Cement Price: ಹೊಸ ಮನೆ ಕಟ್ಟುವವರಿಗೆ ಬೇಸರದ ಸುದ್ದಿ, ಪ್ರತಿ ಚೀಲದ ಸಿಮೆಂಟ್ ಮೇಲೆ ಇಷ್ಟು ಬೆಲೆ ಏರಿಕೆ.

ಮನೆ ನಿರ್ಮಾಣಕ್ಕೆ ಬೇಕಾಗುವ ಅಗತ್ಯ ವಸ್ತುಗಳ ಬೆಲೆಯಲ್ಲಿ ಏರಿಕೆ.

Cement Price Hike: ಪ್ರಸ್ತುತ ಎಲ್ಲ ವಸ್ತುಗಳ ಬೆಲೆ ಕೂಡ ಏರಿಕೆಯಾಗುತ್ತಿದೆ. ಜನರು ಈಗಾಗಲೇ ಹಣದುಬ್ಬರತೆಯ ಪರಿಸ್ಥಿಯನ್ನು ಎದುರಿಸುತ್ತಿದ್ದು, ದಿನೇ ದಿನೇ ಒಂದಲ್ಲ ಒಂದು ವಸ್ತುವಿನ ಬೆಲೆ ಮತ್ತೆ ಏರಿಕೆಯಾಗುತ್ತಿದೆ. ಸಾಮಾನ್ಯವಾಗಿ ಮನೆ ನಿರ್ಮಾಣದ ಕನಸನ್ನು ಎಲರೂ ಕಾಣುತ್ತರೆ. ಆದರೆ ಹೊಸ ಮನೆ ಕಟ್ಟುವುದು ಅಷ್ಟು ಸುಲಭದ ಮಾತಲ್ಲ. ಮನೆ ನಿರ್ಮಾಣಕ್ಕೆ ದೊಡ್ಡ ಬಜೆಟ್ ನ ಅಗತ್ಯವಿರುತ್ತದೆ.

ಇನ್ನು ಈ ಹಣದ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಜನರು ಹೋಮ್ ಲೋನ್ ಅನ್ನು ಪಡೆಯುತ್ತಾರೆ. ಮನೆ ನಿರ್ಮಾಣದ ಜವಾಬಿದ್ರಿಯ ಜೊತೆಗೆ ಹೋಂ ಲೋನ್ EMI ಕೊಡ ಕಟ್ಟುವುದು ದೂಡ ಸಮಸ್ಯೆಯಾಗಿರುತ್ತದೆ. ಇದೀಗ ಈ ಸಮಸ್ಯೆಯ ಜೊತೆಗೆ ಮನೆ ನಿರ್ಮಾಣಕ್ಕೆ ಬೇಕಾಗುವ ಅಗತ್ಯ ವಸ್ತುಗಳ ಬೆಲೆ ಕೂಡ ಏರಿಕೆಯಾಗುತ್ತಿದೆ. ಮನೆ ಕಟ್ಟುವುದು ಇನ್ನುಮುಂದೆ ಇನ್ನಷ್ಟು ಕಷ್ಟವಾಗಲಿದೆ.

Cement Price Hike
Image Credit: The Hindu Business Line

ಹೊಸ ಮನೆ ಕಟ್ಟುವವರಿಗೆ ಬೇಸರದ ಸುದ್ದಿ
ಏಪ್ರಿಲ್ 2 ರಂದು ಸಿಮೆಂಟ್ ಕಂಪನಿಗಳು ದೇಶದಾದ್ಯಂತ ಪ್ರತಿ ಚೀಲಕ್ಕೆ ಸರಾಸರಿ 10 ರಿಂದ 15 ರೂಪಾಯಿಗಳ ಬೆಲೆಯನ್ನು ಹೆಚ್ಚಿಸಿವೆ ಎಂದು ವರದಿಗಳು ಹೇಳುತ್ತಿವೆ. ಬೆಲೆ ಹೆಚ್ಚಿಸಿದ ಕಾರಣ ಸಿಮೆಂಟ್ ಷೇರುಗಳು ಲಾಭ ಗಳಿಸಿದವು. ಅಲ್ಟ್ರಾಟೆಕ್ ಸಿಮೆಂಟ್, ಶ್ರೀ ಸಿಮೆಂಟ್ಸ್, ಅಂಬುಜಾ ಸಿಮೆಂಟ್ಸ್, ಎಸಿಸಿ ಮತ್ತು ದಾಲ್ಮಿಯಾ ಭಾರತ್ ಷೇರುಗಳು ಶೇಕಡಾ 1 ರಿಂದ 3 ರಷ್ಟು ಲಾಭದೊಂದಿಗೆ ಮುಕ್ತಾಯಗೊಂಡವು.

ಪ್ರತಿ ಚೀಲದ ಸಿಮೆಂಟ್ ಮೇಲೆ ಇಷ್ಟು ಬೆಲೆ ಏರಿಕೆ
ವಿವಿಧ ಪ್ರದೇಶಗಳಲ್ಲಿನ ಸಿಮೆಂಟ್ ಕಂಪನಿಗಳು ಉತ್ತರದಲ್ಲಿ ಚೀಲಕ್ಕೆ 10-15 ರಿಂದ ಮಧ್ಯ ಮತ್ತು ಪೂರ್ವದಲ್ಲಿ ಪ್ರತಿ ಚೀಲಕ್ಕೆ 40 ರೂ.ವರೆಗೆ ಬೆಲೆ ಏರಿಕೆಯನ್ನು ಘೋಷಿಸಿವೆ. ಆದರೆ, ವಿತರಕರು ಪ್ರತಿ ಚೀಲಕ್ಕೆ 10 ರಿಂದ 20 ರೂ.ಗಳ ಹೆಚ್ಚಳವನ್ನು ನಿರೀಕ್ಷಿಸುತ್ತಾರೆ. ಪಶ್ಚಿಮದಲ್ಲಿ ಕಂಪನಿಗಳು ಪ್ರತಿ ಚೀಲಕ್ಕೆ 20 ರೂ. ಹೆಚ್ಚಳವಾಗಲಿದೆ. ಮಾರ್ಚ್‌ ನಲ್ಲಿ ಲೋಕಸಭೆ ಚುನಾವಣೆಯ ಕಾರಣ ದಾಸ್ತಾನು, ಹೋಳಿ ಮತ್ತು ಕಾರ್ಮಿಕರ ಕೊರತೆಯಂತಹ ಅಂಶಗಳು ಏಪ್ರಿಲ್‌ ನಲ್ಲಿ ಸಿಮೆಂಟ್ ಬೇಡಿಕೆಯ ಮೇಲೆ ಪರಿಣಾಮ ಬೀರಬಹುದು. ಘೋಷಿತ ಬೆಲೆ ಏರಿಕೆ ಮುಂದುವರಿಯಲಿದೆಯೇ ಎಂಬ ಬಗ್ಗೆ ವಿತರಕರು ಜಾಗರೂಕರಾಗಿದ್ದಾರೆ ಎಂದು ವಿಶ್ಲೇಷಕರು ಹೇಳಿದ್ದಾರೆ.

Cement Price Hike News
Image Credit: Times Now News

Join Nadunudi News WhatsApp Group

Join Nadunudi News WhatsApp Group