ಮದುವೆಯಾದ ಒಂದೇ ವಾರಕ್ಕೆ ಆಸ್ಪತ್ರೆ ಸೇರಿಕೊಂಡ ಚೈತ್ರ ಕೊಟ್ಟೂರು, ಬೆಳಿಗ್ಗೆ ಆಗಿದ್ದೇನು ಗೊತ್ತಾ.

ಚೈತ್ರ ಕೊಟ್ಟೂರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಕೆಲವು ಚಿತ್ರಗಳಲ್ಲಿ ನಟನೆಯನ್ನ ಮಾಡಿದ ನಟಿ ಚೈತ್ರ ಕೊಟ್ಟೂರು ಅವರು ರಾಜ್ಯದಲ್ಲಿ ಕೆಲವು ಅಭಿಮಾನಿಗಳನ್ನ ಕೂಡ ಹೊಂದಿದ್ದಾರೆ ಎಂದು ಹೇಳಬಹುದು. ಇನ್ನು ಚೈತ್ರ ಕೊಟ್ಟೂರು ಅವರಿಗೆ ಹೆಚ್ಚಿನ ಅಭಿಮಾನಿಗಳು ಹುಟ್ಟಿಕೊಂಡಿದ್ದು ಅಂದರೆ ಅದು ಬಿಗ್ ಬಾಸ್ ಶೋ ಮೂಲಕ ಎಂದು ಹೇಳಬಹುದು. ಹೌದು ಕಳೆದ ಬಾರಿ ಬಿಗ್ ಬಾಸ್ ನಲ್ಲಿ ಕಾಣಿಸಿಕೊಂಡಿದ್ದ ಚೈತ್ರ ಕೊಟ್ಟೂರು ಅವರು ಉತ್ತಮವಾಗಿ ಆಟವನ್ನ ಕೂಡ ಆಡಿದ್ದರು, ಆದರೆ ಕೊನೆಯ ಕೆಲವು ದಿನಗಳಲ್ಲಿ ಜನರ ವೋಟ್ ಕಡಿಮೆ ಬಿದ್ದ ಕಾರಣ ಚೈತ್ರ ಕೊಟ್ಟೂರು ಅವರು ಬಿಗ್ ಬಾಸ್ ಮನೆಯಿಂದ ಹೊರಗೆ ಬರಬೇಕಾಯಿತು ಎಂದು ಹೇಳಬಹುದು.

ಇನ್ನು ಬಿಗ್ ಬಾಸ್ ಮನೆಯಿಂದ ಹೊರಗೆ ಬಂದನಂತರ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಕತ್ ಸುದ್ದಿಯಲ್ಲಿ ಇದ್ದರು ನಟಿ ಚೈತ್ರ ಕೊಟ್ಟೂರು ಅವರು. ಇನ್ನು ಕಳೆದ ಕೆಲವು ದಿನಗಳ ಬಹಳ ನಿಗೂಢವಾಗಿ ಮದುವೆಯನ್ನ ಮಾಡಿಕೊಂಡಿದ್ದ ಚೈತ್ರ ಕೊಟ್ಟೂರು ಅವರು ಸಾಮಾಜಿಕ ಜಾಲತಾಣದಲ್ಲಿ ಸಕತ್ ಸುದ್ದಿಯಲ್ಲಿ ಇದ್ದಿದ್ದರು ಎಂದು ಹೇಳಬಹುದು. ಹೌದು ಚೈತ್ರ ಕೊಟ್ಟೂರು ಅವರು ಬೆಂಗಳೂರಿನ ದೇವಸ್ಥಾನದಲ್ಲಿ ಮಂಡ್ಯ ಮೂಲದ ನಾಗಾರ್ಜುನ್ ಅನ್ನುವವರನ್ನ ಮದುವೆಯಾಗಿದ್ದರು ಮತ್ತು ಈ ಮದುವೆಯ ನಡೆದ ಸಂಜೆಗೆ ಪೋಲೀಸಿಫ್ ಠಾಣೆಯ ಮೆಟ್ಟಿಲನ್ನ ಕೂಡ ಏರಿದ್ದರು ಚೈತ್ರ ಕೊಟ್ಟೂರು ಅವರು. ನಾಗಾರ್ಜುನ್ ಅವರು ಚೈತ್ರ ಕೊಟ್ಟೂರು ಅವರ ಜೊತೆ ನನಗೆ ಬಲವಂತವಾಗಿ ಮದುವೆಯನ್ನ ಮಾಡಲಾಗಿದೆ ನಮಗೆ ಮತ್ತು ನನ್ನ ಕುಟುಂಬದವರಿಗೆ ಈ ಮದುವೆ ಇಷ್ಟವಿರಲಿಲ್ಲ ಎಂದು ಮದುವೆ ನಡೆದ ಸಂಜೆ ಪೊಲೀಸ್ ಠಾಣೆಯ ಮೆಟ್ಟಿಲನ್ನ ಏರಿದ್ದರು.

