Phone Pe Voice ಫೋನ್ ಪೆ ಬಳಸುವ ಕನ್ನಡಿಗರಿಗೆ ಕಿಚ್ಚನಿಂದ ಗುಡ್ ನ್ಯೂಸ್, ಇನ್ಮುಂದೆ ನಿಮ್ಮ ಫೋನ್ ಪೆ ನಲ್ಲಿ ಕಿಚ್ಚ

ಇನ್ನುಮುಂದೆ ಬಳಕೆದಾರರು ಕಿಚ್ಚನ ಧ್ವನಿಯನ್ನು ಫೋನ್ ಪೆ ಸ್ವೀಕರ್ ಗಳಲ್ಲಿ ಆನಂದಿಸಬಹುದಾಗಿದೆ.

Celebrities Voice Feature In PhonePe: ದೇಶದ ಜನಪ್ರಿಯ Online Payment ಅಪ್ಲಿಕೇಶನ್ ಆಗಿರುವ PhonePe ಅತಿ ಹೆಚ್ಚು ಬಳಕೆದಾರರನ್ನು ಹೊಂದಿದೆ ಎನ್ನಬಹುದು. ಇನ್ನು ದೇಶದಲ್ಲಿ Paytm ವಹಿವಾಟಿನ ಮೇಲೆ RBI ನಿರ್ಬಂಧವನ್ನು ಹೇರಿದ ಮೇಲೆ PhonePe ಬಳಕೆದಾರರ ಸಂಖ್ಯೆ ಹೆಚ್ಚುತ್ತಾ ಬಂದಿದೆ.

ಇನ್ನು PhonePe ತನ್ನ ಬಳಕೆದಾರರಿಗೆ ಹೊಸ ಹೊಸ ಫೀಚರ್ ಅನ್ನು ನೀಡುವ ಮೂಲಕ ಇನ್ನಷ್ಟು ಜನರನ್ನು ತನ್ನತ್ತ ಸೆಳೆದುಕೊಂಡಿದೆ. ಸದ್ಯ PhonePe ತನ್ನ ಬಳಕೆದಾರರಿಗೆ ವಿಶೇಷ ಫೀಚರ್ ಅನ್ನು ನೀಡುವ ಮೂಲಕ ಬಳಕೆದಾರರ ಅನುಭವನ್ನು ಇನ್ನಷ್ಟು ಹೆಚ್ಚಿಸಲಿದೆ.

Phonepe Latest News Update
Image Credit: Financial Express

ಫೋನ್ ಪೆ ಸ್ಪೀಕರ್ ನಲ್ಲಿ ಕೇಳಿಬರಲಿದೆ ಕಿಚ್ಚನ ಧ್ವನಿ
ಸದ್ಯ PhonePe ತನ್ನ ಬಳಕೆದಾರರಿಗೆ ವಿಶೇಷ ಫೀಚರ್ ಅನ್ನು ನೀಡಲು ಮುಂದಾಗಿದ್ದು, PhonePe Smart Speaker ನಲ್ಲಿ Celebrities Voice Feature ಅನ್ನು ತರಲು ನಿರ್ಧರಿಸಿದೆ. ಹೌದು, ದೇಶದ ಪ್ರಮುಖ ನಟರಾದ Mammootty, Mahesh Babu, Kiccha Sudeep ಅವರ ಧ್ವನಿಯನ್ನು PhonePe Smart Speaker ನಲ್ಲಿ ತರಲು ನಿರ್ಧರಿಸಿದೆ.

