Smart Payment Ring: ಇನ್ಮುಂದೆ ರಿಂಗ್ ಮೂಲಕ ಮಾಡಬಹುದು ಆನ್ಲೈನ್ ಪೇಮೆಂಟ್, Phone Pe , Google Pay ಮತ್ತು UPI ಅಗತ್ಯವಿಲ್ಲ

ಇನ್ನುಮುಂದೆ Smart Ring ನ ಮೂಲಕ ನಗದು ರಹಿತ ಪಾವತಿ, ಪೇಮೆಂಟ್ ಮಾಡಲು ಬಂತು ಸ್ಮಾರ್ಟ್ ರಿಂಗ್

Cashless Payment By Using Smart Ring: ಪ್ರಸ್ತುತ ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಸಾಕಷ್ಟು ಹೊಸ ಹೊಸ ಆವಿಷ್ಕಾರಗಳು ಬೆಳಕಿಗೆ ಬಂದಿದೆ. ಮೊದಲಿನ ಕಾಲದಲ್ಲಿ ಇದ್ದಂತಹ ಸೌಲಭ್ಯಕ್ಕೆ ಹೋಲಿಸಿದರೆ ಈಗ ಹೆಚ್ಚಿನ ಹೊಸ ಹೊಸ ವೈಶಿಷ್ಟ್ಯಗಳು ಬೆಳಕಿಗೆ ಬಂದಿದೆ. ಮುಖ್ಯಾವಾಗಿ ಹಣಕಾಸಿನ ವಹಿವಾಟಿನಲ್ಲಿ ಬಹುದೊಡ್ಡ ಬದಲಾವಣೆ ಆಗಿದೆ ಎನ್ನಬಹುದು.

ಹೌದು, ಮೊದಲೆಲ್ಲ ಜನರು ನಗದು ಮೂಲಕ ತಮ್ಮ ವಹಿವಾಟನ್ನು ನಡೆಸುತ್ತಿದ್ದರು. ಯಾವುದೇ ವಸ್ತುವನ್ನು ಖರೀದಿಸಿದರು ಕೂಡ ಹಣವನ್ನು ಕೊಟ್ಟೆ ಖರೀದಿಸಬೇಕಾಗಿತ್ತು. ಇನ್ನು ಬ್ಯಾಂಕ್ ನ ವ್ಯವಹಾರ ಕೂಡ ಈ ಹಿಂದೆ ತುಸು ಕಷ್ಟವಾಗಿತ್ತು. ಖಾತೆಯಲ್ಲಿದ್ದ ಹಣವನ್ನು ತೆಗೆಯಬೇಕಿದ್ದರೆ ಬ್ಯಾಂಕ್ ಗೆ ಭೇಟಿ ನೀಡಬೇಕಾಗಿತ್ತು. ಆದರೆ ನಂತರ ದಿನಗಳಲ್ಲಿ ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಹೊಸ ಹೊಸ ಸೌಲಭ್ಯಗಳು ಪರಿಚಯವಾದವು.

Cashless Payment By Using Smart Ring
Image Credit: Infineon

ಹೊಸ ವರ್ಷದಲ್ಲಿ ಪರಿಚಯವಾಗಲಿದೆ ಹೊಸ ರೀತಿಯ ನಗದು ಪಾವತಿಯ ವಿಧಾನ
ಮೊದಲನೆಯದಾಗಿ ATM Card ಸೌಲಭ್ಯ ಗ್ರಾಹಕರಿಗೆ ಲಭ್ಯವಾಗಿತ್ತು. ಇದರಿಂದ ಜನರು ನಗದು ಹಿಂಪಡೆಯುವಿಕೆಯ ಪ್ರಕ್ರಿಯೆ ಸರಳವಾಗಿತ್ತು. ಪ್ರಸ್ತುತ UPI Payment ಬಳಕೆಗೆ ಬಂದಿದೆ. ಇದರಿಂದ ನಗದು ರಹಿತ ವಹಿವಾಟು ಆರಂಭವಾಗಿದೆ. ಆದರೆ ಇದೀಗ ತಂತ್ರಜ್ಞಾನ ಒಂದು ಹೆಜ್ಜೆ ಮುಂದೆ ಹೋಗಿ ಹೊಸ ರೀತಿಯ ನಗದು ಪಾವತಿಯ ವಿಧಾನವನ್ನು ಆವಿಷ್ಕರಿಸಿದೆ. ಈ ಹೊಸ ರೀತಿಯ ನಗದು ಪಾವತಿಯ ಬಗ್ಗೆ ನೀವು ಕೇಳಿದರೆ ಒಂದು ಕ್ಷಣ ಆಚಾರಿ ಪಡುವುದಂತೂ ನಿಜ. ಅಷ್ಟಕ್ಕೂ ಯಾವುದು ಈ ಹೊಸ ಪಾವತಿಯ ವಿಧಾನ..? ಇಲ್ಲಿದೆ ಸಂಪೂರ್ಣ ಮಾಹಿತಿ.

