Car Loan: ಸಾಲದ ಮೇಲೆ ಕಾರ್ ಖರೀದಿ ಎಷ್ಟು ಲಾಭದಾಯಕ..? ಕಾರ್ ಖರೀದಿಸುವ ಮುನ್ನ ಎಚ್ಚರ.

ಇದೀಗ ಸಾಲದ ಮೇಲೆ ಕಾರ್ ಖರೀದಿಸಿದರೆ ಎಷ್ಟು ಲಾಭ ಪಡೆಯಬಹುದು ಎನ್ನುವ ಬಗ್ಗೆ ತಿಳಿಯಿರಿ.

Car Loan Benefit: ಸಾಮಾನ್ಯವಾಗಿ ಎಲ್ಲರಲ್ಲೂ ಹೊಸ ಕಾರ್ ಖರೀದಿಸಬೇಕು ಎನ್ನುವ ಆಸೆ ಇದ್ದೆ ಇರುತ್ತದೆ. ಈಗಂತೂ ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಕಾರ್ ಗಳು ಬಿಡುಗಡೆಯಾಗುವ ಮೂಲಕ ಗ್ರಾಹಕರನ್ನು ಸೆಳೆಯುತ್ತಿದೆ.ವಿಭಿನ್ನ ರೂಪಾಂತರದ ಅನೇಕ ಬ್ರಾಂಡ್ ನ ಕಾರ್ ಗಳು ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿದೆ.

ಇನ್ನು ವಿವಿಧ ಕಾರ್ ತಯಾರಕ ಕಂಪನಿಗಳು ಗ್ರಾಹಕರಿಗೆ ಇಷ್ಟವಾಗುವ ಮಾದರಿಯಲ್ಲಿ ಕಾರ್ ಗಳನ್ನೂ ಪರಿಚಯಿಸುವುದರ ಜೊತೆಗೆ ವಿವಿಧ ಹಣಕಾಸಿನ ಯೋಜನೆಯನ್ನು ಕೂಡ ನೀಡುತ್ತದೆ. ಇದೀಗ ನೀವು ಹಣಕಾಸಿನ ಯೋಜನೆಯ ಮೂಲಕ ಕಾರ್ ಖರೀದಿಸಿದರೆ ಎಷ್ಟು ಲಾಭವನ್ನು ಪಡೆಯಬಹೌದು ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

Car Loan Benefit
Image Credit: Idfcfirstbank

ಕಾರ್ ಖರೀದಿಸುವ ಮುನ್ನ ಈ ಮಾಹಿತಿ ತಿಳಿದುಹೊಳ್ಳಿ
ಸಾಮಾನ್ಯವಾಗಿ ಕಾರ್ ಗಳಿಗೆ ಅನೇಕ ಕಂಪನಿಗಳು ಹಣಕಾಸಿನ ಯೋಜನೆಯನ್ನು ನೀಡುತ್ತವೆ. ಆದರೆ ನಿಮ್ಮ ಬಳಿ ಕಾರ್ ಖರೀದಿಸಲು ನಗದು ಹಣ ಇದ್ದರೆ ಹಣಕಾಸಿನ ಯೋಜನೆಯನ್ನು ನಿರ್ಲಕ್ಷಿಸುತ್ತೀರಿ. ನೀವು ಪೂರ್ಣ ಪ್ರಮಾಣದ ಹಣವನ್ನು ನೀಡಿ ಕಾರನ್ನು ಖರೀದಿಸುವುದಕ್ಕಿಂತ ಡೌನ್ ಪೇಮೆಂಟ್ ನಲ್ಲಿ ಕಾರ್ ಖರೀದಿಸಿ ಉಳಿದ ಹಣವನ್ನು ಹೂಡಿಕೆ ಮಾಡಿದರೆ ನೀವು ಮಾಸಿಕ EMI ಪಾವತಿಸಬೇಕಾದ ಮೊತ್ತಕ್ಕಿಂತ ಹೆಚ್ಚಿನ ಬಡ್ಡಿಯನ್ನು ಪಡೆಯಬಹುದು. ಇದೀಗ ನಗದು ಹಣ ನೀಡುವ ಬದಲು ಸಾಲದ ಮೇಲೆ ಕಾರ್ ಖರೀದಿ ಎಷ್ಟು ಲಾಭ ನೀಡುತ್ತದೆ ಎನ್ನುವ ಬಗೆ ವಿವರ ಇಲ್ಲಿದೆ.

