Cash Limit: ಭಾರತೀಯ ಕಾನೂನಿನ ಪ್ರಕಾರ ಮನೆಯಲ್ಲಿ ಎಷ್ಟು ಹಣವನ್ನು ಇರಿಸಿಕೊಳ್ಳಬಹುದು…? ಕೇಂದ್ರದ ನಿಯಮ

ಭಾರತೀಯ ಕಾನೂನಿನ ಪ್ರಕಾರ ಮನೆಯಲ್ಲಿ ಎಷ್ಟು ಹಣವನ್ನು ಇರಿಸಿಕೊಳ್ಳಬಹುದು...?

Cash Limit At Home In India: ಪ್ರಸ್ತುತ ದೇಶದಲ್ಲಿ ಹಣಕಾಸಿನ ವಹಿವಾಟುಗಳು ಡಿಜಿಟಲ್ ಮೂಲಕ ನಡೆಯುತ್ತಿದ್ದರೂ ಕೂಡ ಒಂದಿಷ್ಟು ವ್ಯಹಾರಗಳು ನಗದು ಮೂಲಕ ನಡೆಯುತ್ತಿದೆ. ಇನ್ನು ಆದಾಯ ಇಲಾಖೆಯು ಎಲ್ಲ ರೀತಿಯ ಹಣದ ವ್ಯವಹಾರಗಳ ಬಗ್ಗೆ ಹೆಚ್ಚಿನ ಗಮನ ಇಡುತ್ತದೆ. ಕಾರಣ ಹಣದ ವಹಿವಾಟಿನಲ್ಲಿ ಯಾವುದೇ ತೆರಿಗೆ ಪಾವತಿದಾರರು ತಪ್ಪನ್ನು ಮಾಡಬಾರದು ಎನ್ನುವ ಉದ್ದೇಶದಿಂದ ಹೆಚ್ಚಿನ ಕ್ರಮ ಕೈಗೊಳ್ಳಲಾಗುತ್ತದೆ.

ಆದಾಯ ಇಲಾಖೆಯು ನಗದು ವಹಿವಾಟಿಗೆ ಸಂಬಂಧಿಸಿದಂತೆ ಅನೇಕ ನಿಯಮಾವಳಿಗಳನ್ನು ರೂಪಿಸಿದೆ. ಇನ್ನು ನೀವು ಮನೆಯಲ್ಲಿ ಇರಿಸಬಹುದಾದ ನಗದು ಹಣಕ್ಕೆ ಕೂಡ ಭಾರತೀಯ ಕಾನೂನಿನಲ್ಲಿ ನಿಯಮವಿದೆ. ನಿಯಮಕ್ಕಿಂತ ಹೆಚ್ಚಿನ ಹಣವನ್ನು ಮನೆಯಲ್ಲಿ ಇರಿಸಿಕೊಂಡರೆ ಆದಾಯ ಇಲಾಖೆಯು ಅದರ ವಿರುದ್ಧ ಕ್ರಮ ಕೈಗೊಳ್ಳಬಹುದು.

Cash Limit At Home In India
Image Credit: Moneycontrol

ನಗದು ಹಣದ ಮಿತಿಯ ಬಗ್ಗೆ ನಿಮಗೆ ಅರಿವಿರಲಿ
ಆದಾಯ ಇಲಾಖೆ ನಗದಿಗೆ ಸಂಬಂಧಿಸಿದಂತೆ ಅನೇಕ ನಿಯಮಾವಳಿಗಳನ್ನು ರೂಪಿಸಿದೆ. ಮನೆಯಲ್ಲಿ ಎಷ್ಟು ಹಣವನ್ನು ಇಟ್ಟುಕೊಳ್ಳಬಬಹುದು ಎನ್ನುವುದಕ್ಕೂ ಆದಾಯ ಇಲಾಖೆಯಲ್ಲಿ ಪ್ರತ್ಯೇಕ ನಿಯಮವಿದೆ. ಇನ್ನು ಆದಾಯ ಇಲಾಖೆ ಮನೆಯಲ್ಲಿ ಇರಿಸಲಾದ ದಾಖಲೆ ರಹಿತ ಹಣದ ವಿರುದ್ದ ದಾಳಿ ನಡೆಸಬಹುದು ಎನ್ನುವ ಬಗ್ಗೆ ನಿಮಗೆ ಅರಿವಿರಲಿ. ಹೀಗಾಗಿ ಮನೆಯಲ್ಲಿ ಇಂತಿಷ್ಟು ಹಣವನ್ನು ಮಾತ್ರ ಇಟ್ಟುಕೊಳ್ಳಬಹುದು ಎಂದು ಆದಾಯ ಇಲಾಖೆ ನಿಯಮ ಮಾಡಿದೆ. ಮನೆಗಳಲ್ಲಿ ದಾಖಲೆ ಇಲ್ಲದ ಹೆಚ್ಚಿನ ಹಣಗಳನ್ನು ಇಟ್ಟುಕೊಳ್ಳುವಂತಿಲ್ಲ.

