CCA Implement: ಚುನಾವಣೆಗೂ ಮುನ್ನವೇ BJP ಸರ್ಕಾರದಿಂದ ಇನ್ನೊಂದು ಮಾಸ್ಟರ್ ಪ್ಲ್ಯಾನ್, CAA ಜಾರಿಗೆ ಸಿದ್ಧತೆ

ಚುನಾವಣೆಗೂ ಮುನ್ನವೇ CCA ಜಾರಿಗೆ ತರಲು BJP ಸರ್ಕಾರದ ಸಿದ್ಧತೆ

CCA Implement: 2024 ರಲ್ಲಿ ಲೋಕಸಭಾ ಚುನಾವಣೆ ಆರಂಭವಾಗಲಿದೆ. ಈಗಾಗಲೇ ರಾಜಕೀಯ ಪಕ್ಷಗಳು ಚುನವಣಾ ಸಿದ್ಧತೆ ನಡೆಸಿತ್ತಿದೆ. ಲೋಕಸಭಾ ಚುನಾವಣೆಗೂ ಮುಂಚಿತವಾಗಿ ವಿವಿಧ ಯೋಜನೆಯನ್ನು ಸರ್ಕಾರ ಪರಿಚಯಿಸುತ್ತಿದೆ. ಸದ್ಯ ಚುನಾವಣೆಗೂ ಮುನ್ನವೇ BJP ಸರ್ಕಾರದಿಂದ ಇನ್ನೊಂದು ಮಾಸ್ಟರ್ ಪ್ಲ್ಯಾನ್ ರೆಡಿಯಾಗುತ್ತಿದೆ. BJP ಸರ್ಕಾರ CCA ಜಾರಿ ಮಾಡುವ ಬಗ್ಗೆ ಚಿಂತನೆ ನಡೆಸುತ್ತಿದೆ.

Prime Minister Narendra Modi Latest News
Image Credit: India Today

ಚುನಾವಣೆಗೂ ಮುನ್ನವೇ BJP ಸರ್ಕಾರದಿಂದ ಇನ್ನೊಂದು ಮಾಸ್ಟರ್ ಪ್ಲ್ಯಾನ್
2019 ರಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿದ CAA ಕಾನೂನಿನ ಅಡಿಯಲ್ಲಿ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದಿಂದ ಡಿಸೆಂಬರ್ 31, 2014 ಕ್ಕಿಂತ ಮೊದಲು ಭಾರತಕ್ಕೆ ಆಗಮಿಸಿದ ಮತ್ತು ಆರು ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಭಾರತದಲ್ಲಿ ವಾಸಿಸುತ್ತಿರುವ ಮುಸ್ಲಿಮೇತರರು ಭಾರತೀಯ ಪೌರತ್ವವನ್ನು ಪಡೆಯುವುದು CCA ಕಾನೂನಾಗಿದೆ. ಸದ್ಯ BJP ಸರ್ಕಾರ ಈ CAA ಕಾನೂನಿನ ಕುರಿತು ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.

CCA ಜಾರಿಗೆ ಸಿದ್ಧತೆ ನಡೆಸುತ್ತಿದೆ BJP ಸರ್ಕಾರ
CCA ಅಂದರೆ ಪೌರತ್ವ ತಿದ್ದುಪಡಿ ಕಾಯ್ದೆಯ ಕುರಿತು ಶೀಘ್ರವೇ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸರ್ಕಾರ ಹೇಳಿಕೆ ನೀಡಿದೆ. ಲೋಕಸಭಾ ಚುನಾವಣೆಗೂ ಮುನ್ನವೇ ಈ ಕುರಿತು ಅಧಿಸೂಚನೆ ನಿಡಲಾಗುತ್ತದೆ. ಲೋಕಸಭೆ ಚುನಾವಣೆ ಘೋಷಣೆಯಾಗುವ ಮುನ್ನವೇ ಸಿಎಎಗೆ ಸಂಬಂಧಿಸಿದ ನಿಯಮಗಳನ್ನು ಸರಕಾರ ಹೊರಡಿಸಲಿದೆ ಎಂದು ಗೃಹ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

CAA Implemented In India
Image Credit: The Times Of India

ಪೌರತ್ವ (ತಿದ್ದುಪಡಿ) ಕಾಯ್ದೆಯ ಅನುಷ್ಠಾನವನ್ನು ಯಾರೂ ತಡೆಯಲು ಸಾಧ್ಯವಿಲ್ಲ, ಏಕೆಂದರೆ ಇದು ದೇಶದ ಕಾನೂನು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಅಷ್ಟೇ ಅಲ್ಲ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈ ವಿಚಾರದಲ್ಲಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

Join Nadunudi News WhatsApp Group

Join Nadunudi News WhatsApp Group