ATM Charges: SBI, HDFC ಮತ್ತು ICICI ಏಟಿಎಂ ಕಾರ್ಡ್ ಬಳಸುವವರಿಗೆ ಹೊಸ ನಿಯಮ, ಕಟ್ಟಬೇಕು ತೆರಿಗೆ.

ಏಟಿಎಂ ಮೂಲಕ ಹಣ ಪಡೆಯುವ ಎಲ್ಲಾ ಗ್ರಾಹಕರು ಇನ್ನುಮುಂದೆ ತೆರಿಗೆ ಕಟ್ಟಬೇಕು.

ATM Cash Withdrawal Charges: ಪ್ರಸ್ತುತ ದೇಶದಲ್ಲಿ ದಿನದಿಂದ ದಿನಕ್ಕೆ UPI Application ಗಳು ಬಳಕೆದಾರರಿಗೆ ಹೆಚ್ಚಿನ ಸೇವೆಯನ್ನು ನೀಡುತ್ತಿದೆ. ಈ ಕಾರಣಕ್ಕೆ ಜನರು ಬ್ಯಾಂಕಿಗೆ ಹೋಗುವುದನ್ನು ಹಾಗೂ ಎಟಿಎಂ ನಲ್ಲಿ ನಗದು ಹಿಂಪಡೆಯುವುದನ್ನು ಕಡಿಮೆ ಮಾಡಿದ್ದಾರೆ ಎನ್ನಬಹುದು. ಎಲ್ಲ ರೀತಿಯ ಹಣಕಾಸಿನ ವಹಿವಾಟುಗಳು ಮೊಬೈಲ್ ನಲ್ಲಿಯೇ ಮುಗಿಯುತ್ತಿದೆ.

ಯುಪಿಐ ಪಾವತಿಗಳು ಬಳಕೆಯಲ್ಲಿದ್ದರೂ ಕೂಡ ಬ್ಯಾಂಕ್ ಗಳು ತನ್ನ ಗ್ರಾಹಕರಿಗೆ Net Banking ಮತ್ತು ATM Card ಸೌಲಭ್ಯವನ್ನು ನೀಡುತ್ತವೆ. ಗ್ರಾಹಕರು Debit Card ನ ಮೂಲಕ ATM ಗಳಲ್ಲಿ ನಗದು ಹಿಂಪಡೆಯಬಹುದು. ಇನ್ನು ವಿವಿಧ ಬ್ಯಾಂಕ್ ಗಳು ನಗದು ಹಿಂಪಡೆಯುವಿಕೆಗೆ ಶುಲ್ಕವನ್ನು ವಿಧಿಸುತ್ತದೆ. ದೇಶದ ಪ್ರಸ್ತಿತ ಬ್ಯಾಂಕುಗಳು ವಿಧಿಸಿರುವ ATM Charges ನ ಬಗ್ಗೆ ಒಂದಿಷ್ಟು ವಿವರವನ್ನು ತಿಳಿಯೋಣ.

All customers withdrawing money through ATMs have to pay tax henceforth.
Immage Credit: hindustantimes

SBI, HDFC, ICICI ಮತ್ತು Axis ಏಟಿಎಂ ಕಾರ್ಡ್ ಬಳಸುವವರಿಗೆ ಹೊಸ ನಿಯಮ
*SBI Bank ATM Cash Withdrawal Charges
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 5 ಉಚಿತ ಎಟಿಎಂ ವಹಿವಾಟುಗಳನ್ನು ಮಾಸಿಕ ರೂ.25,000 ವರೆಗೆ ನೀಡುತ್ತದೆ. ಇದಕ್ಕಿಂತ ಹೆಚ್ಚಿನ ಹಣ ತೆಗೆದರೆ ಪ್ರತಿ ವಹಿವಾಟಿಗೆ 10 ರೂ. ಮತ್ತು ಜಿಎಸ್ಟಿ ಪಾವತಿಸಬೇಕಾಗುತ್ತದೆ. ಇತರ ಬ್ಯಾಂಕ್ ಎಟಿಎಂನಲ್ಲಿ ಪ್ರತಿ ವಹಿವಾಟಿಗೆ 20 ರೂ. ಮತ್ತು ಜಿಎಸ್ಟಿ ಪಾವತಿಸಬೇಕಾಗುತ್ತದೆ.

