Budget Cars 2024: ಇದೆ 2024 ರಲ್ಲಿ ಹೆಚ್ಚು ಸೇಲ್ ಆಗುತ್ತಿರುವ ಬಜೆಟ್ ಕಾರ್ಸ್, ಕಡಿಮೆ ಬೆಲೆ ಮತ್ತು 26 Km ಮೈಲೇಜ್

ಕಡಿಮೆ ಬಜೆಟ್ ನಲ್ಲಿ ಸಿಗಲಿದೆ ಈ ಟಾಪ್ ಬೆಸ್ಟ್ ಕಾರ್

Budget Cars: ಪ್ರಸ್ತುತ ಭಾರತೀಯ ಮಾರುಕಟ್ಟೆಯಲ್ಲಿ ಅತ್ಯಾಧುನಿಕ ಫೀಚರ್ ಇರುವ ಹಲವಾರು ಮಾದರಿಯ ಕಾರ್ ಗಳಿವೆ. ಜನರು ಹೆಚ್ಚಾಗಿ ಹೊಸ ಹೊಸ ಫೀಚರ್ ಇರುವಂಥ ಕಾರ್ ಗಳನ್ನೂ ಖರೀದಿಸಲು ಬಯಸುತ್ತಾರೆ. ಗ್ರಾಹಕರು ಕಾರ್ ಖರೀದಿಸುವಾಗ ಮೈಲೇಜ್, ಪ್ರೈಸ್, ಫೀಚರ್ಸ್ ಬಗ್ಗೆ ಎಷ್ಟು ಗಮನ ಹರಿಸುತ್ತಾರೆ ಅದೇ ರೀತಿ ಮಾರುಕಟ್ಟೆಯಲ್ಲಿ ಯಾವ ಕಾರ್ ಹೆಚ್ಚು ಮಾರಾಟಗೊಳ್ಳುತ್ತಿದೆ ಎನ್ನುವುದನ್ನು ಕೂಡ ಗಮನಿಸುತ್ತಾರೆ.

ಮಾರುಕಟ್ಟೆಯಲ್ಲಿ ಎಲ್ಲ ಮಾದರಿಯ ಕಾರ್ ಗಳಿಗೂ ಬೇಡಿಕೆ ಇದೆ ಇದೆ. ಅದರಲ್ಲೂ ಈ ಟಾಪ್ ಬ್ರಾಂಡ್ ಕಂಪನಿಯ ಲೇಟೆಸ್ಟ್ ಮಾಡೆಲ್ ಕಾರ್ ಗಳಿಗೆ ಮಾರುಕಟ್ಟೆಯಲ್ಲಿ ಇತ್ತೀಚಿಗೆ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎನ್ನಬಹುದು. ನೀವು ಹೊಸ ಕಾರ್ ಖರೀದಿಸುವ ಯೋಜನೆಯಲ್ಲಿದ್ದರೆ ನಾವೀಗ ಟಾಪ್ ಬೆಸ್ಟ್ ಕಾರ್ ಗಳ ಬಗ್ಗೆ ಮಾಹಿತಿ ಹೇಳಲಿದ್ದೇವೆ.

Tata Punch Price In India
Image Credit: Car Wale

ಕಡಿಮೆ ಬಜೆಟ್ ನಲ್ಲಿ ಸಿಗಲಿದೆ ಈ ಟಾಪ್ ಬೆಸ್ಟ್ ಕಾರ್
•ಕಳೆದ ತಿಂಗಳು ಟಾಟಾ ಪಂಚ್ ಗರಿಷ್ಠ ಮಾರಾಟದೊಂದಿಗೆ ಕಾಂಪ್ಯಾಕ್ಟ್ SUV ವಿಭಾಗದಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿದೆ. ಒಟ್ಟು 19,158 ಯುನಿಟ್‌ ಗಳು ಮಾರಾಟವಾಗಿದ್ದು, ಏಪ್ರಿಲ್ 2023 (10,934) ಗೆ ಹೋಲಿಸಿದರೆ 75% ರಷ್ಟು ಬೆಳವಣಿಗೆಯಾಗಿದೆ. ಪೆಟ್ರೋಲ್ ಮತ್ತು ಸಿಎನ್‌ಜಿ ಎಂಜಿನ್ ಆಯ್ಕೆಗಳೊಂದಿಗೆ ಕಾರಿನ ಎಕ್ಸ್ ಶೋ ರೂಂ ಬೆಲೆ ರೂ. 6.13 ಲಕ್ಷದಿಂದ ರೂ.10.20 ಲಕ್ಷ ನಿಗದಿಯಾಗಿದೆ. ಟಾಟಾ ಪಂಚ್ 18.8 ರಿಂದ 26 kmpl ಮೈಲೇಜ್ ನೀಡುತ್ತದೆ.

