Land Tax: ಕೇಂದ್ರದಿಂದ ಜಾರಿಗೆ ಬಂತು ಇನ್ನೊಂದು ತೆರಿಗೆ ನಿಯಮ, ಆಸ್ತಿ ಮಾರಾಟ ಮಾಡುವವರಿಗೆ ಹೊಸ ನಿಯಮ.
ಇದೀಗ ಕೇಂದ್ರ ಸರ್ಕಾರ ಕೃಷಿ ಭೂಮಿ ಮಾರಾಟ ಮಾಡುವವರಿಗೆ ಇನ್ನೊಂದು ನಿಯಮವನ್ನು ಜಾರಿಗೆ ತಂದಿದೆ.
Capital Gain Tax For Agricultural Land: ದೇಶದಲ್ಲಿ ವಿವಿಧ ರೀತಿಯ ತೆರಿಗೆ ನಿಯಮಗಳಿವೆ. ಹೆಚ್ಚಿನ ಆದಾಯದ ಮೂಲಗಳಿಗೆ ಆದಾಯ ಇಲಾಖೆ Tax ವಿಧಿಸುತ್ತದೆ. ತೆರಿಗೆ ಪಾವತಿದಾರರಿಗೆ ಆದಾಯ ಇಲಾಖೆ ವಿವಿಧ ರೀತಿಯನ್ನು ನಿಯಮವನ್ನು ಜಾರಿಗೊಳಿಸುತ್ತಿದೆ. ತೆರಿಗೆ ಇಲಾಖೆ (Income Tax Department) ಕೆಲ ಮೂಲದ ಆದಾಯಗಳಿಗೆ ತೆರಿಗೆ ವಿನಾಯಿತಿಯನ್ನು ನೀಡುತ್ತದೆ.
ಸಾಮಾನ್ಯವಾಗಿ ಕೃಷಿಯಿಂದ ಬಂದ ಆದಾಯದ ಮೂಲಗಳಿಗೆ ತೆರಿಗೆ ಪಾವತಿಸುವ ಅಗತ್ಯ ಇರುವುದಿಲ್ಲ. ಆದರೆ ಕೃಷಿ ಭೂಮಿಯನ್ನು ಮಾರಿದಾಗ ಬರುವ ಆದಾಯಕ್ಕೆ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಕೇಂದ್ರ ಸರಕಾರ ಆಗಾಗ ಹೊಸ ಹೊಸ ತೆರಿಗೆ ನಿಯಮವನ್ನು ಜಾರಿಗೊಳಿಸುತ್ತದೆ. ಇದೀಗ ಕೇಂದ್ರದಿಂದ ಹೊಸ ನಿಯಮ ಜಾರಿಗೆ ಬಂದಿದೆ.
ಕೇಂದ್ರದಿಂದ ಜಾರಿಗೆ ಬಂತು ಇನ್ನೊಂದು ತೆರಿಗೆ ನಿಯಮ
ಇದೀಗ ಕೇಂದ್ರ ಸರ್ಕಾರ (Central Government) ಕೃಷಿ ಭೂಮಿ ಮಾರಾಟ ಮಾಡಿದಾಗ ಬರುವ ಆದಾಯಕ್ಕೆ ಯಾವ ರೀತಿ ತೆರಿಗೆ ಪಾವತಿಸಬೇಕಾಗುತ್ತದೆ ಎನ್ನುವ ಬಗ್ಗೆ ಹೊಸ ತೆರಿಗೆ ನಿಯಮವನ್ನು ಜಾರಿಗೊಳಿಸಿದೆ. ಸಾಮಾನ್ಯವಾಗಿ ನೆಲದ ಮಾಲೀಕತ್ವವನ್ನು Capital Asset ಎಂದು ಪರಿಗಣಿಸಲಾಗುತ್ತದೆ. ಈ Capital Asset ಗೆ Capital Gain Tax ಅನ್ವಯವಾಗುತ್ತದೆ. ಕೆಲ ಕೃಷಿ ಭೂಮಿಗೂ Capital Gain Tax ಅನ್ವಯವಾಗುತ್ತದೆ.
ಇಂತಹ ಕೃಷಿ ಭೂಮಿಗೆ Capital Gain Tax ಅನ್ವಯ
ಕೃಷಿ ಭೂಮಿಗೂ ಟ್ಯಾಕ್ಸ್ ಅನ್ವಯವಾಗುತ್ತದಾ ಎಂದು ಎಲ್ಲರೂ ಗೊಂದಲದಲ್ಲಿರುತ್ತಾರೆ. ಗ್ರಾಮೀಣ ಭಾಗದ ಕೃಷಿ ಭೂಮಿಯ ಮಾರಾಟದಿಂದ ಸಿಗುವ ಹಣಕ್ಕೆ ಯಾವುದೇ ರೀತಿಯ Capital Gain Tax ಅನ್ವಯ ಆಗುವುದಿಲ್ಲ. ಬದಲಾಗಿ ನಗರ ಭಾಗದ ಕೃಷಿ ಭೂಮಿಯ ಮಾರಾಟದಿಂದ ಸಿಗುವ ಹಣಕ್ಕೆ Capital Gain Tax ಅನ್ವಯ ಆಗುತ್ತದೆ. ಇನ್ನು 10,000 ಜನಸಂಖ್ಯೆಗಿಂತ ಹೆಚ್ಚಿರುವ ಮುನ್ಸಿಪಾಲಿಟಿ ವ್ಯಾಪ್ತಿಗೆ ಬರುವ ಪ್ರದೇಶದಲ್ಲಿನ ಕೃಷಿ ಭೂಮಿಯನ್ನು ನಗರ ಕೃಷಿ ಜಮೀನು ಎಂದು ಪರಿಗಣಿಸಲಾಗುತ್ತದೆ.
ಈ ಜಮೀನಿನ ಮಾರಾಟದ ಲಾಭದ ಮೇಲೆ ತೆರಿಗೆ ಅನಾವಯವಾಗುತ್ತದೆ. ಇನ್ನು ಸ್ಥಿರಾಸ್ತಿಯ ಮೇಲೆ ತೆರಿಗೆ ಅನ್ವಯವಾಗುವ ಬಗ್ಗೆ ಎಲ್ಲರಿಗು ತಿಳಿದಿರುವ ವಿಚಾರ. ಯಾವುದೇ ಸ್ಥಿರಾಸ್ತಿ ಮಾರಾಟವಾದಾಗ ಅದರ ಲಾಭದ ಮೇಲೆ ತೆರಿಗೆ ಅವಲಂಬಿಸಿರುತ್ತದೆ. ಇನ್ನು ಆಸ್ತಿಯನ್ನು ಹೊಂದಿದ ಎಷ್ಟು ವರ್ಷಗಳ ಬಳಿಕ ಅದನ್ನು ಮಾರಾಟ ಮಾಡುತ್ತೀರಿ ಎನ್ನುವುದರ ಆಧಾರದ ಮೇಲೆ Long Term Capital Gain Tax ಮತ್ತು Short Term Capital Gain Tax ಅನ್ವಯವಾಗುತ್ತದೆ.