Car Price Hike: 2024 ಕ್ಕೆ ದುಬಾರಿಯಾಗಲಿದೆ ಈ ಎಲ್ಲಾ ಕಾರುಗಳು, ಹೊಸ ಖರೀದಿಸುವವರಿಗೆ ಬೇಸರದ ಸುದ್ದಿ.

2024 ಕ್ಕೆ ದುಬಾರಿಯಾಗಲಿದೆ ಈ ಎಲ್ಲಾ ಕಾರುಗಳು

Car Price Hike In 2024: ಸದ್ಯ 2023 ರ ಆರಂಭದಿಂದ ದೇಶದಲ್ಲಿ ಸಾಕಷ್ಟು ನಿಯಮಗಳು ಬದಲಾಗಿವೆ. ಜನರು ಹೊಸ ಹೊಸ ನಿಯಮವನ್ನು ಅನುಸರಿಸುವುದು ಕಡ್ಡಾಯವಾಗಿದೆ. ಇನ್ನು 2023 ರ ಕೊನೆಯ ತಿಂಗಳು ಆರಂಭವಾಗಿದ್ದು ಇನ್ನೇನ್ನು 22 ದಿನಗಳಲ್ಲಿ 2023 ಮುಗುಡು 2024 ಆರಂಭವಾಗಲಿದೆ.

2023 ರಲ್ಲಿ ನಿಯಮ ಬದಲಾದಂತೆ 2024 ರಲ್ಲಿ ಕೂಡ ಸಾಕಷ್ಟು ನಿಯಮಗಳು ಬದಲಾಗಲಿದೆ. ಇದೀಗ ಹೊಸ ವರ್ಷಕ್ಕೆ ಕಾರ್ ಖರೀದಿಸುವವರಿಗೆ 2024 ರ ಹೊಸ ನಿಯಮ ಬೇಸರ ಮೂಡಿಸಲಿದೆ. ಮಾರುಕಟ್ಟೆಯಲ್ಲಿ ವಿವಿಧ ಕಾರ್ ತಯಾರಕ ಕಂಪನಿಗಳು ತನ್ನ ಉತ್ಪನ್ನಗಳ ಬೆಲೆಯನ್ನು ಹೆಚ್ಚಿಸಲಿದೆ. ಈ ಎಲ್ಲಾ ಕಾರುಗಳು 2024 ಕ್ಕೆ ದುಬಾರಿಯಾಗಲಿದೆ.

Maruti Car Price Hike
Image Credit: Hindustan Times

2024 ಕ್ಕೆ ದುಬಾರಿಯಾಗಲಿದೆ ಈ ಎಲ್ಲಾ ಕಾರುಗಳು
•Maruti Car Price Hike
ಮಾರುತಿ ತನ್ನ ಅರೆನಾ ಮತ್ತು ನೆಕ್ಸಾ ಕಾರುಗಳ ಬೆಲೆಯನ್ನು ನವೆಂಬರ್ 2023 ರ ಅಂತ್ಯದ ವೇಳೆಗೆ ಹೆಚ್ಚಿಸುವುದಾಗಿ ಘೋಷಿಸಿದೆ. ಹೊಸ ದರಗಳು ಜನವರಿ 2024 ರಿಂದ ಜಾರಿಗೆ ಬರಲಿದೆ.

Hyundai Car Price Hike
Image Credit: Gaadiwaadi

•Hyundai Car Price Hike
ಜನಪ್ರಿಯ ಕಾರು ಕಂಪನಿ ಹ್ಯುಂಡೈ ತನ್ನ ವಿವಿಧ ಕಾರುಗಳ ಬೆಲೆಗಳನ್ನು ಜನವರಿ 2024 ರಿಂದ ಜಾರಿಗೆ ಬರುವಂತೆ ಹೆಚ್ಚಿಸುವುದಾಗಿ ಘೋಷಿಸಿದೆ. ವೆಚ್ಚ ಹೆಚ್ಚಳ, ಹೆಚ್ಚಿನ ವಿನಿಮಯ ದರ ಮತ್ತು ಸರಕುಗಳ ಬೆಲೆಯಲ್ಲಿನ ಏರಿಕೆಯಿಂದಾಗಿ ಕಂಪನಿಯು ಬೆಲೆ ಏರಿಕೆಯನ್ನು ಘೋಷಿಸಿದೆ.

Tata Motors Car Price Hike
Image Credit: Thequint

•Tata Motors Car Price Hike
ಟಾಟಾ ಮೋಟಾರ್ಸ್ ಜನವರಿ 2024 ರಿಂದ ICE ಮತ್ತು EV ಸೇರಿದಂತೆ ತನ್ನ ಎಲ್ಲಾ ಮಾದರಿಗಳ ಬೆಲೆಗಳನ್ನು ಹೆಚ್ಚಿಸುವುದಾಗಿ ಘೋಷಿಸಿದೆ. ಟಾಟಾ ಪ್ರಸ್ತುತ EV ಗಳು ಸೇರಿದಂತೆ 10 ಕ್ಕೂ ಹೆಚ್ಚು ಮಾದರಿಯ ಕಾರುಗಳನ್ನು ಹೊಂದಿದೆ.

Join Nadunudi News WhatsApp Group

Mahindra Car Price Hike
Image Credit: Gaadify

•Mahindra Car Price Hike
ಮಹಿಂದ್ರಾ ಕೂಡ ತನ್ನ ಉತ್ಪನ್ನಗಳ ಬೆಲೆಯನ್ನು ಹೆಚ್ಚಿಸುವುದಾಗಿ ಘೋಷಿಸಿದೆ. XUV400 EV ಸೇರಿದಂತೆ ಎಲ್ಲಾ ಮಹೀಂದ್ರ ಮಾದರಿಗಳು ಜನವರಿ 2024 ರಿಂದ ಹೆಚ್ಚು ದುಬಾರಿಯಾಗಲಿವೆ. ಹೆಚ್ಚಿನ ವೆಚ್ಚ ಮತ್ತು ಹಣದುಬ್ಬರವನ್ನು ಉಲ್ಲೇಖಿಸಿ ಕಂಪನಿಯು ಬೆಲೆ ಏರಿಕೆಯನ್ನು ಘೋಷಿಸಿದೆ.

Audi Car Price Hike
Image Credit: Autocarindia

•Audi Car Price Hike
ಜನಪ್ರಿಯ ಕಾರು ತಯಾರಿಕಾ ಕಂಪನಿಯಾದ ಆಡಿ ಕೂಡ ತನ್ನ ಎಲ್ಲಾ ಕಾರುಗಳ ಬೆಲೆಯನ್ನು ಜನವರಿ 2024 ರಿಂದ ಜಾರಿಗೆ ತರಲು ನಿರ್ಧರಿಸಿದೆ. ಹೆಚ್ಚಿನ ವೆಚ್ಚದ ಕಾರಣ ಬೆಲೆಯನ್ನು ಹೆಚ್ಚಿಸುತ್ತಿದೆ ಎಂದು ಕಂಪನಿ ಹೇಳಿದೆ.

Join Nadunudi News WhatsApp Group