BYD EV: ಸಿಂಗಲ್ ಚಾರ್ಜ್ ನಲ್ಲಿ 570 Km ರೇಂಜ್, ಟಾಟಾ ಕಾರಿಗೆ ಪೈಪೋಟಿ ಕೊಡಲು ಬಂತು ಇನ್ನೊಂದು ಅಗ್ಗದ ಕಾರ್

ಭರ್ಜರಿ 570km ಮೈಲೇಜ್ ನೀಡಲಿದೆ BYD Seal ಎಲೆಕ್ಟ್ರಿಕ್ ಕಾರ್.

BYD Seal Electric Car: ಭಾರತೀಯ ಎಲೆಕ್ಟ್ರಿಕ್ ಕಾರ್ ಗಳ ವಿಭಾಗದಲ್ಲಿ ಸದ್ಯ ಚೀನಾ ಮೂಲದ BYD ಕಂಪನಿಯು ಇದೀಗ ಜನಪ್ರಿಯತೆ ಪಡೆದುಕೊಳ್ಳುತ್ತಿದೆ. BYD ಕಂಪನಿಯು ಈಗಾಗಲೇ ಮಾರುಕಟ್ಟೆಯ್ಲಲಿ ವಿವಿಧ ಮಾದರಿಯ ಕಾರ್ ಗಳನ್ನೂ ಪರಿಚಯಿಸುತ್ತ ಮಾರುಕಟ್ಟೆಯಲ್ಲಿ ಲಭ್ಯವಿರುವ ನೂತನ ಮಾದರಿಯ ಕಾರ್ ಗಳಿಗೆ ನೇರ ಪೈಪೋಟಿಯನ್ನು ನೀಡುತ್ತಿದೆ. ಸದ್ಯ BYD ಕಂಪನಿಯು 2024 ರಲ್ಲಿ ನೂತನ ಮಾದರಿಯ ಎಲೆಕ್ಟ್ರಿಕ್ ಕಾರ್ ಅನ್ನು ಪರಿಚಯಿಸಲು ಸಂಪೂರ್ಣ ಸಿದ್ದತೆ ಮಾಡಿಕೊಂಡಿದೆ.

BYD Seal Electric Car Price In India
Image Credit: Autoexpress

ಮಾರ್ಚ್ ನಲ್ಲಿ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ ನೂತನ EV
ಸದ್ಯ BYD ಕಂಪನಿಯು ಮಾರ್ಚ್ 5 ರಂದು ತನ್ನ ಹೊಚ್ಚ ಹೊಸ ಮಾದರಿಯಾದ Seal Electric Car ಅನ್ನು ಮಾರುಕಟ್ಟೆಯಲ್ಲಿ ಪರಿಚಯಿಸಲು ಸಿದ್ಧತೆ ಮಾಡಿಕೊಂಡಿದೆ. ಕಂಪನಿಯು ತನ್ನ e6 ಮತ್ತು Alto3 ಮಾದರಿಯ ಬಳಿಕ ಇದೀಗ BYD Seal Electric car ಅನ್ನು ಲಾಂಚ್ ಮಾಡಲಿದೆ. ಇನ್ನು ಡೀಲರ್ ಶಿಪ್ ಹಂತದಲ್ಲಿ Seal Electric Car ನ ಬುಕಿಂಗ್ ಕೂಡ ಆರಂಭವಾಗಿದೆ.

ಭರ್ಜರಿ 570km ಮೈಲೇಜ್ ನೀಡಲಿದೆ ಈ EV
BYD ಸೀಲ್ ಎಲೆಕ್ಟ್ರಿಕ್ ಕಾರು 82.5kWh ಬ್ಯಾಟರಿ ಪ್ಯಾಕ್‌ ನೊಂದಿಗೆ ಒಂದೇ ರೂಪಾಂತರದಲ್ಲಿ ಲಭ್ಯವಿರುತ್ತದೆ. ಇದರೊಂದಿಗೆ, ಸೆಡಾನ್ ಅನ್ನು ಒಂದೇ ಚಾರ್ಜ್‌ ನಲ್ಲಿ ಕ್ಲೈಮ್ ಮಾಡಲಾದ 570km (WLTP ಸೈಕಲ್) ತಲುಪಿಸಲು ರೇಟ್ ಮಾಡಲಾಗಿದೆ. ಪವರ್ ಔಟ್‌ ಪುಟ್‌ ಗೆ ಹೇಳುವುದಾದರೆ, ಹಿಂಭಾಗದ ಆಕ್ಸಲ್-ಮೌಂಟೆಡ್ ಮೋಟಾರ್ 230bhp ಮತ್ತು 360Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

BYD Seal Electric Car
Image Credit: Carwale

BYD SEAL ಎಲೆಕ್ಟ್ರಿಕ್ ಕಾರು ಆರು ಸೆಕೆಂಡುಗಳಿಗಿಂತ ಕಡಿಮೆ ಅವಧಿಯಲ್ಲಿ ಶೂನ್ಯದಿಂದ 100 kmph ವೇಗವನ್ನು ಪಡೆಯುತ್ತದೆ. ಈ BYD SEAL ಎಲೆಕ್ಟ್ರಿಕ್ ಸೆಡಾನ್ ಭಾರತೀಯ ಮಾರುಕಟ್ಟೆಯಲ್ಲಿ Kia EV6 ಮತ್ತು ಹುಂಡೈ Ioniq 5 ಮಾದರಿಗಳೊಂದಿಗೆ ಸ್ಪರ್ಧಿಸಲಿದೆ. BYD SEAL ನ ಪವರ್‌ ಟ್ರೇನ್ ಸೆಟಪ್ ಬ್ರ್ಯಾಂಡ್‌ ನ ಹೊಸ ಬ್ಲೇಡ್ ಬ್ಯಾಟರಿ ತಂತ್ರಜ್ಞಾನವನ್ನು ಸಂಯೋಜಿಸುತ್ತದೆ.

Join Nadunudi News WhatsApp Group

Join Nadunudi News WhatsApp Group