ಸಾಲದ ಮೇಲೆ ಕಾರ್ ಖರೀದಿ ಎಷ್ಟು ಲಾಭದಾಯಕ..?
ಅಂದಾಜು ಒಂದು ಕಾರಿನ ಬೆಲೆ 15 ಲಕ್ಷ ಇದ್ದರೆ, ನಿಮ್ಮ ಬಳಿ 15 ಲಕ್ಷ ಪೂರ್ಣ ಪ್ರಮಾಣದ ಮೊತ್ತ ಇದ್ದು ಅದನ್ನು ನೀವು ಕಾರ್ ಖರೀದಿಗೆ ಬಳಸಬೇಡಿ. ಅದರ ಬದಲಾಗಿ ಕೆಡಿಮೆ ಡೌನ್ ಪೇಮೆಂಟ್ ನ ಮೂಲಕ ಕಾರ್ ಖರೀದಿಸಿ ಉಳಿದ ಹಣವನ್ನು ಹೂಡಿಕೆಯೇ ವ್ಯಯಿಸಿ.

ನೀವು ಯಾವುದೇ ಯೋಜನೆಯಲ್ಲಿ ಉಳಿದ ಹಣವನ್ನು ಹೂಡಿಕೆ ಮಾಡಬಹುದು. ಅನೇಕ ಹಣಕಾಸು ಸಂಸ್ಥೆಗಳು 100 ಪ್ರತಿಶತ ಸಾಲವನ್ನು ನೀಡುತ್ತವೆ. ನೀವು ಸಂಪೂರ್ಣ ರೂ 15 ಲಕ್ಷವನ್ನು ಹೂಡಿಕೆ ಮಾಡಬಹುದು ಮತ್ತು ಕಾರ್ ಸಾಲವನ್ನು ತೆಗೆದುಕೊಳ್ಳಬಹುದು.

Join Nadunudi News WhatsApp Group

Benefits of getting a car loan
Image Credit: Askbankifsccode

ಕಾರ್ ಸಾಲದ ಪ್ರಯೋಜನ ತಿಳಿಯಿರಿ
ನೀವು 12 ಪ್ರತಿಶತ ವಾರ್ಷಿಕ ಆದಾಯವನ್ನು ಹೊಂದಿರುವ ಯೋಜನೆಯಲ್ಲಿ ರೂ 15 ಲಕ್ಷವನ್ನು ಹೂಡಿಕೆ ಮಾಡಿದರೆ ನಂತರ 7 ವರ್ಷಗಳ ನಂತರ ನಿಮ್ಮ ಬಂಡವಾಳವು ರೂ 33,16,022 ಕ್ಕೆ ಹೆಚ್ಚಾಗುತ್ತದೆ. 15 ಲಕ್ಷ ರೂಪಾಯಿಗಳ ಕಾರ್ ಲೋನ್‌ ನಲ್ಲಿ ನಿಮ್ಮ ಮಾಸಿಕ EMI ರೂ 23,755 ಆಗಿರುತ್ತದೆ. ಈ ರೀತಿ ಕಾರಿಗೆ ಬಡ್ಡಿ ಸೇರಿ ಒಟ್ಟು 19,95,397 ರೂ. ಪಡೆಯಬಹುದು. ಹೊಸ ಕಾರಿಗೆ ಹಣವನ್ನು ಪಾವತಿಸುವ ಬದಲು ಕಾರ್ ಲೋನ್ ತೆಗೆದುಕೊಳ್ಳುವುದು ಉತ್ತಮ ಆಯ್ಕೆಯಾಗಿದೆ.

Join Nadunudi News WhatsApp Group