Budget Cars 2024: ಕೇವಲ 5 ಲಕ್ಷ ರೂ ಬಜೆಟ್ ನಲ್ಲಿ ಸಿಗಲಿದೆ ಈ 30 Km ಮೈಲೇಜ್ ಕೊಡುವ ಕಾರ್.

ಕೇವಲ 5 ಲಕ್ಷ ರೂ ಬಜೆಟ್ ನಲ್ಲಿ ಸಿಗಲಿದೆ ಈ 30 Km ಮೈಲೇಜ್ ಕೊಡುವ ಕಾರ್

Budget Car Under 5 Lakh: ಸಾಮಾನ್ಯವಾಗಿ ಎಲ್ಲರು ಕೂಡ ಕಾರ್ ಖರೀದಿಸಬೇಕು ಎನ್ನುವ ಯೋಜನೆಯನ್ನು ಹಾಕಿಕೊಂಡಿರುತ್ತಾರೆ. ಮಧ್ಯಮ ವರ್ಗದವರಂತೂ ಕಾರ್ ಖರೀದಿಗಾಗಿ ಹಣವನ್ನು ಸೇವ್ ಮಾಡುತ್ತ ಇರುತ್ತಾರೆ. ಇನ್ನು ಸೇವಿಂಗ್ಸ್ ನ ಮೂಲಕ ಕಾರ್ ಅಣು ಖರೀದಿಸಲು ಸಾಕಷ್ಟು ಸಮಯ ಬೇಕಾಗುತ್ತದೆ.

ಏಕೆಂದರೆ ಕಾರ್ ನ ಬೆಲೆ ಸ್ವಲ್ಪ ದುಬಾರಿಯೇ ಆಗಿರುತ್ತದೆ. ಇನ್ನು ಮಾರುಕಟ್ಟೆಯಲ್ಲಿ 5 ಲಕ್ಷ ಬಜೆಟ್ ನಲ್ಲಿ ಕೂಡ ಕಾರ್ ಅನ್ನು ಖರೀದಿಸಬಹುದು. ನಿಮ್ಮ ಬಳಿ 5 ಲಕ್ಷ ಬಜೆಟ್ ಇದ್ದರೆ ಸಾಕು ನಿಮ್ಮ ಕಾರ್ ಖರೀದಿಯ ಕನಸನ್ನು ನನಸು ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ನಾವೀಗ ಈ ಲೇಖಾನದಲ್ಲಿ 5 ಲಕ್ಷ ಬಜೆಟ್ ನಲ್ಲಿ ಸಿಗುವ ಕಾರ್ ನ ಬಗ್ಗೆ ಮಾಹಿತಿ ಹೇಳಲಿದ್ದೇವೆ. ನೀವು ಹೊಸ ಕಾರ್ ಖರೀದಿಸುವ ಯೋಜನೆಯಲ್ಲಿದ್ದರೆ ಈ ಲೇಖನವನ್ನು ಓದಿ.

Maruti Wagon R Price In India
Image Credit: Original Source

ಕೇವಲ 5 ಲಕ್ಷ ರೂ ಬಜೆಟ್ ನಲ್ಲಿ ಸಿಗಲಿದೆ ಈ 30 Km ಮೈಲೇಜ್ ಕೊಡುವ ಕಾರ್
Maruti Wagon R
ದೇಶದ ಅತಿ ಹೆಚ್ಚು ಮಾರಾಟವಾಗುವ ಕಾರ್ ಗಳ ಪಟ್ಟಿಯಲ್ಲಿ Maruti Wagon R ಕೂಡ ಸೇರಿಕೊಂಡಿದೆ. ಮಾರುತಿ ವ್ಯಾಗನ್ ಆರ್ 1 ಲೀಟರ್ ಮೂರು ಸಿಲಿಂಡರ್ ಪೆಟ್ರೋಲ್ ಎಂಜಿನ್ ಮತ್ತು 1.2 ಲೀಟರ್ ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದೆ. ಈ ಕಾರು ಸಿಎನ್‌ ಜಿಯೊಂದಿಗೆ ಕೂಡ ಗ್ರಹಕರಿಗೆ ಲಭ್ಯವಾಗಲಿದೆ. CNG ಆಯ್ಕೆಯಲ್ಲಿ ಪ್ರತಿ ಕಿಲೋಗ್ರಾಂಗೆ 26 ರಿಂದ 30 ಕಿಲೋಮೀಟರ್ ಮೈಲೇಜ್ ನೀಡುತ್ತದೆ. ಇನ್ನು Maruti Wagon R ಎಕ್ಸ್ ಶೋ ರೂಂ ಬೆಲೆ ರೂ. 5.54 ಲಕ್ಷದಿಂದ ಪ್ರಾರಂಭವಾಗುತ್ತದೆ.