*PNB Bank ATM Cash Withdrawal Charges
ಪಂಜಾಬ್ ನ್ಯಾಷನಲ್ ಬ್ಯಾಂಕ್ 5 ಉಚಿತ ಎಟಿಎಂ ವಹಿವಾಟುಗಳನ್ನು ನೀಡುತ್ತದೆ. ಪ್ರತಿ ವಹಿವಾಟಿಗೆ 10 ರೂ. ಮತ್ತು ಜಿಎಸ್ಟಿ ಪಾವತಿಸಬೇಕಾಗುತ್ತದೆ. ಇತರ ಬ್ಯಾಂಕ್ ಎಟಿಎಂನಲ್ಲಿ ಪ್ರತಿ ವಹಿವಾಟಿಗೆ 21 ರೂ. ಮತ್ತು ಜಿಎಸ್ಟಿ ಪಾವತಿಸಬೇಕಾಗುತ್ತದೆ.

Those who get money through ATMs will have to pay higher fees from now on
Image Credit: justdial

*HDFC Bank ATM Cash Withdrawal Charges
HDFC ಬ್ಯಾಂಕ್ 5 ಉಚಿತ ಎಟಿಎಂ ವಹಿವಾಟುಗಳನ್ನು ನೀಡುತ್ತದೆ. ಪ್ರತಿ ವಹಿವಾಟಿಗೆ 10 ರೂ. ಮತ್ತು ಜಿಎಸ್ಟಿ ಪಾವತಿಸಬೇಕಾಗುತ್ತದೆ. ಇತರ ಬ್ಯಾಂಕ್ ಎಟಿಎಂ ನಲ್ಲಿ ಪ್ರತಿ ವಹಿವಾಟಿಗೆ 21 ರೂ. ಮತ್ತುGST ಪಾವತಿಸಬೇಕಾಗುತ್ತದೆ.

Join Nadunudi News WhatsApp Group

*ICICI Bank ATM Cash Withdrawal Charges
ICICI ಬ್ಯಾಂಕ್ 5 ಉಚಿತ ಎಟಿಎಂ ವಹಿವಾಟುಗಳನ್ನು ಮತ್ತು ಇತರ ಬ್ಯಾಂಕ್ ಗಳಿಗೆ 3 ಉಚಿತ ವಹಿವಾಟನ್ನು ನೀಡುತ್ತದೆ. ಪ್ರತಿ ವಹಿವಾಟಿಗೆ 20 ರೂ. ಮತ್ತು ಹಣಕಾಸೇತರ ವಹಿವಾಟಿಗೆ 8 .50 ರೂ.ಪಾವತಿಸಬೇಕಾಗುತ್ತದೆ.

ICICI Bank ATM Card Fee Change
Image Credit: Original Source

*Axis Bank ATM Cash Withdrawal Charges
Axis ಬ್ಯಾಂಕ್ ಗ್ರಾಹಕರು ಮೆಟ್ರೋ ನಗರಗಳಲ್ಲಿ ಪ್ರತಿ ತಿಂಗಳು 3 ಬಾರಿ ಮತ್ತು ಮೆಟ್ರೋ ಅಲ್ಲದ ನಗರಗಳಲ್ಲಿ 5 ಬಾರಿ ಉಚಿತ ಹಣವನ್ನು ಪಡೆಯಬಹುದು. ಇನ್ನು ಬ್ಯಾಂಕ್ ಪ್ರತಿ ಹಿಂಪಡೆಯುವಿಕೆಯ ಮೇಲೆ 21 ರೂಪಾಯಿ ಹೆಚ್ಚು ತೆರಿಗೆ ವಿಧಿಸುತ್ತದೆ. ಈ ಬ್ಯಾಂಕ್‌ನ ಗ್ರಾಹಕರು ಎಟಿಎಂ ಮೂಲಕ ಪ್ರತಿದಿನ 40 ರೂ. ಹೆಚ್ಚಿನ ವಹಿವಾಟಿಗೆ ನೀಡಬೇಕಾಗುತ್ತದೆ.

Join Nadunudi News WhatsApp Group