Cauvery Protest: ಕಾವೇರಿ ವಿಚಾರವಾಗಿ ಕರ್ನಾಟಕಕ್ಕೆ ಮತ್ತೆ ಮಹಾಮೋಸ, ಇನ್ನೊಂದು ಆದೇಶ ನೀಡಿದ CWRC.

ಕಾವೇರಿ ವಿಚಾರವಾಗಿ ಕರ್ನಾಟಕಕ್ಕೆ ಮತ್ತೆ ಮಹಾಮೋಸ.

Cauvery Protest In Karnataka: ಕರ್ನಾಟಕದಲ್ಲಿ ಕಾವೇರಿ ನೀರಿನ (Cauvery Water) ಹೋರಾಟ ದೊಡ್ಡ ಮಟ್ಟದಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ. ಕಾವೇರಿ ನೀರಿಗಾಗಿ ರೈತರು ಹೋರಾಡುತ್ತಿದ್ದಾರೆ. ಕಾವೇರಿ ಹೋರಾಟದ ಕಾರಣ ಇಂದು ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಬಂದ್ ಕೂಡ ನಡೆಸಲಾಗಿತ್ತು.

ಸಾಕಷ್ಟು ಅಂಗಡಿ, ಹೋಟೆಲ್, ಕಚೇರಿಗಳು ಎಲವೂ ಕೂಡ ಬಂಧ್ ಆಗಿದ್ದವು. ರಾಜ್ಯದ ಲಕ್ಷಾಂತರ ಜನರು ಬಂದ್ ಗೆ ಬೆಂಬಲ ನೀಡಿದರೆ ಇನ್ನಿಷ್ಟು ಜನರು ಬಂದ್ ಅನ್ನು ವಿರೀದಿಸಿದ್ದರು. ಸದ್ಯ ಬೆಂಗಳೂರು ಬಂದ್ ನ ನಡುವೆಯೇ ಕರ್ನಾಟಕ ಜನತೆಗೆ ಮತ್ತೊಂದು ಶಾಕಿಂಗ್ ಸುದ್ದಿ ಎದುರಾಗಿದೆ.

Kaveri Protest In Karnataka
Image Credit: Indianexpress

ಕಾವೇರಿ ವಿಚಾರವಾಗಿ ಕರ್ನಾಟಕ್ಕೆ ಮತ್ತೆ ಶಾಕ್
ಬಂದ್ ನಡೆದ ಹಿನ್ನಲೆ ಇಂದು ದೆಹಲಿಯಲ್ಲಿ Cauvery Water Regulation Committee (CWRC) ಮಹತ್ವದ ಸಭೆ ನಡೆಸಿದೆ. ಈ ಸಭೆಯಲ್ಲಿ ತಮಿಳುನಾಡಿಗೆ 3000 ಕ್ಯೂಸೆಕ್ ನೀರು ಬಿಡಲು ಕರ್ನಾಟಕಕ್ಕೆ CWRC ಆದೇಶ ಹೊರಡಿಸಿದೆ. ಈ ಮೂಲಕ ಕರ್ನಾಟಕ ಜನರಿಗೆ CWRC ಶಾಕ್ ನೀಡಿದೆ. ಕರ್ನಾಟಕದಲ್ಲಿ ತಮಿಳುನಾಡಿಗೆ ನೀರು ಬಿಡುವುದನ್ನು ವಿರೋಧಿಸುತ್ತಿದ್ದರು ಕೂಡ ಈ ಆದೇಶ ಬಂದಿರುವ ಎಲ್ಲರಿಗು ಅಚ್ಚರಿ ಮೂಡಿಸಿದೆ. CWRC ನ ಈ ಆದೇಶದ ವಿರುದ್ಧ ಕರ್ನಾಟಕ ಜನತೆ ಕಿಡಿ ಕಾರುತ್ತಿದ್ದಾರೆ.

ಪ್ರತಿದಿನ 12500 ಕ್ಯೂಸೆಕ್ ನೀರು ಬಿಡಲು ಹೇಳಿದ ತಮಿಳುನಾಡು
ಸಭೆಯಲ್ಲಿ ತಮಿಳುನಾಡು ಪ್ರತಿದಿನ 12500 ಕ್ಯೂಸೆಕ್ ನೀರು ಬಿಡಬೇಕು ಎಂದು ವಾದಿಸಿದೆ. ಜೂನ್ ನಿಂದ ಸೆಪ್ಟೆಂಬರ್ ವರೆಗೆ 123 TMC ನೀರು ಕರಿಸಬೇಕಿತ್ತು. ಆದರೆ ಕರ್ನಾಟಕ ಕೇವಲ 40 TMC ನೀರು ಮಾತ್ರ ಹರಿಸಿದೆ. ಬಾಕಿ 83 TMC ನೀರು ಕೂಡಲೇ ಬಿಡುಗಡೆ ಮಾಡುವಂತೆ ತಮಿಳುನಾಡು ಆಗ್ರಹಿಸಿದೆ.

Kaveri Protest latest update
Image Credit: Indiatoday

ರಾಜ್ಯದ ಜಲಾಶಯಗಳಿಂದ ಯಾವುದೇ ಹರಿವನ್ನು ಅಂತಾರಾಜ್ಯಕ್ಕೆ ನೀಡಲಾಗುವುದಿಲ್ಲ ಎಂದು ಕರ್ನಾಟಕ ಪಟ್ಟು ಹಿಡಿದಿದೆ. ಕಾವೇರಿ ಹರಿವಿಕೆಯ ಬಗ್ಗೆ ಕರ್ನಾಟಕ ತೀವ್ರ ವಿರೋಧದ ನಡುವೆಯೇ Septembar 28 ರಿಂದ ತಮಿಳುನಾಡಿಗೆ 3000 ಕ್ಯೂಸೆಕ್ ನೀರು ಬಿಡಲು ಕರ್ನಾಟಕಕ್ಕೆ CWRC ಆದೇಶ ಹೊರಡಿಸಿದೆ. ಇನ್ನು ರಾಜ್ಯದಲ್ಲಿ ಕಾವೇರಿಯ ಕಿಚ್ಚು ಎಷ್ಟರ ಮಟ್ಟಿಗೆ ಹರಡಲಿದೆ ಎನ್ನುವ ಬಗ್ಗೆ ಎಲ್ಲರು ಚಿಂತಿಸುವಂತಾಗಿದೆ.

Join Nadunudi News WhatsApp Group

Join Nadunudi News WhatsApp Group