Budget 2024: ಈ ಬಾರಿಯ ಬಜೆಟ್ ನಲ್ಲಿ ಯಾವುದು ದುಬಾರಿ ಮತ್ತು ಯಾವುದು ಅಗ್ಗ, ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್.

ಈ ಬಾರಿಯ ಬಜೆಟ್ ನಲ್ಲಿ ಯಾವುದು ದುಬಾರಿಯಾಗಿದೆ..? ಹಾಗೆಯೆ ಯಾವುದು ಅಗ್ಗವಾಗಲಿದೆ..? ಎನ್ನುವ ಬಗ್ಗೆ ಈ ಲೇಖನದಲ್ಲಿ ಮಾಹಿತಿ ತಿಳಿಯೋಣ.

Budget 2024 Changes: ಸದ್ಯ ದೇಶದಲ್ಲಿ ಫೆಬ್ರವರಿ 1 ರಂದು 2024 ರ ಬಜೆಟ್ ಮಂಡನೆಯಾಗಿದೆ. ಈ ವೇಳೆ ವಿತ್ತ ಸಚಿವೆ Nirmala Sitaraman ಅವರು ಸಾಕಷ್ಟು ಘೋಷಣೆ ಹೊರಡಿಸಿದ್ದಾರೆ. ದೇಶದಲ್ಲಿ ಹಲವಾರು ನಿಯಮಗಳು ಬದಲಾಗಲಿವೆ. ಹಾಗೆಯೆ ವಿವಿಧ ವಸ್ತುಗಳ ಬೆಲೆ ಏರಿಕೆ, ಇಳಿಕೆ ಮಾಡಲು ಬಜೆಟ್ ನಲ್ಲಿ ನಿರ್ಧರಿಸಲಾಗಿದೆ. ಜನಸಾಮಾನ್ಯರು ಬಜೆಟ್ ಘೋಷಣೆಗಾಗಿ ಕಾಯುತ್ತಿದ್ದರು.

ಫೆ. 1 ರಂದು 2024 ಬಜೆಟ್ ಘೋಷಣೆ
ಬಜೆಟ್ ಘೋಷಣೆಗೂ ಮೊದಲೇ ಸರ್ಕಾರ ಸಾಕಷ್ಟು ವಿಷಯಗಳಲ್ಲಿ ಬದಲಾವಣೆ ಮಾಡಲಾಗುತ್ತದೆ ಎನ್ನುವ ಬಗ್ಗೆ ಹೇಳಿಕೆ ನೀಡಿತ್ತು. ಹೀಗಾಗಿ ಜನಸಾಮಾನ್ಯರು ಬಜೆಟ್ ಘೋಷಣೆಯ ಬಗ್ಗೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದರು. ಇದೀಗ ನಾವು ಈ ಬಾರಿಯ ಬಜೆಟ್ ನಲ್ಲಿ ಯಾವುದು ದುಬಾರಿಯಾಗಿದೆ..? ಹಾಗೆಯೆ ಯಾವುದು ಅಗ್ಗವಾಗಲಿದೆ..? ಎನ್ನುವ ಬಗ್ಗೆ ಈ ಲೇಖನದಲ್ಲಿ ಮಾಹಿತಿ ತಿಳಿಯೋಣ.

Budget 2024 Latest Update
Image Credit: Logisticsinsider

ಈ ಬಾರಿಯ ಬಜೆಟ್ ನಲ್ಲಿ ಯಾವುದು ದುಬಾರಿ..? ಯಾವುದು ಅಗ್ಗ..?
ಸತತ ಆರನೇ ಬಾರಿಗೆ ನಿರ್ಮಲ ಸೀತಾರಾಮನ್ ಅವರು ಬಜೆಟ್ ಘೋಷಣೆ ಮಾಡಿದ್ದಾರೆ. ಈ ಮಧ್ಯಂತರ ಬಜೆಟ್ ಲೋಕಸಭಾ ಚುನಾವಣೆಯ ನಂತರ ಹೊಸ ಸರ್ಕಾರ ರಚನೆ ಆಗುವವರೆಗೂ ಹಣಕಾಸಿನ ಅಗತ್ಯಗಳನ್ನು ನೋಡುಕೊಳ್ಳುತ್ತದೆ. ಇನ್ನು ಜನಸಮಾನ್ಯರು ದೇಶದಲ್ಲಿ ಯಾವುದು ಅಗ್ಗವಾಗಿದೆ ಹಾಗೂ ಯಾವುದು ದುಬಾರಿಯಾಗಿದೆ ಎನ್ನುವುದನ್ನು ತಿಳಿಯಲು ಕುತೂಹಲರಾಗಿದ್ದಾರೆ.

•ಈ ವಸ್ತುಗಳ ಬೆಲೆ ಅಗ್ಗವಾಗಲಿದೆ
ಸ್ಮಾರ್ಟ್ ಫೋನ್, ಕಾರು, ಟಿವಿ ಮತ್ತಿತರ ವಸ್ತುಗಳ ಬೆಲೆ ಕಡಿಮೆಯಾಗುವ ಸಾಧ್ಯತೆ ಇದೆ. ಟಿವಿ ಭಾಗಗಳು, ಕ್ಯಾಮೆರಾ ಲೆನ್ಸ್‌ಗಳು, ಸೀಗಡಿ ಮತ್ತು ಆಸಿಡ್-ಗ್ರೇಡ್ ಫ್ಲೋರೈಟ್‌ನ ದೇಶೀಯ ಉತ್ಪಾದನೆಯು ಸಹ ಅಗ್ಗವಾಗುವ ನಿರೀಕ್ಷೆಯಿದೆ.

Budget 2024 New Update
Image Credit: Businesstoday

•ಈ ವಸ್ತುಗಳ ಬೆಲೆ ದುಬಾರಿಯಾಗಲಿದೆ
ಸಿಗರೇಟ್ ದರದಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ. ಚಿನ್ನ, ಪ್ಲಾಟಿನಂ ವಸ್ತುಗಳ ಬೆಲೆಯೂ ಹೆಚ್ಚಾಗಲಿದೆ ಎನ್ನಲಾಗಿದೆ. ಇದಲ್ಲದೆ, ಬಟ್ಟೆ, ಎಲೆಕ್ಟ್ರಿಕ್ ಕಿಚನ್ ಚಿಮಣಿಗಳು ಮತ್ತು ಕಾಂಪೌಂಡ್ ರಬ್ಬರ್ ಕೂಡ ದುಬಾರಿಯಾಗುವ ನಿರೀಕ್ಷೆಯಿದೆ.

Join Nadunudi News WhatsApp Group

Join Nadunudi News WhatsApp Group