BSNL Plan: BSNL ಗ್ರಾಹಕರಿಗೆ ಇನ್ನೊಂದು ಬಂಪರ್ ಪ್ಲಾನ್, ಇಷ್ಟು ರಿಚಾರ್ಜ್ ಮಾಡಿದರೆ 40GB ಡೇಟಾ ಉಚಿತ.

BSNL ಗ್ರಾಹಕರಿಗೆ ಇನ್ನೊಂದು ಬಂಪರ್ ರಿಚಾರ್ಜ್ ಪ್ಲಾನ್, ಹೊಸ ವರ್ಷದ ಇನ್ನೊಂದು ಆಫರ್

BSNL Rs 151 Plan Validity Extended: ದೇಶದ ಪ್ರತಿಷ್ಠಿತ ಟೆಲಿಕಾಂ ಕಂಪನಿಗಳ ನಡುವೆ ಪೈಪೋಟಿ ನಡೆಯುತ್ತಲೇ ಇವೆ. ವಿವಿಧ ಕಂಪನಿಗಳೇ ಅನೇಕ ರೀತಿಯ ಯೋಜನೆಗಳನ್ನು ಬಿಡುಗಡೆ ಮಾಡುತಲಿವೆ. ಜಿಯೋ ಹಾಗೂ ಏರ್ ಟೆಲ್ ಗೆ ಹೋಲಿಸಿದರೆ ಬಿಎಸ್ ಏನ್ ಎಲ್ (BSNL) ತನ್ನ ಗ್ರಾಹಕರಿಗೆ ಅತಿ ಕಡಿಮೆ ಬೆಲೆಯಲ್ಲಿ ರಿಚಾರ್ಜ್ ಪ್ಲಾನ್ ಗಳನ್ನೂ ಪರಿಚಯಿಸುತ್ತಿದೆ.

ಸರ್ಕಾರಿ ಟೆಲಿಕಾಂ ಕಂಪನಿಯಾಗಿರುವ BSNL ಹೊಸ ಹೊಸ ರಿಚಾರ್ಜ್ ಪ್ಲ್ಯಾನ್ ಗಳನ್ನೂ ಬಿಡುಗಡೆ ಮಾಡುವುದರ ಜೊತೆಗೆ ಇದೀಗ ಈಗಾಗಲೇ ಲಭ್ಯವಿರುವ ಈ ಯೋಜನೆಯ ಪ್ರಯೋಜನವನ್ನು ವಿಸ್ತರಿಸಿದೆ. ಈ ಮೂಲಕ BSNL ಬಳಕೆದಾರರಿಗೆ ಇನ್ನಷ್ಟು ಪ್ರಯೋಜನ ನೀಡಲಿದೆ.

BSNL Rs 151 Plan Validity Extended
Image Credit: Letsdiskuss

BSNL ಗ್ರಾಹಕರಿಗೆ ಇನ್ನೊಂದು ಬಂಪರ್ ಪ್ಲಾನ್
ಅಗ್ಗದ ಡೇಟಾ ಯೋಜನೆಗಳನ್ನು ನೀಡುವಲ್ಲಿ BSLN ಜನಪ್ರಿಯತೆ ಪಡೆದುಕೊಂಡಿದೆ. ಸದ್ಯ 2024 ರಲ್ಲಿ BSNL ತನ್ನ ಬಳಕೆದಾರರಿಗೆ ಭರ್ಜರಿ ಸಿಹಿ ಸುದ್ದಿ ನೀಡಿದೆ. BSNL ಬಳಕೆದಾರರು ಇನ್ನುಮುಂದೆ ಈ ಪ್ರೀಪೈಡ್ ಪ್ಲಾನ್ ಅನ್ನು ಇನ್ನಷ್ಟು ದಿನಗಳು ಬಳಸಿಕೊಳ್ಳಬಹುದಾಗಿದೆ. BSNL 151 ರೂ. ರಿಚಾರ್ಜ್ ಪ್ಲಾನ್ ಇದೀಗ ತನ್ನ ವ್ಯಾಲಿಡಿಟಿಯನ್ನು ವಿಸ್ತರಿಸಿಕೊಂಡಿದೆ. ಈ ಮೊದಲು BSNL 151 ರೂ. ರಿಚಾರ್ಜ್ ಪ್ಲಾನ್ 30 ದಿನಗಳು ವ್ಯಾಲಿಡಿಟಿ ಹೊಂದಿತ್ತು.

