Canara Bank: ಕೆನರಾ ಬ್ಯಾಂಕ್ ಗ್ರಾಹಕರಿಗೆ ಬೇಸರದ ಸುದ್ದಿ, ಸಾಲದ ದರದಲ್ಲಿ ಏರಿಕೆ.

ಕೆನರಾ ಬ್ಯಾಂಕ್ ಬಡ್ಡಿ ದರವನ್ನ ಮತ್ತೆ ಹೆಚ್ಚಳ ಮಾಡಿದ್ದು ಸಾಲ ಪಡೆದವರ ಬೇಸರಕ್ಕೆ ಕಾರಣವಾಗಿದೆ

Canara Bank Interest Rate Hike: ಹೊಸ ಹಣಕಾಸು ವರ್ಷ (New Financial Year) ಆರಂಭವಾದ ಸಮಯದಿಂದ ಅನೇಕ ನಿಯಮಗಳಲ್ಲಿ ಬದಲಾವಣೆ ಆಗಿದೆ. ಈ ಬಾರಿಯ ಹಣಕಾಸು ವರ್ಷ ಹಣದುಬ್ಬರದ ಪ್ರಮಾಣವನ್ನು ಹೆಚ್ಚಿಸಿದೆ.

ಕೆಲವು ಬ್ಯಾಂಕ್ ಗಳು ತಮ್ಮ ರೆಪೋ ದರವನ್ನು (Repo Rate) ಕೂಡ ಹೆಚ್ಚಿಸಿದೆ. ಇದೀಗ ಕೆನರಾ ಬ್ಯಾಂಕ್ ತನ್ನ ಗ್ರಾಹಕರಿಗೆ ಬೇಸರದ ಸುದ್ದಿ ನೀಡಿದೆ. ನೀವು ಕೆನರಾ ಬ್ಯಾಂಕ್ (Canara Bank) ನ ಗ್ರಾಹಕರಾಗಿದ್ದರೆ ಈ ಸುದ್ದಿಯ ಬಗ್ಗೆ ತಿಳಿದುಕೊಳ್ಳಿ. ಕೆನರಾ ಬ್ಯಾಂಕ್ ಇದೀಗ ಸಾಲದ ದರವನ್ನು (Interest Rate)  ಹೆಚ್ಚಿಸಲು ನಿರ್ಧಾರ ಮಾಡಿದೆ.

Canara Bank Interest Rate Hike
Image Source: Business Today

ಕೆನರಾ ಬ್ಯಾಂಕ್ ಗ್ರಾಹಕರಿಗೆ ಬೇಸರದ ಸುದ್ದಿ
ಖಾಸಗಿ ವಲಯದ ಪ್ರತಿಷ್ಠಿತ ಬ್ಯಾಂಕ್ ಆದ ಕೆನರಾ ಬ್ಯಾಂಕ್ ಇದೀಗ ಮಹತ್ವದ ಘೋಷಣೆಯನ್ನು ಹೊರಡಿಸಿದೆ. ಕೆನರಾ ಬ್ಯಾಂಕ್ ತನ್ನ ಸಾಲದ ದರದ ಪ್ರಮಾಣವನ್ನು ಏರಿಕೆ ಮಾಡಲು ನಿರ್ಧರಿಸಿದೆ. ಕೆನರಾ ಬ್ಯಾಂಕ್ ನಲ್ಲಿ ಸಾಲ ಪಡೆದವರಿಗೆ ಇದರಿಂದ ನಷ್ಟ ಉಂಟಾಗಲಿದೆ.

Canara Bank Interest Rate Hike
Image Source: Jagaran

ಕೆನರಾ ಬ್ಯಾಂಕ್ ಸಾಲದ ದರದಲ್ಲಿ ಏರಿಕೆ
ಕೆನರಾ ಬ್ಯಾಂಕ್ ತನ್ನ ಸಾಲದ ದರವನ್ನು ಹೆಚ್ಚಿಸಿದೆ. ಎಂಸಿಎಲ್ (MCLR) ದರವನ್ನು ಹೆಚ್ಚಿಸುವ ಮೂಲಕ ಕೆನರಾ ಬ್ಯಾಂಕ್ ತನ್ನ ಗ್ರಾಹಕರಿಗೆ ಶಾಕ್ ನೀಡಿದೆ. ಎಂಸಿಎಲ್ ದರವನ್ನು 5 ಬೇಸಿಸ್ ಪಾಯಿಂಟ್ ಗಳಷ್ಟು ಹೆಚ್ಚಿಸಲು ಕೆನರಾ ಬ್ಯಾಂಕ್ ನಿರ್ಧರಿಸಿದೆ. ಏಪ್ರಿಲ್ 12 ರಿಂದ ಎಂಸಿಎಲ್ ಆರ್ ದರವನ್ನು ಹೆಚ್ಚಿಸಲು ಬ್ಯಾಂಕ್ ನಿರ್ಧರಿಸಿದೆ.

Canara Bank Interest Rate Hike
Image Source: Deccan Herlad

ಎಂಸಿಎಲ್ ಆರ್ ದರ ಹೆಚ್ಚಾದಾಗ ಸಾಲ ಪಡೆದವರಿಗೆ ಮಾಸಿಕ EMI ದರ ಕೂಡ ಹೆಚ್ಚಾಗಲಿದೆ. ಇನ್ನು ಬ್ಯಾಂಕ್ ಆಫ್ ಬರೋಡ ಕೂಡ ತನ್ನ ಸಾಲದ ದರವನ್ನು 5 ಬೇಸಿಸ್ ಪಾಯಿಂಟ್ ಗಳಷ್ಟು ಹೆಚ್ಚಿಸಿವೆ. ಆದರೆ ಹೆಚ್ ಡಿಎಫ್ ಸಿ ಬ್ಯಾಂಕ್ ಸಾಲದ ದರವನ್ನು 85 ಬೇಸಿಸ್ ಪಾಯಿಂಟ್ ಗಳಷ್ಟು ಕಡಿತಗೊಳಿಸಿದೆ. ಕೆನರಾ ಬ್ಯಾಂಕ್ ನಲ್ಲಿ ಸಾಲ ಪಡೆದವರ ಮೇಲೆ ಎಂಸಿಎಲ್ ಆರ್ ದರದ ಹೆಚ್ಚಳವು ನಕಾರಾತ್ಮಕ ಪರಿಣಾಮವನ್ನು ಬೀರಲಿದೆ.

Join Nadunudi News WhatsApp Group

Canara Bank Interest Rate Hike
Image Source: Zee Business

Join Nadunudi News WhatsApp Group