ಈ ಹಿಂದೆ ಫೋನ್ ಪೆ ಸ್ಪೀಕರ್ ನಲ್ಲಿ ಖ್ಯಾತ ಬಾಲಿವುಡ್ ನಂತರದ ಅಮಿತಾಬ್ ಬಚ್ಚನ್ ಅವರ ದ್ವನಿ ಬಳಸಲಾಗಿತ್ತು. ಕೆಲವೊಂದು ಕಡೆ ಈಗ್ಲೂ ಕೂಡ ಅಮಿತಾಬ್ ಅವರ ದ್ವನಿಯಲ್ಲಿ ಸ್ಪೀಕರ್ ಗಳು ಕಾರ್ಯನಿರ್ವಹಿಸುತ್ತಿದೆ. ಸದ್ಯ ಆಯಾ ಪ್ರದೇಶಕ್ಕೆ ಅನುಗುಣವಾಗಿ ಅಲ್ಲಿನ ಜನಪ್ರಿಯ ನಾಯಕರ ವಾಯ್ಸ್ ಅನ್ನು ಫೋನ್ ಪೆ ಸ್ಪೀಕರ್ ನಲ್ಲಿ ಬಳಸಲು ನಿರ್ಧರಿಸಲಾಗಿದೆ. ಕೇರಳ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣದ ಪ್ರದೇಶದಲ್ಲಿ ಬಳಕೆದಾರರಿಗೆ ಹೆಚ್ಚಿನ ಅನುಭವನ್ನು ನೀಡಲು ಈ Celebrities Voice Feature ಅನ್ನು ತರಲು ನಿರ್ಧರಿಸಲಾಗಿದೆ.

Celebrities Voice Feature In PhonePe
Image Credit: Onlinemediacafe

Celebrities Voice Feature
ಫೋನ್‌ ಪೇನ್ ಸ್ಮಾರ್ಟ್‌ ಸ್ಪೀಕರ್ ದೇಶಾದ್ಯಂತ 90% ಪೋಸ್ಟಲ್ ಕೋಡ್‌ ಗಳನ್ನು ಒಳಗೊಂಡಿರುವ ವ್ಯಾಪಾರಿ ಪಾಲುದಾರರಿಂದ ನಿಯೋಜಿಸಲಾದ 4.8 ಮಿಲಿಯನ್ ಸಾಧನಗಳನ್ನು ಹೊಂದಿದೆ. ವೈವಿಧ್ಯಮಯ ಪ್ರದೇಶಗಳ ಪ್ರಸಿದ್ಧ ಧ್ವನಿಗಳನ್ನು ಸಂಯೋಜಿಸುವುದು ಗ್ರಾಹಕರು ಮತ್ತು ವ್ಯಾಪಾರಿಗಳಿಗೆ ಸಂವಾದಾತ್ಮಕ ಪಾವತಿ ಅನುಭವವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.

Join Nadunudi News WhatsApp Group

ಪ್ರತಿಯೊಂದೂ ಪಾವತಿ ಮೌಲ್ಯೀಕರಣಕ್ಕಾಗಿ ತನ್ನದೇ ಆದ ವಿಶಿಷ್ಟ ಭಾಷೆಯ ಅವಶ್ಯಕತೆಗಳನ್ನು ಹೊಂದಿದೆ. ವಿವಿಧ ಹೆಸರಾಂತ ಸೆಲೆಬ್ರಿಟಿಗಳೊಂದಿಗೆ ಪಾಲುದಾರಿಕೆ ಮಾಡುವ ಮೂಲಕ, ನಮ್ಮ ಗ್ರಾಹಕರ ವೈವಿಧ್ಯಮಯ ಅಗತ್ಯಗಳನ್ನು ಸೃಜನಾತ್ಮಕವಾಗಿ ಪೂರೈಸಲು ನಾವು ನಮ್ಮ ಸೇವೆಗಳನ್ನು ಅಳವಡಿಸಿಕೊಳ್ಳುತ್ತಿದ್ದೇವೆ ಎಂದು ಫೋನ್ ಪೆ ಮಾರ್ಚನಿಂತ್ ಯುವರಾಜ್ ಸಿಂಗ್ ಶೆಖಾವತ್ ಮಾಹಿತಿ ನೀಡಿದ್ದಾರೆ. ಇನ್ನುಮುಂದೆ ಬಳಕೆದಾರರು ಕಿಚ್ಚನ ಧ್ವನಿಯನ್ನು ಫೋನ್ ಪೆ ಸ್ವೀಕರ್ ಗಳಲ್ಲಿ ಆನಂದಿಸಬಹುದಾಗಿದೆ.

Join Nadunudi News WhatsApp Group