Cashless Treatment: ಇನ್ಮುಂದೆ ಯಾವುದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೆ ಕ್ಯಾಶ್ ಕೊಡುವ ಅಗತ್ಯ ಇಲ್ಲ, ಹೊಸ ಯೋಜನೆ ಜಾರಿ

ಇನ್ಮುಂದೆ ಎಲ್ಲಾ ಆಸ್ಪತ್ರೆಯಲ್ಲಿ ಕ್ಯಾಶ್ ಲೆಸ್ ಟ್ರೀಟ್ಮೆಂಟ್ ಲಭ್ಯ

Cashless Treatment In Hospitals: ಸಾಮಾನ್ಯವಾಗಿ ಜನರಿಗೆ ಆರೋಗ್ಯ ತೊಂದರೆ ಎದುರಾದಾಗ ಆರ್ಥಿಕ ಸಮಸ್ಯೆ ಎದುರಾಗುವುದು ಸಹಜ. ಈ ಸಂದರ್ಭದಲ್ಲಿ ಸಹಾಯವಾಗಲಿ ಎನ್ನುವ ಉದ್ದೇಶದಿಂದ ಜನರು ಆರೋಗ್ಯ ವಿಮ ಯೋಜನೆಯನ್ನು ಆರಂಭಿಸಿರುತ್ತಾರೆ. ಅನಾರೋಗ್ಯದ ಕಾರಣ ಆಸ್ಪತ್ರೆ ಸೇರಿದರೆ ಅಲ್ಲಿ ಹೆಚ್ಚಿನ ಹಣದ ಅವಶ್ಯಕತೆ ಬಂದಾಗ ಆರೋಗ್ಯ ವಿಮೆಯು ಸಹಾಯಕ್ಕೆ ಬರುತ್ತದೆ.

Cashless Treatment In Hospitals
Image Credit: Hindustantimes

ವಿಮಾ ಪಾಲಿಸಿ ಮಾಡಿಸಿದವರು ಇನ್ನುಮುಂದೆ ಹಣದ ಬಗ್ಗೆ ಚಿಂತಿಸುವ ಅಗತ್ಯವಿಲ್ಲ
ಇನ್ನು ಕೆಲವೊಮ್ಮೆ ವಿಮ ಪಾಲಿಸಿಯನ್ನು ಮಾಡಿಸಿಕೊಂಡಿದ್ದರು ಕೂಡ ಅದು ಪ್ರಯೋಜನಕ್ಕೆ ಬರುವುದಿಲ್ಲ. ಕಾರಣ ಕೆಲವು ಆಸ್ಪತ್ರೆಗಳು ವಿಮಾ ಕಂಪನಿಗಳೊಂದಿಗೆ ಪಾಲುದಾರಿಕೆ ಪಡೆಯದೇ ಇದ್ದರೆ ಅಂತಹ ಆಸ್ಪತ್ರೆಯಲ್ಲಿ ವಿಮಾ ಪಾಲಿಸಿಯ ಸೌಲಭ್ಯ ದೊರಕುವುದಿಲ್ಲ. ಇದೀಗ ಭಾರತೀಯ ವೈದ್ಯಕೀಯ ಉದ್ಯಮದಲ್ಲಿ ಹೊಸ ಬದಲಾವಣೆಯನ್ನು ತರಲಾಗಿದೆ. ಈ ಬದಲಾವಣೆಯು ಕೋಟ್ಯಾಂತರ ಜನರಿಗೆ ಸಹಾಯವಾಗಲಿದೆ. ನಿಮ್ಮ ಅನಾರೋಗ್ಯದ ಸಮಯದಲ್ಲಿ ಈ ಹೊಸ ಬದಲಾವಣೆ ನಿಮ್ಮ ಸಹಾಯಕ್ಕೆ ಬರಲಿದೆ.

