Saving Account Rule: ಬ್ಯಾಂಕ್ ಖಾತೆಯಲ್ಲಿ ಇದಕ್ಕಿಂತ ಹೆಚ್ಚು ಹಣ ಇಟ್ಟರೆ ಕಟ್ಟಬೇಕು ತೆರಿಗೆ, ಜಾರಿಗೆ ಬಂತು ಹೊಸ ತೆರಿಗೆ ನಿಯಮ
ಬ್ಯಾಂಕ್ ನ ಉಳಿತಾಯ ಖಾತೆಯಲ್ಲಿ ಎಷ್ಟು ಹಣ ಉಳಿತಾಯ ಮಾಡಬಹುದು...? ಇಷ್ಟು ಉಳಿತಾಯ ಹಣದ ಬಡ್ಡಿಗೆ ತೆರಿಗೆ ಪಾವತಿ ಕಡ್ಡಾಯ
Cash Deposit Limit For Saving Account: ಪ್ರತಿಯೊಬ್ಬ ವ್ಯಕ್ತಿಗೂ ಉಳಿತಾಯ ಅನ್ನುವುದು ಬಹಳ ಮುಖ್ಯ ಆಗಿರುತ್ತದೆ. ಬ್ಯಾಂಕ್ ನಲ್ಲಿ ಖಾತೆಯನ್ನು ಹೊಂದಿ ಉಳಿತಾಯ ಮಾಡದೇ ಇರುವವರ ಸಂಖ್ಯೆ ಬಹಳ ಕಡಿಮೆ. ಹೆಚ್ಚಾಗಿ ಪ್ರತಿಯೊಬ್ಬರು ಬ್ಯಾಂಕ್ ನಲ್ಲಿ ಖಾತೆ ಹೊಂದಿ ಒಂದಿಷ್ಟು ಹಣವನ್ನು ಉಳಿತಾಯ ಮಾಡಿರುತ್ತಾರೆ.
ಬ್ಯಾಂಕ್ ನಲ್ಲಿ ಉಳಿತಾಯ ಮಾಡುವ ಹಣಕ್ಕೆ ಯಾವುದೇ ನಿರ್ಬಂಧ ಅಥವಾ ನಿಯಮಗಳಿಲ್ಲ.ಹೆಚ್ಚು ಹಣ ಅಥವಾ ಕಡಿಮೆ ಹಣ ಯಾವುದೇ ಆಗಲಿ ಬ್ಯಾಂಕ್ ನಲ್ಲಿ ಉಳಿತಾಯ ಮಾಡಬಹುದಾಗಿದೆ. ಉಳಿತಾಯ ಖಾತೆಯಲ್ಲಿ ಹಣವನ್ನು ಠೇವಣಿ ಮಾಡಲು ಆದಾಯ ತೆರಿಗೆ ಕಾಯ್ದೆ ಅಥವಾ ಬ್ಯಾಂಕಿಂಗ್ ನಿಬಂಧನೆಗಳಲ್ಲಿ ಯಾವುದೇ ಮಿತಿಯಿಲ್ಲ.
![Savings Account Deposit Limit](https://nadunudi.in/wp-content/uploads/2023/12/Savings-Account-Deposit-Limit.png)
ಠೇವಣಿ ಇಟ್ಟ ಹಣಕ್ಕೆ ತೆರಿಗೆ ಪಾವತಿ ಮಾಡಬೇಕಾ ?
