Free Ration And Drone: ಮೋದಿ ಸರ್ಕಾರದಿಂದ ಜನರಿಗೆ ಹೊಸ ವರ್ಷದ ಗಿಫ್ಟ್, ಉಚಿತ ಅಕ್ಕಿ ಜೊತೆಗೆ ಉಚಿತ ಡ್ರೋನ್.

ಮೋದಿ ಸರ್ಕಾರದಿಂದ ಜನರಿಗೆ ಎರಡು ಬಂಪರ್ ಕೊಡುಗೆ.

Central Govt Free Ration And Drone Scheme: ದೇಶದಲ್ಲಿ ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ನಾನಾ ಯೋಜನೆಗಳು ಜನರಿಗೆ ಲಭ್ಯವಾಗುತ್ತಿದೆ. ದೇಶದ ಬಡ ಜನರ ಅನುಕೂಲಕ್ಕಾಗಿ ಮೋದಿ ಸರ್ಕಾರ ವಿವಿಧ ಯೋಜನೆಗಳನ್ನು ಪರಿಚಯಿಸಿದೆ.

ಆರ್ಥಿಕವಾಗಿ ಹಿಂದುಳಿದವರಿಗೆ ಹೆಚ್ಚಿನ ಸೌಲಭ್ಯವನ್ನು ಒದಗಿಸುತ್ತಾ ಹಣಕಾಸಿನ ನೆರವು ನೀಡಲು ಮೋದಿ ಸರ್ಕಾರ ಮುಂದಾಗಿದೆ. ಸದ್ಯ ಮೋದಿ ಸರ್ಕಾರ ದೇಶದ ಜನತೆಗೆ ಎರಡು ಹೊಸ ಯೋಜನೆಯನ್ನು ಪರಿಚಯಿಸುತ್ತಾ ಹೊಸ ವರ್ಷಕ್ಕೆ ಬಂಪರ್ ಗಿಫ್ಟ್ ನೀಡಿದೆ. ದೇಶದ ಬಡ ಜನರು ಮೋದಿ ಸರ್ಕಾರ ಉಚಿತ ಯೋಜನೆಗಳ ಲಾಭವನ್ನು ಪಡೆಯಬಹುದಾಗಿದೆ.

PM Modi Govt Scheme
Image Credit: News 18

ಮೋದಿ ಸರ್ಕಾರದಿಂದ ಜನರಿಗೆ ಹೊಸ ವರ್ಷದ ಗಿಫ್ಟ್
ಇದೀಗ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಹೊಸ ವರ್ಷಕ್ಕೆ ದೇಶದ ಜನತೆಗೆ ಭರ್ಜರಿ ಸಿಹಿ ಸುದ್ದಿ ನೀಡಿದ್ದಾರೆ. ಬಡವರಿಗೆ ಆಹಾರದ ಖಾದತಿ ಮತ್ತು ಮಹಿಳೆಯರಿಗೆ ಆದಾಯದ ಹೊಸ ಮೂಲ ಸೃಷ್ಟಿಸುವ ಎರಡು ಬಂಪರ್ ಕೊಡುಗೆಗಳನ್ನು ಮೋದಿ ಸರ್ಕಾರ ಘೋಷಿಸಿದೆ. ದೇಶದ 15000 ಸ್ತ್ರೀಶಕ್ತಿ ಸಂಘಗಳಿಗೆ ಸಹಾಯಧನ ನೀಡಲು ಹೊಸ ಯೋಜಾನೆಯನ್ನೇ ಕೇಂದ್ರ ಸರ್ಕಾರ ರೂಪಿಸಿದೆ. ಮಹಿಳೆಯರ ಆದಾಯದ ಮೂಲವನ್ನು ಹೆಚ್ಚಿಸಲು 15000 ಸ್ತ್ರೀಶಕ್ತಿ ಸಂಘಗಳಿಗೆ ಕೃಷಿ ಡ್ರೋನ್ ಒದಗಿಸುವ ಯೋಜನೆಗೆ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.

Central Govt Scheme
Image Credit: Jagranjosh

ಕೇಂದ್ರದ ಉಚಿತ ಪಡಿತರ ವಿತರಣೆ ಇನ್ನೂ 5 ವರ್ಷ ವಿಸ್ತರಣೆ
ದೇಶದಲ್ಲಿ 2020 ರಲ್ಲಿ Pradhan Mantri Garib Kalyan Yojana (PMGKY) ಪ್ರಾರಂಭವಾಗಿದೆ. ಈ ಯೋಜನೆಯಡಿ ದೇಶದ ಬಡ ಜನರು ಉಚಿತವಾಗಿ 5KG ಅಕ್ಕಿಯನ್ನು ಪಡೆಯುತ್ತಿದ್ದಾರೆ. ಸದ್ಯ ಕೇಂದ್ರದ ಮೋದಿ ಸರ್ಕಾರ ಮುಂಬರುವ ಲೋಕಸಭಾ ಚುನಾವಣೆಗೂ ಮುನ್ನ ಬಡವರಿಗಾಗಿ ಹೊಸ ಘೋಷಣೆ ಹೊರಡಿಸಿದೆ. ಈ ಹಿಂದೆ PMGKY ಯೋಜನೆಯಡಿ ವಿತರಿಸಲಾಗುತ್ತಿದ್ದ ಉಚಿತ 5kg ಪಡಿತರ ವಿತರಣೆ ಇನ್ನು ಮುಂದಿನ 5 ವರ್ಷ ವಿಸ್ತರಣೆ ಆಗಲಿದೆ ಎಂದು ಮೋದಿ ಸರ್ಕಾರ ಘೋಷಣೆ ಹೊರಡಿಸಿದೆ. ಮುಂದಿನ 5 ವರ್ಷಗಳ ಕಾಲ 80 ಕೋಟಿಗೂ ಹೆಚ್ಚು ಜನರಿಗೆ ಉಚಿತವಾಗಿ 5KG ಅಕ್ಕಿ ನೀಡಲು ಸರ್ಕಾರ ನಿರ್ಧರಿಸಿದೆ.

Join Nadunudi News WhatsApp Group

Join Nadunudi News WhatsApp Group