Free Electricity: ಕೇಂದ್ರ ಸರ್ಕಾರದ ಬಹುದೊಡ್ಡ ಘೋಷಣೆ, ಕಾಂಗ್ರೆಸ್ ಗೃಹ ಜ್ಯೋತಿ ಯೋಜನೆಯ ಬೆನ್ನಲ್ಲೇ ಇನ್ನೊಂದು ಸ್ಕೀಮ್

ಕಾಂಗ್ರೆಸ್ ಸರ್ಕಾರ ಗೃಹ ಜ್ಯೋತಿ ಯೋಜನೆಗೆ ಠಕ್ಕರ್ ನೀಡಲು ಕೇಂದ್ರದ ಹೊಸ ಪ್ಲಾನ್, ಪ್ರತಿ ತಿಂಗಳು 300 ಯುನಿಟ್ ಉಚಿತ ವಿದ್ಯುತ್.

Central Government 300 Unit Free Electricity: ಸತತ ಆರನೇ ಬಾರಿಗೆ ನಿರ್ಮಲ ಸೀತಾರಾಮನ್ (Nirmala Sitharaman) ಅವರು ಬಜೆಟ್ ಘೋಷಣೆ ಮಾಡಿದ್ದಾರೆ. ಈ ಮಧ್ಯಂತರ ಬಜೆಟ್ ಲೋಕಸಭಾ ಚುನಾವಣೆಯ ನಂತರ ಹೊಸ ಸರ್ಕಾರ ರಚನೆ ಆಗುವವರೆಗೂ ಹಣಕಾಸಿನ ಅಗತ್ಯಗಳನ್ನು ನೋಡುಕೊಳ್ಳುತ್ತದೆ. ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಸಾಕಷ್ಟು ಬದಲಾವಣೆ ತರಲು ನಿರ್ಧರಿಸಿದೆ.

central government electricity scheme
Image Credit: Original Source

2024 ಬಜೆಟ್ ನಲ್ಲಿ ಉಚಿತ ಗ್ಯಾರಂಟಿಯ ಸುರಿಮಳೆ…!
ಈ ಹಿಂದೆ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್ ಸರ್ಕಾರ ಉಚಿತ ಗ್ಯಾರಂಟಿ ಯೋಜನೆಗಳನ್ನು ಘೋಷಿಸುವ ಮೂಲಕ ಅಧಿಕಾರವನ್ನು ಪಡೆದುಕೊಂಡಿರುವುದನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್ ಬಾರಿ ಉಚಿತ ಯೋಜನೆಯನ್ನು ಘೋಷಿಸಿದೆ. ಸದ್ಯ ಈ ಬಾರಿಯ ಬಜೆಟ್ ನಲ್ಲಿ ಕಾಂಗ್ರೆಸ್ ಸರ್ಕಾರ ಗೃಹ ಜ್ಯೋತಿ ಯೋಜನೆಗೆ ಠಕ್ಕರ್ ನೀಡುವಂತ ಯೋಜನೆಯನ್ನು ಕೇಂದ್ರ ಸರ್ಕಾರ ತನ್ನ ಬಜೆಟ್ ನಲ್ಲಿ ಘೋಷಿಸಿದೆ.

ಕಾಂಗ್ರೆಸ್ ಸರ್ಕಾರ ಗೃಹ ಜ್ಯೋತಿ ಯೋಜನೆಗೆ ಠಕ್ಕರ್ ನೀಡಲು ಕೇಂದ್ರದ ಹೊಸ ಪ್ಲಾನ್
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ಪಡೆಯಲು ಗೃಹ ಜ್ಯೋತಿ ಯೋಜನೆಯ ಉಚಿತ ವಿದ್ಯುತ್ ಕೂಡ ಒಂದಾಗಿದೆ. ಕರ್ನಾಟಕದಲ್ಲಿ ಮಾತ್ರವಲ್ಲದೆ ತೆಲಂಗಾಣದಲ್ಲಿ ಕೂಡ ಕಾಂಗ್ರೆಸ್ ಸರ್ಕಾರ ಉಚಿತ ಗ್ಯಾರಂಟಿ ಯೋಜನೆಗಳ ಮೂಲಕ ಅಧಿಕಾರವನ್ನು ಪಡೆದುಕೊಂಡಿದೆ. ಇದೀಗ ಕೇಂದ್ರ ಸರ್ಕಾರ ತನ್ನ ಬಜೆಟ್ ನಲ್ಲಿ ಉಚಿತ ಗ್ಯಾರಂಟಿಯನ್ನೇ ಅಸ್ತ್ರವನ್ನಾಗಿಸಿಕೊಂಡು ರಾಜ್ಯ ಸರ್ಕಾರದ ಉಚಿತ ವಿದ್ಯುತ್ ಯೋಜನೆಗೆ ಠಕ್ಕರ್ ನೀಡಲು ಹೊಸ ಯೋಜನೆಯನ್ನು ಘೋಷಿಸಿದೆ.

central government electricity scheme update
Image Credit: Original Source

ಪ್ರತಿ ತಿಂಗಳು 300 ಯುನಿಟ್ ಉಚಿತ ವಿದ್ಯುತ್
ಸದ್ಯ ಫೆ. 1 ರಂದು ಘೋಷಿಸಲಾದ ಮಧ್ಯಂತರ ಬಜೆಟ್ ನಲ್ಲಿ ಒಂದು ಕೋಟಿ ಮನೆಗಳಿಗೆ ಪ್ರತಿ ತಿಂಗಳು 300 ಯುನಿಟ್ ಉಚಿತ ವಿದ್ಯುತ್ ಅನ್ನು ನೀಡುವುದಾಗಿ ಬಜೆಟ್ ನಲ್ಲಿ ಘೋಷಣೆ ಹೊರಡಿಸಿದೆ. ಈ ಉಚಿತ ವಿದ್ಯುತ್ ಘೋಷಣೆಯ ಮೂಲಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಲೋಕಸಭಾ ಚುನಾವಣೆಯಲ್ಲಿ ಜಯ ಸಾಧಿಸಲು ಬಿಜೆಪಿ ಸರ್ಕಾರ ಯೋಜನೆ ಹೂಡಿದೆ. ಇನ್ನು ಉಚಿತ ವಿದ್ಯುತ್ ನ ಜೊತೆಗೆ ಮುಂದಿನ ಐದು ವರ್ಷಗಲ್ಲಿ ಎರಡು ಕೋಟಿ ಬಡವರಿಗೆ ಮನೆ ನಿರ್ಮಿಸಿ ಕೊಡಲಾಗುವುದು ಎಂದು ವಿತ್ತ ಸಚಿವೆ ನಿರ್ಮಲ ಸೀತಾರಾಮ ಅವರು ಹೇಳಿಕೆ ನೀಡಿದ್ದಾರೆ.

Join Nadunudi News WhatsApp Group

Join Nadunudi News WhatsApp Group