8th Pay Commission: ನೌಕರರ 8ನೇ ವೇತನ ಯಾವಾಗ ಜಾರಿಗೆ ಬರಲಿದೆ, ಕೇಂದ್ರದಿಂದ ಬಂತು ಸ್ಪಷ್ಟನೆ.

8 ನೇ ವೇತನ ಯಾವಾಗ ಜಾರಿಗೆ ಬರಲಿದೆ ಅನ್ನುವುದರ ಬಗ್ಗೆ ಕೇಂದ್ರ ಸರ್ಕಾರ ಈಗ ಸ್ಪಷ್ಟನೆಯನ್ನ ನೀಡಿದೆ.

8th Pay Commission Implement: ಪ್ರಸ್ತುತ ಸರ್ಕಾರಿ ನೌಕರರು 7 ನೇ ವೇತನ ಆಯೋಗ (7th Pay Commission) ಅಡಿಯಲ್ಲಿ ವೇತನ ಅಪಡೆಯುತ್ತಿದ್ದಾರೆ. ಇತ್ತೀಚಿಗೆ ಸರ್ಕಾರಿ ನೌಕರರ ವೇತನದ ವಿಷಯಗಳು ಸಾಕಷ್ಟು ಹರಿದಾಡುತ್ತಿವೆ.

ಸರ್ಕಾರಿ ನೌಕರರಿಗೆ ವೇತನದ ವಿಷಯವಾಗಿ ಸಿಹಿ ಸುದ್ದಿಗಳು ಸಿಗುತ್ತಲೇ ಇದೆ. ಈಗಾಗಲೇ ಕೇಂದ್ರ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳದ ಜೊತೆಗೆ ಮಾಸಿಕ ತಿಂಗಳ ವೇತನದಲ್ಲಿ ಕೂಡ ಹೆಚ್ಚಳ ಮಾಡಿತ್ತು.

ಇದೀಗ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. 8 ನೇ ವೇತನ ಆಯೋಗದ (8th Pay Commission) ಕುರಿತು ಮಾಹಿತಿ ಹೊರಬಿದ್ದಿದೆ. ಸರ್ಕಾರಿ ನೌಕರರಿಗೆ ಶೀಘ್ರವೇ 8ನೇ ವೇತನ ಆಯೋಗ ಜಾರಿಗೊಳಿಸುವಂತೆ ಮೋದಿ ಸರ್ಕಾರ ಚಿಂತನೆ ನಡೆಸಿದೆ.

The central government has given information about the implementation of the 8th salary.
Image Credit: onmanorama

ಸರ್ಕಾರಿ ನೌಕರರ 8ನೇ ವೇತನದ ಕುರಿತು ಮಾಹಿತಿ
8 ನೇ ವೇತನ ಆಯೋಗ ರಚನೆಗೆ ನರೇಂದ್ರ ಮೋದಿ (Narendra Modi) ಸರ್ಕಾರ ಈಗಾಗಲೇ ಸೂಚನೆ ನೀಡಿದ್ದಾರೆ ಎನ್ನಲಾಗುತ್ತಿದೆ. 2024 ರ ಅಂತ್ಯದ ವೇಳೆಯಲ್ಲಿ 8ನೇ ವೇತನ ಆಯೋಗ ರಚನೆಯಾಗಲಿದೆ. 2016 ರಲ್ಲಿ 7 ನೇ ವೇತನ ಆಯೋಗ ರಚನೆಯಾಗಿತ್ತು. ಪ್ರತಿ 10 ವರ್ಷಗಳ ನಂತರ ಹೊಸ ವೇತನ ಆಯೋಗ ರಚನೆಯಾಗಲಿದೆ.

8 ನೇ ವೇತನದಲ್ಲಿ ಶೇ. 44.44 ಹೆಚ್ಚಳ ಸಾಧ್ಯತೆ
2025 ರ ಅಂತ್ಯದಲ್ಲಿ ಅಥವಾ 2026 ರ ಆರಂಭದಲ್ಲಿ 8 ನೇ ವೇತನ ಆಯೋಗ ಜಾರಿಗೆ ಬರಲಿದೆ. 8 ನೇ ವೇತನ ಆಯೋಗವು ನೌಕರರ ವೇತನವನ್ನು ಇನ್ನಷ್ಟು ಹೆಚ್ಚಿಸಲಿದೆ. ಫಿಟ್ ಮೆಂಟ್ ಅಂಶವು 3.68 ಪಟ್ಟು ಹೆಚ್ಚಳ ಸಂಭವನೀಯ ಇದೆ. ವೇತನ ಹೆಚ್ಚಳ 44.44 %, ಕನಿಷ್ಠ ವೇತನ ರೂ. 26000 ಸಾಧ್ಯತೆ ಇದೆ ಎನ್ನಲಾಗುತ್ತಿದೆ.

Join Nadunudi News WhatsApp Group

The central government has clarified that the 8th wage will be implemented in the country by the end of 2024.
Image Credit: pragativadi

ಜುಲೈ ನಲ್ಲಿ ತುಟ್ಟಿಭತ್ಯೆ ಮತ್ತೆ ಹೆಚ್ಚಳ
ಜನವರಿ 1, 2023 ರಿಂದ ತುಟ್ಟಿ ಭತ್ಯೆಯಲ್ಲಿ ಶೇ. 42 ರಷ್ಟು ಹೆಚ್ಚಳವಾಗಿದೆ. ಇನ್ನು ಜುಲೈ ನಲ್ಲಿ ಮತ್ತೆ ಸರ್ಕಾರಿ ನೌಕರರ ತುಟ್ಟಿಭತ್ಯೆ ಹೆಚ್ಚಾಗಲಿದೆ. ಶೇ. 42 ಕ್ಕೆ ತಲುಪಿರುವ ತುಟ್ಟಿಭತ್ಯೆ ಜುಲೈ ನಲ್ಲಿ 46% ತಲುಪಲಿದೆ.

Join Nadunudi News WhatsApp Group