Maruti Suzuki Brezza Price
Image Credit: Navbharat Times

•ಇನ್ನು ಮಾರುತಿ ಸುಜುಕಿ ಬ್ರೆಝಾ ಕಳೆದ ತಿಂಗಳು 17,113 ಯುನಿಟ್ ಎಸ್‌ಯುವಿ ಗಳನ್ನು ಮಾರಾಟ ಮಾಡುವುದರೊಂದಿಗೆ ಎರಡನೇ ಸ್ಥಾನದಲ್ಲಿದೆ. ಏಪ್ರಿಲ್ 2023 ರ 11,836 ಘಟಕಗಳಿಗೆ ಹೋಲಿಸಿದರೆ, ಇದು 45% ಸುಧಾರಣೆಯನ್ನು ಕಂಡಿತು. ಬ್ರೆಝಾವು ರೂ.8.34 ಲಕ್ಷದಿಂದ ರೂ.14.14 ಲಕ್ಷದ ಎಕ್ಸ್ ಶೋ ರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.

Maruti Suzuki Fronx
Image Credit: Cardekho

•ಮಾರುತಿ ಸುಜುಕಿ ಫ್ರಾಂಕ್ಸ್‌ ನ ಮಾರಾಟದ ಪ್ರಮಾಣವು ಅಗಾಧವಾಗಿ ಹೆಚ್ಚಾಗಿದೆ. ಈ ಕಾರು ಮೂರನೇ ಸ್ಥಾನದಲ್ಲಿ ಮುಂದುವರಿದಿದೆ. ಕಳೆದ ತಿಂಗಳು 14,286 ಯುನಿಟ್‌ ಗಳು ಮಾರಾಟವಾಗಿದ್ದು, 63% ರಷ್ಟು ಬೆಳವಣಿಗೆಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಫ್ರಾಂಕ್ಸ್ ಎಸ್ ಯುವಿ ಬೆಲೆ 7.51 ಲಕ್ಷದಿಂದ 13.04 ಲಕ್ಷ ರೂ. ಆಗಿದೆ. 9 ಇಂಚಿನ ಇನ್ಫೋಟೈನ್‌ ಮೆಂಟ್ ಸಿಸ್ಟಮ್ ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ ಪ್ಲೇ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆಯುತ್ತದೆ.

Join Nadunudi News WhatsApp Group

•ಟಾಟಾ ನೆಕ್ಸಾನ್ ಮಾರಾಟದಲ್ಲಿ ಕುಸಿತದ ಹೊರತಾಗಿಯೂ ನಾಲ್ಕನೇ ಸ್ಥಾನದಲ್ಲಿ ಮುಂದುವರಿದಿದೆ. ಈ ಏಪ್ರಿಲ್‌ ನಲ್ಲಿ 11,168 ಯುನಿಟ್ ಕಾರುಗಳು ಮಾರಾಟವಾಗಿದ್ದು, ಕಳೆದ ವರ್ಷಕ್ಕೆ (15,002 ಯುನಿಟ್) ಹೋಲಿಸಿದರೆ 26% ಇಳಿಕೆಯಾಗಿದೆ. Nexon SUV 8.15 ಲಕ್ಷದಿಂದ 15.80 ಲಕ್ಷದವರೆಗೆ ಎಕ್ಸ್ ಶೋರೂಂ ಬೆಲೆ ಹೊಂದಿದೆ.

Tata Nexon Price In India
Image Credit: Carwale

•ಹುಂಡೈ ವೆನ್ಯೂ ಐದನೇ ಸ್ಥಾನದಲ್ಲಿದೆ. ಆದರೆ, ಮಾರಾಟದಲ್ಲಿ ಮಾತ್ರ ಕುಸಿತ ದಾಖಲಿಸಿದೆ. ಕಳೆದ ತಿಂಗಳು ಮಾರಾಟವಾದ 9,120 ಯುನಿಟ್‌ ಗಳಿಗೆ ಹೋಲಿಸಿದರೆ (10,342 ಯುನಿಟ್‌ಗಳು) ಇದು 12% ನಷ್ಟು ಕುಸಿತವಾಗಿದೆ. ಈ ಕಾರಿನ ಬೆಲೆ ರೂ.7.94 ಲಕ್ಷದಿಂದ ರೂ.13.48 ಲಕ್ಷದವರೆಗೆ ಇದೆ ಮತ್ತು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ.

Hyundai Venue
Image Credit: Inghamdriven

Join Nadunudi News WhatsApp Group