ಇನ್ನುಮುಂದೆ Phone pay , Google pay ಗೆ ಕೆಲಸವಿಲ್ಲ
ಪ್ರಸ್ತುತ ಡಿಜಿಟಲ್ ದುನಿಯಾದಲ್ಲಿ UPI Payment ಜನಸ್ನೇಹಿಯಾಗಿದ್ದು, ಇದನ್ನು ಮೀರಿಸುವಾತಹ ಫಾಸ್ಟ್ ಟ್ರಾನ್ಸಾಕ್ಷನ್ ಪಾವತಿ ಪರಿಚಯವಾಗಿದೆ. ನೀವು ನಿಮ್ಮ ಕೈಯಲ್ಲಿ ಈ ಉಂಗುರವನ್ನು ಧರಿಸುವುದರಿಂದ ನಗದು ರಹಿತ ವಹಿವಾಟನ್ನು UPI ನ ಹೊರತಾಗಿ ಮಾಡಬಹುದು. ಫ್ಯಾಶನ್ ಗಾಗಿ ಕೈ ಬೆರಳಿನಲ್ಲಿ ಧರಿಸುವ Ring ಇದೀಗ ನಿಮ್ಮ ನಗದು ರಹಿತ ವಹಿವಾಟಿಗೆ ಸಹಾಯವಾಗಲಿದೆ. ಯಾವುದೇ ರೀತಿಯ ATM , UPI ಪಾವತಿಯ ಸಹಾಯವಿಲ್ಲದೆ ನೀವು ಈ Smart Ring ನ ಮೂಲಕ ನಿಮ್ಮ ನಗದು ರಹಿತ ಪಾವತಿಯನ್ನು ಮುಗಿಸಿಕೊಳ್ಳಬಹುದು.

Smart Payment Ring
Image Credit: Bloomberg

ಈ Smart Ring ಹೇಗೆ ಕಾರ್ಯನಿರ್ವಹಿಸಲಿದೆ..?
ಸ್ಮಾರ್ಟ್ ರಿಂಗ್ ಅನ್ನು ಹಾಂಗ್ ಕಾಂಗ್ ಮೂಲದ ಟೋಪಿ ಎಂಬ ಕಂಪನಿ ಅಭಿವೃದ್ಧಿಪಡಿಸಿದೆ. ಈ ರಿಂಗ್ ಸ್ಮಾರ್ಟ್ ವೈರ್‌ ಲೆಸ್ ಪಾವತಿ ಚಿಪ್‌ ಗಳನ್ನು ಒಳಗೊಂಡಿದೆ. ಈ ರಿಂಗ್ ಫೋನ್ ಅಪ್ಲಿಕೇಶನ್‌ ನೊಂದಿಗೆ ಸಂಯೋಜಿತವಾಗಿ ಕಾರ್ಯನಿರ್ವಹಿಸುತ್ತದೆ. ಬಳಕೆದಾರರು ಫೋನ್‌ ನಲ್ಲಿರುವ ಆಯಾ ಅಪ್ಲಿಕೇಶನ್‌ ನಿಂದ ರಿಂಗ್‌ ಗೆ ಬ್ಯಾಂಕ್ ಖಾತೆಗಳನ್ನು ಲಿಂಕ್ ಮಾಡಬೇಕು.

Join Nadunudi News WhatsApp Group

ಅದರ ನಂತರ ನೀವು ಯಾವುದೇ ಅಂಗಡಿಯಲ್ಲಿ, ಪಾವತಿ ಯಂತ್ರದಲ್ಲಿ ಈ ಉಂಗುರವನ್ನು ತೋರಿಸುವ ಮೂಲಕ ಸುಲಭವಾಗಿ ಪಾವತಿಗಳನ್ನು ಮಾಡಬಹುದು. ಉಂಗುರವನ್ನು ಚಾರ್ಜ್ ಮಾಡುವ ಅಗತ್ಯವಿಲ್ಲ. ಈ ರಿಂಗ್ ತಂತ್ರಜ್ಞಾನವನ್ನು ಆಭರಣ ಕಂಪನಿಗಳಿಗೆ ಒದಗಿಸಿದರೆ ಬೆಳ್ಳಿ ಮತ್ತು ಚಿನ್ನದಿಂದಲೂ ಸ್ಮಾರ್ಟ್ ಉಂಗುರಗಳನ್ನು ತಯಾರಿಸಬಹುದು.

Join Nadunudi News WhatsApp Group