ಇನ್ಮುಂದೆ ಯಾವುದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೆ ಕ್ಯಾಶ್ ಕೊಡುವ ಅಗತ್ಯ ಇಲ್ಲ
ಪ್ರಸ್ತುತ ವಿಮಾ ಪಾಲಿಸಿ ನಿಯಮದಲ್ಲಿ ಬಹುದೊಡ್ಡ ಬದಲಾವಣೆ ತರಲಾಗಿದೆ. ಈ ಹಿಂದೆ ವಿಮಾ ಕಂಪನಿಯ ನೆಟ್ ವರ್ಕ್ ನಲ್ಲಿರುವ ಆಸ್ಪತ್ರೆಗಳಲ್ಲಿ ಮಾತ್ರ ಪಾಲಿಸಿದಾರರು ನಗದು ರಹಿತ ಸೌಲಭ್ಯವನ್ನು ಪಡೆಯಬಹುದಿತ್ತು. ವಿಮಾ ಕಂಪನಿಗಳೊಂದಿಗೆ ಪಾಲುದಾರಿಕೆ ಹೊಂದಿರದ ಆಸ್ಪತ್ರೆಗಳಲ್ಲಿ ಚಿಕೆತ್ಸೆಗಾಗಿ ಪಾಲಿಸಿದಾರನು ತನ್ನ ಸ್ವಂತ ಹಣವನ್ನು ಖರ್ಚು ಮಾಡಬೇಕಿತ್ತು.

ಸದ್ಯ ಈ ನಿಯಮದಲ್ಲಿ ಬದಲಾವಣೆ ತರಲಾಗಿದ್ದು, ಕ್ಯಾಶ್ ಲೆಸ್ ಎವೆರಿವೆರ್ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯ ಅಡಿಯಲ್ಲಿ ಪಾಲಿಸಿದಾರರು ಇನ್ನುಮುಂದೆ ತಮ್ಮ ಆಯ್ಕೆಯ ಯಾವುದೇ ಆಸ್ಪತ್ರೆಯಲ್ಲಿ ನಗದು ರಹಿತ ಚಿಕಿತ್ಸೆಯನ್ನು ಪಡೆಯಬಹುದು.

Cashless treatment available in all hospitals
Image Credit: Medicaldialogues

ಇನ್ಮುಂದೆ ಎಲ್ಲಾ ಆಸ್ಪತ್ರೆಯಲ್ಲಿ ಕ್ಯಾಶ್ ಲೆಸ್ ಟ್ರೀಟ್ಮೆಂಟ್ ಲಭ್ಯ
General Insurance Council (GIC) ಸಾಮಾನ್ಯ ಮತ್ತು ಆರೋಗ್ಯ ವಿಮಾ ಕಂಪನಿಗಳೊಂದಿಗೆ ಸಮಾಲೋಚಿಸಿ ಎಲ್ಲಾ ಆಸ್ಪತ್ರೆಗಳಲ್ಲಿ ನಗದು ರಹಿತ ಚಿಕಿತ್ಸೆಯನ್ನು ವಿಸ್ತರಿಸಲು ‘ಎಲ್ಲೆಡೆ ನಗದು ರಹಿತ’ ಉಪಕ್ರಮವನ್ನು ಪ್ರಾರಂಭಿಸಿದೆ. ಜನವರಿ 2024 ರಿಂದ ಎಲ್ಲಾ ಆಸ್ಪತ್ರೆಗಳಲ್ಲಿ ನಗದು ರಹಿತ ಚಿಕಿತ್ಸಾ ಸೌಲಭ್ಯ ಲಭ್ಯವಾಗಲಿದೆ. ಈ ಸೌಲಭ್ಯದ ನಂತರ ಪಾಲಿಸಿದಾರನು ವಿಮಾ ಕಂಪನಿಯ ನೆಟ್ ವರ್ಕ್ಇಲ್ಲದಿರುವ ಆಸ್ಪತ್ರೆಗಳಲ್ಲಿಯೂ ನಗದು ರಹಿತ ಸೌಲಭ್ಯವನ್ನು ಪಡೆಯಬಹುದು.

Join Nadunudi News WhatsApp Group

Join Nadunudi News WhatsApp Group