ಆದರೆ ಟೆಲಿಕಾಂ ಕಂಪನಿಗಳು ತನ್ನ ರಿಚಾರ್ಜ್ ದರವನ್ನು ಏರಿಕೆ ಮಾಡಿದ ಕರಣ 2022 ರಲ್ಲಿ 30 ದಿನಗಳ ವ್ಯಾಲಿಡಿಟಿಯನ್ನು 28 ದಿನಗಳಿಗೆ ಸೀಮಿತಗೊಳಿಸಲಾಗಿತ್ತು. ಇದೀಗ 2024 ರ ಹೊಸ ವರ್ಷದಿಂದ ಮತ್ತೆ ಮೊದಲಿನಂತೆ 151 ರೂ. ರಿಚಾರ್ಜ್ ಪ್ಲಾನ್ ಅನ್ನು 30 ದಿನಗಳಿಗೆ ನಿಗದಿಪಡಿಸಲಾಗಿದೆ. ಇನ್ನು BSNL ಬಳಕೆದಾರರು ರೂ. 151 ಪ್ರೀಪೈಡ್ ಯೋಜನೆಯನ್ನು ಸಕ್ರಿಯಗೊಳಿಸಿಕೊಂಡರೆ ಸಂಪೂರ್ಣ ಒಂದು ತಿಂಗಳುಗಳ ಕಾಲ ಅನಿಯಮಿತ ಪ್ರಯೋಜನವನ್ನು ಪಡೆಯಬಹದು.

BSNL Rs 151 Plan Details
Image Credit: Cashify

ಇಷ್ಟು ರಿಚಾರ್ಜ್ ಮಾಡಿದರೆ 40GB ಡೇಟಾ ಉಚಿತ
BSNL ತನ್ನ ರೂ. 151 ಪ್ರೀಪೈಡ್ ಯೋಜನೆಯ ವ್ಯಾಲಿಡಿಟಿಯನ್ನು 2 ದಿನಗಳು ವಿಸ್ತರಿಸುವ ಮೂಲಕ ಬಳಕೆದಾರರಿಗೆ ಇನ್ನಷ್ಟು ಅನುಕೂಲ ಮಾಡಿಕೊಟ್ಟಿದೆ. ನೀವು ಕೇವಲ 5 .033 ರೂ. ಗಳ ದೈನಂದಿನ ವೆಚ್ಚದಲ್ಲಿ ಈ ಈ ರಿಚಾರ್ಜ್ ಪ್ಲಾನ್ ಅನ್ನು ಪಡೆದುಕೊಳ್ಳಬಹುದು. ರೂ. 151 ರಾರೇಚರ್ಗೆ ಪ್ಲಾನ್ ನಿಮಗೆ 40GB ಡೇಟಾವನ್ನು ನೀಡುತ್ತದೆ. ಹಾಗೆಯೆ ಜಿಂಗ್ ನ ಉಚಿತ ಚಂದಾದಾರಿಕೆಯನ್ನು ಪಡೆಯಬಹುದು. ನಿಮ್ಮ ಅಗತ್ಯಕ್ಕೆ ತಕ್ಕ ಹಾಗೆ ನೀವು ಡೇಟಾವನ್ನು ಬಳಸಿಕೊಳ್ಳಬಹುದು.

Join Nadunudi News WhatsApp Group

Join Nadunudi News WhatsApp Group