ಭಾರತೀಯ ಕಾನೂನಿನ ಪ್ರಕಾರ ಮನೆಯಲ್ಲಿ ಎಷ್ಟು ಹಣವನ್ನು ಇರಿಸಿಕೊಳ್ಳಬಹುದು…?
•ಆದಾಯ ತೆರಿಗೆಯ ನಿಯಮಗಳ ಪ್ರಕಾರ, ನಿಮ್ಮ ಮನೆಯಲ್ಲಿ ನೀವು ಹೆಚ್ಚಿನ ಹಣವನ್ನು ಇಟ್ಟುಕೊಳ್ಳಬಹುದು, ಆದರೆ ತೆರಿಗೆ ಇಲಾಖೆಯವರು ಸಂಬಂಧಪಟ್ಟ ಹಣದ ದಾಖಲೆಯನ್ನು ಕೇಳಿದಾಗ ಸೂಕ್ತ ಮಾಹಿತಿ ನೀಡಬೇಕಾಗುತ್ತದೆ. ಕಾನೂನುಬದ್ಧವಾಗಿ ಆ ಹಣವನ್ನು ಗಳಿಸಿದ್ದರೆ ಸಂಪೂರ್ಣ ದಾಖಲೆಯನ್ನು ನೀಡಬೇಕು. ಹೆಚ್ಚಿನ ಹಣಗಳಿಗೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸಿದರೆ ಚಿಂತಿಸುವ ಅಗತ್ಯವಿಲ್ಲ.

Cash Limit At Home
Image Credit: Pixahive

•ದಾಖಲೆಗಳಿಲ್ಲದ ಹಣಗಳಿಗೆ ಹೆಚ್ಚಿನ ದಂಡವನ್ನು ಕಟ್ಟಬೇಕಾಗುತ್ತದೆ. ನಿಮ್ಮಿಂದ ಮರುಪಡೆಯಲಾದ ನಗದು ಮೊತ್ತಕ್ಕೆ ಆ ಮೊತ್ತದ 137 % ವರೆಗೆ ತೆರಿಗೆ ವಿಧಿಸಬಹುದು. ಅಂದರೆ ನಿಮ್ಮ ಬಳಿ ಇರುವ ನಗದು ಮೊತ್ತದ 37 % ಪಾವತಿಸಬೇಕಾಗುತ್ತದೆ. ಇನ್ನು ನೀವು 20 ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ಬ್ಯಾಂಕ್ ನಲ್ಲಿ ಠೇವಣಿ ಇಟ್ಟರೆ, ಅಥವಾ ಒಮ್ಮೆಲೇ 50 ಸಾವಿರಕ್ಕಿಂತ ಹೆಚ್ಚಿನ ಹಣವನ್ನು ಹಿಂಪಡೆದರೆ ಬ್ಯಾಂಕ್ ನಲ್ಲಿ ಹಣವನ್ನು ಹಿಂಪಡೆಯುವಾಗ ಪಾನ್ ಹಾಗೂ ಆಧಾರ್ ದಾಖಲೆಗಳನ್ನು ನೀಡಬೇಕಾಗುತ್ತದೆ.

Join Nadunudi News WhatsApp Group

•ಇನ್ನು ಬ್ಯಾಂಕಿನಲ್ಲಿ 2 ಕೋಟಿಗಿಂತಲೂ ಹೆಚ್ಚಿನ ಹಣವನ್ನು ಹಿಂಪಡೆದರೆ TDS ಪ್ರಮಾಣ ಪತ್ರ ಸಲ್ಲಿಸಬೇಕಾಗುತ್ತದೆ. ಅದೇ ರೀತಿಯಲ್ಲಿ ಮನೆಯಲ್ಲಿ 20 ಲಕ್ಷ ರೂಪಾಯಿಯಿಂದ ಹೆಚ್ಚಿನ ನಗದು ಇಟ್ಟುಕೊಳ್ಳುವುದು ಕಾನೂನು ಬಾಹಿರ ಕೂಡ ಆಗಿದೆ. 20 ಲಕ್ಷಕ್ಕಿಂತ ಹೆಚ್ಚಿನ ಹಣವನ್ನ ಮನೆಯಲ್ಲಿ ಇಟ್ಟುಕೊಂಡರೆ ತೆರಿಗೆ ಇಲಾಖೆ ದಾಳಿ ಮಾಡಿದ ಸಮಯದಲ್ಲಿ ಅಗತ್ಯ ದಾಖಲೆ ಸಲ್ಲಿಸಬೇಕಾಗುತ್ತದೆ ಎನ್ನುವುದು ನಿಮಗೆ ತಿಳಿದಿರಲಿ.

Join Nadunudi News WhatsApp Group