Maruti Swift
ಮಾರುತಿ ಸ್ವಿಫ್ಟ್ ಮಾರುಕಟ್ಟೆಯಲ್ಲಿ ವ್ಯಾಗನ್ ಆರ್ ನಷ್ಟೇ ಹೆಚ್ಚಿನ ಬೇಡಿಕೆಯನ್ನು ಪಡೆದುಕೊಂಡಿದೆ. ಇದು 1 ಲೀಟರ್ 4 ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದೆ. ಈ ಕಾರು ಸಿಎನ್‌ಜಿಯೊಂದಿಗೆ ಬರುತ್ತದೆ ಮತ್ತು ಇದರ ಮೈಲೇಜ್ ವ್ಯಾಗನ್ ಆರ್‌ ನಂತೆಯೇ 26 ರಿಂದ 30 ಕಿಲೋಮೀಟರ್ ನೀಡಲಿದೆ . ಸ್ಪೋರ್ಟಿ ಲುಕ್ ಇಷ್ಟಪಡುವವರು ಸ್ವಿಫ್ಟ್ ಅನ್ನು ಖರೀದಿಸುತ್ತಾರೆ. ಈ ಕಾರಿನ ಎಕ್ಸ್ ಶೋ ರೂಂ ಬೆಲೆ ರೂ. 6 ಲಕ್ಷದಿಂದ ಆರಂಭವಾಗುತ್ತದೆ.

Maruti Swift Price And Mileage
Image Credit: Business-standard

Renault Kwid
ರೆನಾಲ್ಟ್ ಕ್ವಿಡ್ ಕೂಡ ಬಜೆಟ್ ಬೆಲೆಯಲ್ಲಿ ಉತ್ತಮ ಆಯ್ಕೆಯಾಗಲಿದೆ. ನೀವು ಮಾರುತಿ ಹೊರತುಪಡಿಸಿ ಬೇರೆ ಯಾವುದೇ ಕಂಪನಿಯಿಂದ ಕಾರನ್ನು ಹುಡುಕುತ್ತಿದ್ದರೆ, ಆ ಸ್ಥಾನವನ್ನು ರೆನಾಲ್ಟ್ ಕೆವಿಡ್ ತುಂಬಲಿದೆ. ಇದು 1 ಲೀಟರ್ ಮೂರು ಸಿಲಿಂಡರ್ ಎಂಜಿನ್ ಹೊಂದಿದೆ. ಇದರಲ್ಲಿ ನೀವು CNG ಆಯ್ಕೆಯನ್ನು ಪಡೆಯುವುದಿಲ್ಲ ಆದರೆ ಇನ್ನೂ ಈ ಕಾರ್ ಪ್ರತಿ ಲೀಟರ್‌ ಗೆ 25 ಕಿಲೋಮೀಟರ್ ವರೆಗೆ ಮೈಲೇಜ್ ನೀಡುತ್ತದೆ. ಇನ್ನು ಮಾರುಕಟ್ಟೆಯಲ್ಲಿ Renault Kwid ಎಕ್ಸ್ ಶೋ ರೂಂ ಬೆಲೆ ರೂ. 4.70 ಲಕ್ಷದಿಂದ ಪ್ರಾರಂಭವಾಗುತ್ತದೆ.

Join Nadunudi News WhatsApp Group

Renault Kwid Price And Mileage
Image Credit: Carwale

Join Nadunudi News WhatsApp Group