Chaitra Kotturu in Hospital

ಸದ್ಯ ಈ ಸುದ್ದಿ ಇನ್ನು ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಈ ಮದ್ಯೆ ಚೈತ್ರ ಕೊಟ್ಟೂರು ಅವರು ಪ್ರಾಣ ಕಳೆದುಕೊಳ್ಳಲು ಪ್ರಯತ್ನ ಮಾಡಿ ಇಂದು ಬೆಳಿಗ್ಗೆ ಆಸ್ಪತ್ರೆಯನ್ನ ಸೇರಿದ್ದಾರೆ. ಹಾಗಾದರೆ ಚೈತ್ರ ಕೊಟ್ಟೂರು ಅವರು ಈ ನಿರ್ಧಾರವನ್ನ ತೆಗೆದುಕೊಳ್ಳಲು ಕಾರಣ ಏನು ಮತ್ತು ಬೆಳಿಗ್ಗೆ ಆಗಿದ್ದೇನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಮದುವೆ ನಡೆದ ಸಂಜೆ ನಾಗಾರ್ಜುನ್ ಅವರು ಪೊಲೀಸ್ ಠಾಣೆಯ ಮೆಟ್ಟಿಲನ್ನ ಏರಿದ ಕಾರಣ ನಾಗಾರ್ಜುನ್ ತನ್ನ ಪೋಷಕರೊಂದಿಗೆ ವಾಪಸ್​ ಆಗಿದ್ದರು.

ನವವಧುವಾಗಿ ಕಂಗೊಳಿಸಬೇಕಿದ್ದ ಚೈತ್ರಾ ತನ್ನ ಪೋಷಕರೊಂದಿಗೆ ಕೋಲಾರದ ಮನೆಯಲ್ಲಿದ್ದರು. ಈ ಮಧ್ಯೆ ನಾಗಾರ್ಜುನ್​ ಮತ್ತು ಚೈತ್ರಾ ನಡುವಿನ ಪ್ರೀತಿ ಸಂಕೇತದ ಹಲವು‌ ವಿಡಿಯೋ ಮತ್ತು ಪೋಟೋಗಳನ್ನು ಚೈತ್ರಾ ಹಂಚಿಕೊಂಡಿದ್ದರು. ಇನ್ನು ವಿವಾದ ಬಗೆಹರಿಯುವ ಮುನ್ನವೇ ಇಂದು ಬೆಳಿಗ್ಗೆ ಚೈತ್ರ ಕೊಟ್ಟೂರು ಅವರು ಪ್ರಾಣ ಕಳೆದುಕೊಳ್ಳುವ ನಿರ್ಧಾರ ಮಾಡಿದ್ದೂ ಕುಟುಂಬದವರು ಆಸ್ಪತ್ರೆಗೆ ಸೇರಿಸಿದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ನೇಹಿತರೆ ಚೈತ್ರ ಕೊಟ್ಟೂರು ಅವರ ಈ ದುಡುಕಿನ ನಿರ್ಧಾರದ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group

Chaitra Kotturu in Hospital

Join Nadunudi News WhatsApp Group