇಯ್ಡ್ ಯೋಜನೆ ಹೆಚ್ಚುವರಿ ಡೇಟಾ ಅಗತ್ಯವಿರುವವರಿಗೆ ಒಂದು ನಿಗದಿತ ಅವಧಿಯಾಗಿದೆ. ಈ ಪ್ರಿಪೇಯ್ಡ್ ಯೋಜನೆಯು 60 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ.ಆದ್ದರಿಂದ ನಿಮ್ಮ ಮೂಲ ಯೋಜನೆಯು ಕನಿಷ್ಠ ಮುಂದಿನ 60 ದಿನಗಳವರೆಗೆ ಮಾನ್ಯವಾಗಿದೆ ಎಂದು ಖಚಿತಪಡಿಸಿಕೊಳ್ಳಿ . ಯೋಜನೆಯಿಂದ ರೀಚಾರ್ಜ್ ಮಾಡುವ ಸಂದರ್ಭದಲ್ಲಿ ಪ್ರತಿದಿನ 2GB ಡೇಟಾ ಲಭ್ಯವಿದೆ.

ಹೀಗೆ ಒಟ್ಟು 60 ದಿನಗಳ ವರೆಗೆ ಒಟ್ಟು 120GB ಡೇಟಾವನ್ನು ನೀಡಲಾಗುತ್ತಿದೆ. ನೀವು ಈ ಯೋಜನೆಯನ್ನು ಆರಿಸಿದರೆ ನೀವು ಸಕ್ರಿಯ ಯೋಜನೆಗೆ ಹೆಚ್ಚುವರಿಯಾಗಿ ಈ ಹೆಚ್ಚುವರಿ ಡೇಟಾವನ್ನು ಪಡೆಯುತ್ತೀರಿ ಆದರೆ FUP ಮಿತಿಯನ್ನು ತಲುಪಿದ ನಂತರ ವೇಗವು 40kbps ಗೆ ಕಡಿಮೆಯಾಗುತ್ತದೆ. ಬಿಎಸ್‌ಎನ್‌ಎಲ್ (BSNL) ಬಳಕೆದಾರರಿಗೆ ಎರಡು ತಿಂಗಳವರೆಗೆ ಹೆಚ್ಚುವರಿ ಡೇಟಾ ಅಗತ್ಯವಿದ್ದರೆ ಈ ಯೋಜನೆಯಾ ರಿಚಾರ್ಜ್ ಮಾಡಿಸಿಕೊಳ್ಳಬಹುದು.

Join Nadunudi News WhatsApp Group