ಒಂದೊಮ್ಮೆ ನಿಮ್ಮ ಬ್ಯಾಂಕ್ ಖಾತೆಯಲ್ಲಿ10 ಲಕ್ಷ ರೂ.ಗಿಂತ ಹೆಚ್ಚಿನ ಹಣವನ್ನು ಠೇವಣಿ ಇಟ್ಟರೆ ಬ್ಯಾಂಕ್ ಖಂಡಿತವಾಗಿಯೂ ಅದರ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ತಿಳಿಸುತ್ತದೆ. ಆದಾಯ ತೆರಿಗೆ ಕಾಯ್ದೆ, 1961 ರ ಸೆಕ್ಷನ್ 285 ಬಿಎ ಪ್ರಕಾರ, ಬ್ಯಾಂಕುಗಳು ಈ ಮಾಹಿತಿಯನ್ನು ಒದಗಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಉಳಿತಾಯ ಖಾತೆಯಲ್ಲಿ ಇರಿಸಲಾಗಿರುವ ನಗದು ನಿಮ್ಮ ITR ನಲ್ಲಿ ನೀಡಲಾದ ಮಾಹಿತಿಯೊಂದಿಗೆ ಹೊಂದಿಕೆಯಾಗದಿದ್ದರೆ ಆದಾಯ ತೆರಿಗೆ ಇಲಾಖೆ ನಿಮಗೆ ನೋಟಿಸ್ ನೀಡಬಹುದು.
![Cash Deposit Limit For Saving Account](https://nadunudi.in/wp-content/uploads/2023/12/Cash-Deposit-Limit-For-Saving-Account.png)
ಬಡ್ಡಿಯ ಮೇಲೆ ಆದಾಯ ತೆರಿಗೆ
ಆದಾಯ ತೆರಿಗೆ ಪಾವತಿದಾರರು ತಮ್ಮ ಐಟಿಆರ್ ಸಲ್ಲಿಸುವಾಗ ಉಳಿತಾಯ ಖಾತೆಯಲ್ಲಿ ಠೇವಣಿ ಇಟ್ಟ ಹಣದ ಬಗ್ಗೆಯೂ ಮಾಹಿತಿಯನ್ನು ಒದಗಿಸಬೇಕು. ನಿಮ್ಮ ಉಳಿತಾಯ ಖಾತೆ ಠೇವಣಿಗಳಿಂದ ನೀವು ಪಡೆಯುವ ಬಡ್ಡಿಯನ್ನು ನಿಮ್ಮ ಆದಾಯಕ್ಕೆ ಸೇರಿಸಲಾಗುತ್ತದೆ. ಬಡ್ಡಿಯ ಮೇಲೆ ಆದಾಯ ತೆರಿಗೆ ವಿಧಿಸಲಾಗುತ್ತದೆ. ಉಳಿತಾಯ ಖಾತೆಯಲ್ಲಿ ಇರಿಸಲಾದ ಹಣದ ಮೇಲೆ ಗಳಿಸಿದ ಬಡ್ಡಿ ಇದು 10,000 ರೂ.ಗಿಂತ ಕಡಿಮೆಯಿದ್ದರೆ, ತೆರಿಗೆ ಪಾವತಿಸುವ ಅಗತ್ಯವಿಲ್ಲ.
60 ವರ್ಷಕ್ಕಿಂತ ಮೇಲ್ಪಟ್ಟ ಗ್ರಾಹಕರಿಗೆ 50,000 ರೂ.ವರೆಗಿನ ಬಡ್ಡಿಯ ಮೇಲೆ ತೆರಿಗೆ ವಿಧಿಸಲಾಗುತ್ತದೆ.ಬ್ಯಾಂಕ್ ಬಡ್ಡಿಯ ಮೇಲೆ ಶೇಕಡಾ 10 ರಷ್ಟು TDS ಕಡಿತಗೊಳಿಸುತ್ತದೆ. ಉಳಿತಾಯ ಖಾತೆಯಿಂದ ಬರುವ ಬಡ್ಡಿಯನ್ನು ಸಹ ತೆರಿಗೆಯಿಂದ ವಿನಾಯಿತಿ ನೀಡಬಹುದು. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಟಿಟಿಎ ಪ್ರಕಾರ, ಎಲ್ಲಾ ವ್ಯಕ್ತಿಗಳು 10,000 ರೂ.ಗಳವರೆಗೆ ತೆರಿಗೆ ವಿನಾಯಿತಿ ಪಡೆಯಬಹುದು.