Chandan And Nivedita: ಚಂದನ್ ಶೆಟ್ಟಿ ಮತ್ತು ವಿವೇಧಿತಾ ಬಾಳಲ್ಲಿ ಬಂದಿದ್ದು ಯಾರು…? ವಿಚ್ಛೇಧನಕ್ಕೆ ಇದೆ ಅಸಲಿ ಕಾರಣ.

ಚಂದನ್ ಶೆಟ್ಟಿ ಮತ್ತು ವಿವೇಧಿತಾ ವಿಚ್ಚೇದನಕ್ಕೆ ಇದೆ ಅಸಲಿ ಕಾರಣ

Chandan And Nivedita Gowda Divorce: ಇತ್ತೀಚಿನ ದಿನಗಳಲ್ಲಿ ಸೆಲೆಬ್ರೆಟಿಗಳ ವಿಚ್ಛೇದನದ ವಿಷಯ ಆಗಾಗ ವೈರಲ್ ಆಗುತ್ತಾ ಇರುತ್ತದೆ. ಅನೇಕ ಬಾರಿ ಸುಲು ಸುದ್ದಿಗಳು ವೈರಲ್ ಆಗಿರುವ ಉದಾಹರಣೆ ಇದೆ. ಈಗಂತೂ ವಿಚ್ಛೇದನ ಸುದ್ದಿಯ ಬಗ್ಗೆ ಅವರೇ ಸ್ಪಷ್ಟನೆ ನೀಡುವವರೆಗೆ ಯಾವುದೇ ಸುದ್ದಿಯನ್ನು ಅಷ್ಟು ಬೇಗ ನಂಬುವಂತಿಲ್ಲ. ಆದರೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಈ ಜೋಡಿಯ ವಿಚ್ಛೇದನದ ಬಗ್ಗೆ ಸುದ್ದಿ ವೈರಲ್ ಆಗುತ್ತಿದ್ದಂತೆ ಸ್ವತಃ ಇವರೇ ತಮ್ಮ ವಿಚ್ಛೇದನದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

Chandan Shetty And Niveditha Gowda
Image Credit: Outlookindia

ಬಿಗ್ ಬಾಸ್ ಜೋಡಿಯ ವಿಚ್ಛೇದನ…!
ಚಂದನವನದ ಕ್ಯೂಟ್ ಕಪಲ್ ಆದ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಡಿವೋರ್ಸ್ ಪಡೆಯುತ್ತಿರುವುದು ಸದ್ಯದ ಹಾಟ್ ಟಾಪಿಕ್ ಆಗಿದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಬಿಗ್ ಬಾಸ್ ಜೋಡಿಯ ವಿಚ್ಛೇದನದ ಬಗ್ಗೆ ಸುದ್ದಿ ವೈರಲ್ ಆಗುತ್ತಿದೆ. ದಿಢೀರ್ ವಿಚ್ಛೇದನದ ಹಿಂದಿನ ಕಾರಣವೇನು..? ಎನ್ನುವುದು ಸದ್ಯದ ಕುತೂಹಲವಾಗಿದೆ. ಅಷ್ಟಕ್ಕೂ ಈ ಇಬ್ಬರ ಡೈವೋರ್ಸ್ ಗೆ ಇದೆ ಕಾರಣ ಎನ್ನುವ ಬಗ್ಗೆ ಕೂಡ ಮಾಹಿತಿ ಕೇಳಿಬರುತ್ತಿದೆ.

ಚಂದನ್ ಶೆಟ್ಟಿ ಮತ್ತು ವಿವೇಧಿತಾ ಬಾಳಲ್ಲಿ ಬಂದಿದ್ದು ಯಾರು…?
ಇನ್ನು ಬಿಗ್ ಬಾಸ್ ಮೂಲಕ ಪರಿಚಯವಾದ ಚಂದನ್ ಶೆಟ್ಟಿ ನಿವೇದಿತಾ ಗೌಡ ಫೆಬ್ರವರಿ 26 2020 ರಲ್ಲಿ ತಮ್ಮ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯ ಬಳಿಕ ಈ ಜೋಡಿ ಬೆಸ್ಟ್ ಕಪಲ್ ಆಗಿ ಕಾಣಿಸಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಜೋಡಿಗೆ ಸಾಕಷ್ಟು ಫ್ಯಾನ್ಸ್ ಕೂಡ ಇದ್ದರು. ಇನ್ನು ಚಂದನ್ ಪತ್ನಿ ನಿವೇದಿತಾ ಸೋಶಿಯಲ್ ಸ್ಟಾರ್ ಆಗಿ ಹೆಚ್ಚು ಫೇಮಸ್ ಆಗಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಇಬ್ಬರು ಜೊತೆಗಿನ ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುತ್ತ ಇರುತ್ತಾರೆ. ಹೀಗಿರುವಾಗ ಈ ಜೋಡಿ ದಿಢೀರ್ ವಿಚ್ಛೇದನ ಘೋಷಣೆ ಮಾಡಿರುವುದು ಎಲ್ಲರು ಅಚ್ಚರಿ ಪಡುವಂತಾಗಿದೆ.

Chandan And Niveditha Gowda Divorce
Image Credit: Oneindia

ವಿಚ್ಛೇಧನಕ್ಕೆ ಇದೆ ಅಸಲಿ ಕಾರಣ
ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ದಾಂಪತ್ಯದಲ್ಲಿ ಬಿರುಕು ಉಂಟಾಗಿದ್ದು, ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನಕ್ಕಾಗಿ ಕಿರುತೆರೆ ಜೋಡಿ ಚಂದನ್ ಶೆಟ್ಟಿ ನಿವೇದಿತಾ ಗೌಡ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ.

ಅಷ್ಟಕು ವಿಚ್ಛೇದನಕ್ಕೆ ಕಾರಣ ಏನು ಎನ್ನುವ ಬಗ್ಗೆ ಈವರೆಗೆ ಮಾಹಿತಿ ಲಭಿಸಿಲ್ಲ. ಆದರೂ ನಿವೇದಿತಾ ಗೌಡ ಅವರಿಗಿದ್ದ ಸೋಶಿಯಲ್ ಮೀಡಿಯಾ ಕ್ರೇಜ್ ವಿಚ್ಛೇದನಕೆ ಕಾರಣವಾಗಿದೆ ಎನ್ನಲಾಗುತ್ತಿದೆ. ನಟಿ ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಸಮಯ ಕಳೆಯುತ್ತಿರುವುದು ವಿಚ್ಛೇದನದ ಹಿಂದಿನ ಅಸಲಿ ಕಾರಣ ಎನ್ನುವ ಬಗ್ಗೆ ಮಾತುಗಳು ಕೇಳಿ ಬರುತ್ತಿದೆ.

Join Nadunudi News WhatsApp Group

Chandan And Niveditha Latest News
Image Credit: Zee News

Join Nadunudi News WhatsApp Group